







ಪುತ್ತೂರು : ದರ್ಬೆ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಯ ಸರ್ವೆ ಎಂಬಲ್ಲಿ ರೈಲ್ವೆ ಮೇಲ್ ಸೇತುವೆ ಕೆಳಗಡೆ ಭಾರಿ ಗಾತ್ರದ ಅಪಾಯಕಾರಿ ಗುಂಡಿಯೊಂದು ಇದ್ದು, ಈಗಾಗಲೇ ಈ ಗುಂಡಿಗೆ ಕೆಲವು ದ್ವಿಚಕ್ರ ವಾಹನದ ಚಾಲಕರು ಬಿದ್ದಿದ್ದಾರೆ, ಈ ಗುಂಡಿಯಲ್ಲಿ ಮಳೆಗಾಲದಲ್ಲಿ ನೀರು ತುಂಬಿದಾಗ ವಾಹನ ಸವಾರರಿಗೆ ಗುಂಡಿ ಗೋಚರವಾಗುವುದಿಲ್ಲ, ಇಂಥ ಅಪಾಯಕಾರಿ ಗುಂಡಿಗಳ ಬಗ್ಗೆ ತಕ್ಷಣವೇ ಲೋಕೋಪಯೋಗಿ ಇಂಜಿನಿಯರಿಂಗ್ ವಿಭಾಗದವರು ಗಮನ ಹರಿಸಬೇಕಾಗಿ ಸಾರ್ವಜನಿಕರ ಆಗ್ರಹವಾಗಿದೆ.












