ರಾಮಕುಂಜ ಅಮೈ ನಿವಾಸಿ ಹಾಜಿಮ್ಮ ಬೀಫಾತುಮ್ಮ ನಿಧನ

0

ರಾಮಕುಂಜ: ಗ್ರಾಮದ ಅಮೈ ನಿವಾಸಿ, ರಾಮಕುಂಜ ಗ್ರಾ.ಪಂ.ಮಾಜಿ ಸದಸ್ಯ, ಆತೂರು ಮೊಹಿಯುದ್ದೀನ್ ಮಸೀದಿ ಮಾಜಿ ಅಧ್ಯಕ್ಷ ಅಯ್ಯೂಬ್ ಹಾಜಿಯವರ ಪತ್ನಿ ಹಾಜಿಮ್ಮ ಬೀಫಾತುಮ್ಮ (70ವ.) ಅವರು ಹೃದಯಾಘಾತದಿಂದ ಸೆ.5ರಂದು ರಾತ್ರಿ ನಿಧನ ಹೊಂದಿದರು.


ಬೀಫಾತುಮ್ಮರವರು ಅನಾರೋಗ್ಯದಿಂದ ಇದ್ದವರು ಕಳೆದ ಕೆಲ ಸಮಯದಿಂದ ಆರೋಗ್ಯದಿಂದ ಇದ್ದು, ಸೆ.5ರಂದು ರಾತ್ರಿ ಹಠತ್ತಾನೆ ವಾಂತಿ ಆಗತೊಡಗಿ ಮೃತಪಟ್ಟರು ಎಂದು ವರದಿಯಾಗಿದೆ. ಮೃತರು ಪತಿ ಅಯ್ಯೂಬ್ ಹಾಜಿ, ಪುತ್ರರಾದ ಮಹಮ್ಮದ್, ಅಬ್ದುಲ್ ಅಜೀಜ್, ಅಬ್ದುಲ್ ಲತೀಫ್, ಮಹಮ್ಮದ್ ಅಶ್ರಫ್, ಫಾರೂಕ್, ಪುತ್ರಿಯರಾದ ಮೈಮೂನ, ಜಮೀಳ, ಜೂರಾಬಿ, ಮಮ್ತಾಜ್, ಸಾಜಿದಾರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here