ಉಪ್ಪಿನಂಗಡಿ: ಗಾಂಜಾ ಸೇವನೆ – ಆರೋಪಿಯ ಬಂಧನ

0

ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಇಳಂತಿಲ ಗ್ರಾಮದ ಕಡವಿನಬಾಗಿಲು ಎಂಬಲ್ಲಿ ಮಾದಕ ದ್ರವ್ಯ ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಮಾದಕ ದ್ರವ್ಯ ಸಹಿತ ಬಂಧಿಸಿದ ಘಟನೆ ವರದಿಯಾಗಿದೆ.

ಬೆಳ್ತಂಗಡಿ ನ್ಯಾಯಾಲಯದ ವಾರೆಂಟ್ ಆದೇಶದನ್ವಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಯಿಸಿಕೊಂಡಿದ್ದ ಕಡವಿನಬಾಗಿಲು ನಿವಾಸಿ ಅಬ್ದುಲ್ ಕುಂಞಿ ಎಂಬವರ ಮಗ ಮೊಹಮ್ಮದ್ ಝಿಯಾದ್(24) ಎಂಬಾತನನ್ನು ದಸ್ತಗಿರಿ ಮಾಡಲೆಂದು ಹೋದ ಪೊಲೀಸರೊಂದಿಗೆ ಆತ ಮಾದಕ ದ್ರವ್ಯ ಸೇವಿಸಿ ಅನುಚಿತವಾಗಿ ವರ್ತಿಸಿದ್ದನೆನ್ನಲಾಗಿದೆ.

ಈತನನ್ನು ವಿಚಾರಣೆಗೆ ಒಳಪಡಿಸಿದಾಗ, ತಾನು ವಾರದ ಹಿಂದೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಕೆ.ಎಸ್. ಅಬ್ದುಲ್ ಹಮೀದ್ ಎಂಬವರ ಮಗ ಮಹಮ್ಮದ್ ನೌಶಾದ್ ಎಂಬಾತನಿಂದ 7,500 ರೂ ತೆತ್ತು 15 ಗ್ರಾಮ್ ಗಾಂಜಾವನ್ನು ಖರೀದಿಸಿರುವುದಾಗಿ ತಿಳಿಸಿರುತ್ತಾನೆ. ಆತನನ್ನು ಶೋಧನೆಗೆ ಒಳಪಡಿಸಿದಾಗ ಆತನಲ್ಲಿ 10.33 ಗ್ರಾಮ್ ತೂಕದ ಗಾಂಜಾ ಪತ್ತೆಯಾಗಿದೆ .

ಈ ಕಾರಣಕ್ಕೆ ಅಕ್ರಮ ಗಾಂಜಾ ಸಾಗಾಟ ಮತ್ತು ಮಾರಾಟ ಆರೋಪದಡಿ ಇಬ್ಬರ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here