






ಪುತ್ತೂರು: ಆರ್ ಬಿಐ ಮಾಜಿ ನಿರ್ದೇಶಕ ಡಾ. ಅಗರಿ ನವೀನ್ ಭಂಡಾರಿ ಅವರ ಭಾವ, ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ, ಸಾಲೆತ್ತೂರು ಬೈರೋಡಿ ನಿವಾಸಿ ಚಂದ್ರಹಾಸ ಶೆಟ್ಟಿ (76 ವ) ರವರು ಸೆ. 6 ರಂದು ಉಡುಪಿಯಲ್ಲಿ ಜರಗಿದ ಸಮಾರಂಭವೊಂದರ ಸಂದರ್ಭದಲ್ಲಿ ಹೃದಯಾಘಾತದಿಂದ ನಿಧನರಾದರು.


ಚಂದ್ರಹಾಸ ಶೆಟ್ಟಿರವರು ವಿಜಯ ಬ್ಯಾಂಕ್ ನಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಶೋಭಾ ಚಂದ್ರಹಾಸ್ ಶೆಟ್ಟಿ , ಪುತ್ರ ತೇಜಸ್ ಶೆಟ್ಟಿ, ಸೊಸೆ ಸುಶ್ಮಿತಾ ಶೆಟ್ಟಿ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಸೆ. 7 ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರು ಕದ್ರಿಯಲ್ಲಿ ಜರಗಲಿದೆ.













