ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸ್ಮೃತಿ ಕೆ ಕರಾಟೆಯಲ್ಲಿ ರಾಜ್ಯ ಮಟ್ಟಕ್ಕೆಆಯ್ಕೆ

0


ಪುತ್ತೂರು:ಸೆ.02 ರಂದು ಕೆ.ಪಿ.ಎಸ್. ಬೆಳ್ಳಾರೆ ಇಲ್ಲಿ ನಡೆದಜಿಲ್ಲಾ ಮಟ್ಟದಕರಾಟೆ ಪಂದ್ಯಾಟದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆ, ಪುತ್ತೂರುಇಲ್ಲಿಯ 10ನೇ ತರಗತಿಯ ಸ್ಮೃತಿ ಕೆ ಒಳಮೊಗ್ರು ಪ್ರವೀಣ್ ಪೂಜಾರಿ ಮತ್ತು ತ್ರಿವೇಣಿ ದಂಪತಿಗಳ ಪುತ್ರಿ ಪ್ರಥಮ ಸ್ಥಾನದೊಂದಿಗೆ ಗೋಲ್ಡ್ ಮೆಡಲ್ ಪಡೆದುಕೊಂಡು ರಾಜ್ಯ ಮಟ್ಟಕ್ಕೆಆಯ್ಕೆಯಾಗಿರುತ್ತಾರೆ.

10ನೇ ತರಗತಿಯ ಲಾವಣ್ಯಾ ಕೆ ನಾಯಕ್ ಮುಂಡೂರಿನ ಲವಕುಮಾರ್ ಮತ್ತು ನಳಿನಾಕ್ಷಿ ನಾಯಕ್‌ರವರ ಪುತ್ರಿ ಹಾಗೂ 9ನೇ ತರಗತಿಯ ಅಭೀಶ್‌ ಎಸ್‌ ರೈ ಕುಂಬ್ರ ಸುಂದರ ರೈ ಮಂದಾರ ಮತ್ತು ಮಲ್ಲಿಕಾ ಎಸ್‌ ರೈ ಯವರ ಪುತ್ರ, 8ನೇ ತರಗತಿಯ ಕುಶಿತ್ ಆರ್ ಎಂ ಬಪ್ಪಳಿಗೆ ಎಂ ರಾಜು ಮತ್ತು ಬಿ ಮೇಘಾ ರವರ ಪುತ್ರ ಹಾಗೂ ಪವಿಶ್ರೀ ಆರ್ ಮುದಲಾಜೆ ರಮೇಶ ಮತ್ತು ಯಶೋಧಾರವರ ಪುತ್ರಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.

ಇವರಿಗೆದೈಹಿಕ ಶಿಕ್ಷಣ ಶಿಕ್ಷಕರಾದ ಅಜಿತ್‌ರವರು ಮಾರ್ಗದರ್ಶನ ನೀಡಿರುತ್ತಾರೆಎಂದು ಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ಹಾಗೂ ಪ್ರಭಾರ ಮುಖ್ಯೋಪಾಧ್ಯಾಯಿನಿಯಾದ ಗಾಯತ್ರಿ ಎಸ್‌ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿ ಅಭಿನಂದನೆ ಸಲ್ಲಿಸಿರುತ್ತಾರೆ.

LEAVE A REPLY

Please enter your comment!
Please enter your name here