







ಪುತ್ತೂರು: ಸಾಕ್ಷಾತ್ ಶಿವ ಭಜನಾ ಮಂಡಳಿ ಚಾರ್ವಾಕ ಇದರ ವತಿಯಿಂದ ಸೆ. 5 ರಂದು ನಿವೃತ್ತ ಶಿಕ್ಷಕರಾದ ತುಳಸಿ ಕಂಪ ಇವರಿಗೆ ಗುರುವಂದನೆ ಸಲ್ಲಿಸಲಾಯಿತು.


28 ವರ್ಷಗಳ ಸೇವೆ ಸಲ್ಲಿಸಿ ನೂರಾರು ವಿದ್ಯಾರ್ಥಿಗಳ ಬಾಳಿಗೆ ದಾರಿ ದೀಪವಾಗಿರುವ ತುಳಸಿ ಇವರಿಗೆ ಅವರ ಪತಿ ನಿವೃತ್ತ ಬಿ ಎಸ್ ಎನ್ ಎಲ್ ಉದ್ಯೋಗಿ ಪುರುಷೋತ್ತಮ ಕಂಪ ಇವರೊಂದಿಗೆ ಶಾಲು ಹೊದಿಸಿ ಫಲಪುಷ್ಪಗಳೊಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಸಾಕ್ಷಾತ್ ಶಿವ ಭಜನಾ ಮಂಡಳಿಯ ಅಧ್ಯಕ್ಷ ರಾಜೇಶ್ ಕಣಿಲೆಗುಂಡಿ ಸದಸ್ಯರಾದ ಶಿವಜಿತ್ ವೈ ಜೆ ಸಾಕ್ಷಾತ್ ವೈ ಜೆ ಸವಣೂರು ಕ್ಲಸ್ಟರ್ ಸಿ ಆರ್ ಪಿ ಜಯಂತ್ ವೈ , ತುಳಸಿ ದಂಪತಿ ಮಕ್ಕಳಾದ ಲೋಕೇಶ್ ಮತ್ತು ಲೋಹಿತ್ ಉಪಸ್ಥಿತರಿದ್ದರು .













