ಪಾಪೆಮಜಲು ಶಾಲೆಯಲ್ಲಿ ಗ್ರಾಮಾಂತರ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ : ಪಾಪೆಮಜಲು ಶಾಲೆ ತಾಲೂಕು ಮಟ್ಟಕ್ಕೆ

0

ಪುತ್ತೂರು: ಪಾಪೆಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಾಂತರ ವಲಯ ಮಟ್ಟದ 14 ಮತ್ತು 17ರ ವಯೋಮಾನದ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾಟ ನಡೆಯಿತು.

ಸುಮಾರು 38 ತಂಡಗಳು ಭಾಗವಹಿಸಿದ್ದವು. ಪ್ರಗತಿಪರ ಕೃಷಿಕ ವಾಸುಪೂಜಾರಿ ಗುಂಡ್ಯಡ್ಕ ದೀಪ ಬೆಳಗಿಸಿ ಪಂದ್ಯಾಟ ಉದ್ಟಾಟಿಸಿ ಶುಭಹಾರೈಸಿದರು. SDMC ಅಧ್ಯಕ್ಷ ಅಪ್ಪಯ್ಯ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಗಳಾಗಿ ಪಾಪೆಮಜಲು ಸ.ಪ್ರೌಢಶಾಲೆಯ ಮುಖ್ಯಗುರು ಮೋನಪ್ಪ ಎಂ, ಕಾರ್‍ಯಧ್ಯಕ್ಷ ಇಕ್ಬಾಲ್ ಹುಸೇನ್, ಕಾವು ಕ್ಲಸ್ಟರ್ CRP KVLN ಪ್ರಸಾದ್, ಪತ್ರಕರ್ತ ತಿಲಕ್ ರೈ ಕುತ್ಯಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷ ಕುಂಞರಾಮ ಮಣಿಯಾಣಿ, ನಿವೃತ್ತ ASI ಶ್ರೀಧರ ಮಣಿಯಾಣಿ, ದಾನಿಗಳಾದ R.R Construction ಮಾಲಕ ಹರಿಪ್ರಸಾದ್ ಕೌಡಿಚ್ಚಾರ್, ಮುಖ್ಯಗುರು ಶಶಿಕಲ, SDMC ಉಪಾಧ್ಯಕ್ಷೆ ನಯನಾ ಉಪಸ್ಥಿತರಿದ್ದರು.


ಕೈ ತೊಳೆಯುವ ಘಟಕ ಉದ್ಘಾಟನೆ :
ಶಾಲಾ ಹಿರಿಯ ವಿದ್ಯಾರ್ಥಿ R.R Construction ಮಾಲಕ ಹರಿಪ್ರಸಾದ್ ಕೌಡಿಚ್ಚಾರ್‌ರವರು ಶಾಲೆಗೆ ಸುಮಾರು ೮೦,೦೦೦ ರೂ. ವೆಚ್ಚದಲ್ಲಿ ಕೈ ತೊಳೆಯುವ ಘಟಕ ಕೊಡುಗೆಯಾಗಿ ನೀಡಿದ್ದು ಅದರ ಉದ್ಘಾಟನೆ ನಡೆಯಿತು.

ಸನ್ಮಾನ :
ದಾನಿಗಳಾದ ಹರಿಪ್ರಸಾದ್ ಕೌಡಿಚ್ಚಾರ್‌ರವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಶ್ರಮದಾನ ಮಾಡಿದ Sಆಒಅ ಅಧ್ಯಕ್ಷರು ಮತ್ತು ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳನ್ನೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಮಾರೋಪ ಸಮಾರಂಭ :
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು Sಆಒಅ ಅಧ್ಯಕ್ಷ ಅಪ್ಪಯ್ಯ ನಾಯ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ. ನಿವೃತ್ತ ವಿಸ್ತರಣಾಧಿಕಾರಿ ಜಗನ್ನಾಥ ರೈ, ಪುತ್ತೂರು ತಾಲೂಕು ದೈ. ಶಿ. ಪರಿವೀಕ್ಷಣಾಧಿಕಾರಿ ಸಿಲ್ವಿಯಾ ಕ್ಯಾಸ್ತಲಿನೋ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ SDMC ಮಾಜಿ ಅಧ್ಯಕ್ಷ ರವಿದಾಸ್, ಪ್ರೌಢಶಾಲೆಯ ದೈ.ಶಿ. ಶಿಕ್ಷಕ ಪ್ರವೀಣ್ ರೈ, ಬೆಟ್ಟಂಪಾಡಿ ಪ್ರೌಢಶಾಲೆಯ ದೈ.ಶಿ. ಶಿಕ್ಷಕಿ ಚಂದ್ರಕಲಾ, ಮಣಿಕ್ಕರ ಸರಕಾರಿ ಪ್ರೌಢಶಾಲೆಯ ದೈ.ಶಿ. ಶಿಕ್ಷಕ ಕರುಣಾಕರ, ಮುಖ್ಯಗುರು ಶಶಿಕಲ ಎಂ, Sಆಒಅ ಉಪಾಧ್ಯಕ್ಷೆ ನಯನಾ ಉಪಸ್ಥಿತರಿದ್ದರು.

ಫಲಿತಾಂಶ :
14ರ ವಯೋಮಾನದ ಬಾಲಕರ ವಿಭಾಗದಲ್ಲಿ ಪ್ರತಿಭಾ ಪ್ರೌಢಶಾಲೆ ಪಟ್ಟೆ ಪ್ರಥಮ, ಕೆ.ಪಿ.ಎಸ್. ಕುಂಬ್ರ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಸರಕಾರಿ ಪ್ರೌಢಶಾಲೆ ಪಾಪೆಮಜಲು ಪ್ರಥಮ, ಸ.ಹಿ.ಪ್ರಾ. ಶಾಲೆ ಪಾಪೆಮಜಲು ದ್ವಿತೀಯ ಸ್ಥಾನ ಪಡೆದಿದೆ.


17ರ ವಯೋಮಾನ ಬಾಲಕರ ವಿಭಾಗದಲ್ಲಿ ಷೆಣ್ಮುಖದೇವ ಪ್ರೌಢಶಾಲೆ ಪೆರ್ಲಂಪಾಡಿ ಪ್ರಥಮ, ಸರಕಾರಿ ಪ್ರೌಢಶಾಲೆ ನೆಟ್ಟಣಿಗೆ ಮುಡ್ನೂರು ದ್ವಿತೀಯ ಸ್ಥಾನ ಪಡೆದಿದೆ. 17ರ ವಯೋಮಾನ ಬಾಲಕಿಯ ವಿಭಾಗದಲ್ಲಿ ಸರಕಾರಿ ಪ್ರೌಢಶಾಲೆ ಪಾಪೆಮಜಲು ಪ್ರಥಮ, ದ್ವಿತೀಯ ಸರಕಾರಿ ಪ್ರೌಢಶಾಲೆ ಕಾವು ದ್ವಿತೀಯ ಸ್ಥಾನ ಪಡೆದಿದೆ.

LEAVE A REPLY

Please enter your comment!
Please enter your name here