ಎಸ್‌ಐಆರ್ ಪ್ರಕ್ರಿಯೆ : ಪುತ್ತೂರಿನಲ್ಲಿ 19 ಮಂದಿ ಹೆಚ್ಚುವರಿ ಸಹಾಯಕ ಮತದಾರರ ನೋಂದಾವಣಾಧಿಕಾರಿಗಳ ನೇಮಕ

0

ಪುತ್ತೂರು:ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್-2026) ಪ್ರಕ್ರಿಯೆಯನ್ನು ಸುಗಮಗೊಳಿಸಲು ಮತ್ತು ಮತದಾರರ ದಾಖಲೆಗಳ ಪರಿಶೀಲನೆಯನ್ನು ಚುರುಕುಗೊಳಿಸಲು ರಾಜ್ಯದಾದ್ಯಂತ ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಽಸಿದಂತೆ ಒಟ್ಟು 19 ಮಂದಿ ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.


ವಿಟ್ಲ ಪಟ್ಟಣ ಪಂಚಾಯತ್‌ಗೆ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಕರುಣಾಕರ, ಇಡ್ಕಿದು ಹಾಗೂ ಕೆದಿಲ ಗ್ರಾ.ಪಂಗೆ ಬಂಟ್ವಾಳ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುಬ್ರಹ್ಮಣ್ಯ ಪ್ರಸಾದ್, ಪೆರ್ನೆ,ಅಳಿಕೆ,ಪೆರುವಾಯಿ ಗ್ರಾ.ಪಂಗೆ ಮೆಸ್ಕಾಂ ಪುತ್ತೂರು ಗ್ರಾಮಾಂತರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಶಂಕರ್, ಮಾಣಿಲ, ಕೇಪು, ಪುಣಚ, ವಿಟ್ಲ ಮುಡ್ನೂರು, ಬಲ್ನಾಡು ಗ್ರಾ.ಪಂ.ಗೆ ಜಿ.ಪಂ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಇಂಜಿನಿಯರ್ ಜಾಗೃತಿ ಕೆ.ಎಂ., 34 ನೆಕ್ಕಿಲಾಡಿ, ಕೋಡಿಂಬಾಡಿ, ಹಿರೇಬಂಡಾಡಿ ಗ್ರಾ.ಪಂಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜೇಶ್ ರೈ, ಉಪ್ಪಿನಂಗಡಿ, ಬಜತ್ತೂರು, ಕೆದಂಬಾಡಿ ಗ್ರಾ.ಪಂಗೆ ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ನವೀನ್ ಭಂಡಾರಿ ಹೆಚ್., ಬನ್ನೂರು ಗ್ರಾ.ಪಂಗೆ ತಾ.ಪಂ ಯೋಜನಾಧಿಕಾರಿ ಶೋಭಾ ಎನ್.ಎಸ್., ಕಬಕ, ಕುಡಿಪ್ಪಾಡಿ ಗ್ರಾ.ಪಂಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸುರೇಶ್, ನಗರ ಸಭೆಗೆ ನಗರ ಸಭೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಾದ ಕೃಷ್ಣಮೂರ್ತಿ, ಶಬರೀನಾಥ್, ಅಕೌಂಟೆಂಟ್ ರಾಮಚಂದ್ರ, ಕ್ಷೇತ್ರ ಸಮನ್ವಯಾಧಿಕಾರಿ ನವೀನ್ ಸ್ಟಿಫನ್ ವೇಗಸ್, ಪಾಣಾಜೆ ಹಾಗೂ ಆರ್ಯಾಪು ಗ್ರಾ.ಪಂಗೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ, ನರಿಮೊಗರು ಗ್ರಾ,ಪಂಗೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸುನೀತಾ ಕುಮಾರಿ, ಮುಂಡೂರು ಗ್ರಾ.ಪಂಗೆ ತೋಟಗಾರಿಕೆ ಇಲಾಖೆಯ ಶಿವಪ್ರಕಾಶ್, ಒಳಮೊಗರು ಹಾಗೂ ಬೆಟ್ಟಂಪಾಡಿ ಗ್ರಾ.ಪಂಗೆ ಮೆಸ್ಕಾಂನ ಅಕೌಂಟೆಂಟ್ ನಾರಾಯಣ ಶೆಣೈ, ಬಡಗನ್ನೂರು ಹಾಗೂ ನೆಟ್ಟಣಿಗೆ ಮುಡ್ನೂರು ಗ್ರಾ.ಪಂಗೆ ರಘು ಎಸ್.ಎಂ., ಅರಿಯಡ್ಕ ಗ್ರಾ.ಪಂಗೆ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ರೇಖಾ ಎ., ಕೆಯ್ಯೂರು ಹಾಗೂ ನಿಡ್ಪಳ್ಳಿ ಗ್ರಾ.ಪಂಗೆ ಪಿಎಂಸಿಎಸ್‌ವೈನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚೇತನ್ ಕುಮಾರ್ ಅವರನ್ನು ನೇಮಕಗೊಳಿಸಿ ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ.


ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳು 2002ರ ಎಸ್‌ಐಆರ್ ಮತಪಟ್ಟಿಯೊಂದಿಗೆ ಜೋಡಣೆಯಾಗದ ಮತದಾರರು ನೋಟಿಸ್ ವಿಚಾರಣೆ ವೇಳೆ ನೀಡುವ ದಾಖಲೆಗಳನ್ನು ಪರಿಶೀಲಿಸುವ ಕಾರ್ಯ ನಡೆಸಲಿದ್ದಾರೆ.ಎಸ್‌ಐಆರ್ ಪ್ರಕ್ರಿಯೆಯಲ್ಲಿ ತಾರ್ಕಿಕ ವ್ಯತ್ಯಾಸಗಳು (ಅನಾಮಲಿಸ್) ಮತ್ತು 2002ರ ಪಟ್ಟಿ ತಾಳೆ ಆಗದಿರುವ (ನೋ-ಮ್ಯಾಪಿಂಗ್) ಕಾರಣಗಳಿಂದಾಗಿ ನೋಟಿಸ್ ಪಡೆದಿರುವ ಮತದಾರರ ವಿಚಾರಣೆಯನ್ನು ಸ್ಥಳೀಯ ಮಟ್ಟದಲ್ಲೇ ನಡೆಸುವುದು, ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ಮತದಾರರು ಸಲ್ಲಿಸುವ ಚುನಾವಣಾ ಆಯೋಗದ ನಿಗದಿತ 12 ದಾಖಲೆಗಳನ್ನು ಸೂಕ್ತವಾಗಿ ಪರಿಶೀಲಿಸಿ ಅರ್ಹತೆಯನ್ನು ನಿರ್ಧರಿಸುವುದು. ಪ್ರತಿ ಮತದಾರರ ನೋಂದಣಾಧಿಕಾರಿ ವ್ಯಾಪ್ತಿಯಲ್ಲಿ 5ರಿಂದ 15 ಸಹಾಯಕ ಅಽಕಾರಿಗಳು ಲಭ್ಯವಿರುವುದರಿಂದ, ಸಾರ್ವಜನಿಕರು ದೂರದ ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ. ಪ್ರಸ್ತುತ ಈ ಎಲ್ಲಾ ನಿಯೋಜಿತ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲಾಗಿದ್ದು, ಕರಡು ಮತದಾರರ ಪಟ್ಟಿ ಪ್ರಕಟಣೆಯ ನಂತರ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಹಂತದಲ್ಲಿ ಇವರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

12,332 ಮಂದಿಗೆ ನೊಟೀಸ್ ಜಾರಿ
ಮತದಾರರ ಕರಡು ಪಟ್ಟಿಯು ಆ.24ರಂದು ಬಿಡುಗಡೆಗೊಂಡಿದೆ.ಇದರಂತೆ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ 2002 ಮತದಾರರ ಪಟ್ಟಿಗೆ ಮ್ಯಾಪಿಂಗ್ ಆಗದ ಹಾಗೂ ಹೆಸರು, ವಿಳಾಸ ವ್ಯತ್ಯಾಸ ಇರುವ 12,332 ಮಂದಿ ಮತದಾರರನ್ನು ಗುರುತಿಸಲಾಗಿದ್ದು ಅವರಿಗೆಲ್ಲಾ ನೋಟಿಸ್ ಜಾರಿಗೊಳಿಸುವ ಪ್ರಕ್ರಿಯೆಯು ಈಗಾಗಲೇ ಆರಂಭಗೊಂಡಿದೆ.ನೊಟೀಸ್ ಪಡೆದ ಮತದಾರರು ಅದರಲ್ಲಿ ಉಲ್ಲೇಖಿಸಿದ ದಿನಾಂಕ ಮತ್ತು ಸ್ಥಳದಲ್ಲಿ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಂಡು ಸಹಕರಿಸುವಂತೆ ತಾಲೂಕು ಕಚೇರಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here