







ಪುತ್ತೂರು: ಸ್ನೇಹ ಯುವಕ ಮಂಡಲ ಹಾಗೂ ಸ್ನೇಹ ಮಹಿಳಾ ಮಂಡಲ ಪರ್ಪುಂಜ ಇವರ ಸಂಯುಕ್ತ ಆಶ್ರಯದಲ್ಲಿ 22ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯು ಸೆ.4 ರಂದು ಪರ್ಪುಂಜ ರಾಮಜಾಲು ಗರಡಿ ವಠಾರದಲ್ಲಿ ನಡೆಯಿತು. ರಾಮಜಾಲು ಗರಡಿ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ತೆಂಗಿನ ಕಾಯಿ ಒಡೆದು,ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಬಹಳ ವಿಜೃಂಭಣೆಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಸ್ನೇಹ ಯುವಕ ಮತ್ತು ಮಹಿಳಾ ಮಂಡಲದವರು ನಡೆಸಿಕೊಂಡು ಬಂದಿದ್ದಾರೆ. ಇಡೀ ಸಂಘಟನೆಗೆ ಶ್ರೀ ಕೃಷ್ಣನ ಆಶೀರ್ವಾದ ಅನುಗ್ರಹ ಹಾಗೇ ರಾಮಜಾಲು ಮಣ್ಣಿನ ಬ್ರಹ್ಮಬೈದೆರ್ಕಳ ಆಶೀರ್ವಾದ ಇರಲಿ ಎಂದು ಹೇಳಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಸೀತಾರಾಮ ರೈ ಇಡಿಂಜಿಲ, ಕಿನ್ನಿಮಜಲು ಕೋಟಿ ಚೆನ್ನಯ ಗರಡಿಯ ಆಡಳಿತ ಮೊಕ್ತೇಸರ ಶಶಿಧರ ಕಿನ್ನಿಮಜಲು, ಅರ್ಚಕರಾದ ಹರೀಶ್ ಶಾಂತಿ, ಸಂಟ್ಯಾರು ವಿನಾಯಕ ಭಜನಾ ಮಂದಿರದ ಅಧ್ಯಕ್ಷ ಶರತ್ ಆಳ್ವ, ಕುಂಬ್ರ ಅತಿಥಿ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಮಾಲಕ ಸಂಪತ್ ಕುಮಾರ್, ಸ್ನೇಹ ಯುವಕ ಮಂಡಲದ ಗೌರವ ಸಲಹೆಗಾರ ಮಿತ್ರದಾಸ ರೈ ಡೆಕ್ಕಳ, ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ, ಸ್ನೇಹ ಯುವಕ ಮಂಡಲದ ಗೌರವ ಸಲಹೆಗಾರರಾದ ರಾಜೇಶ್ ರೈ ಪರ್ಪುಂಜ ಮತ್ತಿತರರು ಉಪಸ್ಥಿತರಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಆಟೋಟ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.




ಹಿರಿಯ ನ್ಯಾಯವಾದಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದ ಕುಂಬ್ರ ದುರ್ಗಾಪ್ರಸಾದ್ ರೈಯವರು ಸಭಾಧ್ಯಕ್ಷತೆ ವಹಿಸಿ, ಶ್ರೀ ಕೃಷ್ಣನ ಜನ್ಮಾಷ್ಠಮಿಯ ಸವಿನೆನಪಿನಲ್ಲಿ ಯುವಕ ಮತ್ತು ಮಹಿಳಾ ಮಂಡಲ ಆಯೋಜಿಸುತ್ತಿರುವ ಈ ಕಾರ್ಯಕ್ರಮ ಒಂದು ಒಳ್ಳೆಯ ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದು ಹೇಳಿ ಶುಭ ಹಾರೈಸಿದರು. ಮಾಜಿ ಶಾಸಕರಾದ ಸಂಜೀವ ಮಠಂದೂರುರವರು ಪರ್ಪುಂಜದ ಯುವಕರು, ಮಹಿಳೆಯರು ಸೇರಿಕೊಂಡು ಕಳೆದ 22 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ ಒಂದು ಮಾದರಿ ಕಾರ್ಯಕ್ರಮವಾಗಿದೆ ಎಂದು ಹೇಳಿ ಶುಭ ಹಾರೈಸಿದರು. ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ನೆರವೇರಿಸಿದ ಪುತ್ತೂರು ಗ್ರಾಮಾಂತರ ಠಾಣಾ ಅಪರಾಧ ಪತ್ತೆ ದಳದ ಪೊಲೀಸ್ ಉಪ ನಿರೀಕ್ಷಕರಾದ ಸುಷ್ಮಾ ಜಿ.ಭಂಡಾರಿಯವರು ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಕಾರ್ಯವನ್ನು ಶ್ಲಾಘಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾರ್ಪಾಡಿ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಸದಾನಂದ ಶೆಟ್ಟಿ ಕೂರೇಲು, ಕುಂಬ್ರ ಮಾತೃಶ್ರೀ ಅರ್ಥ್ ಮೂವರ್ಸ್ ಮಾಲಕ, ಉದ್ಯಮಿ ಮೋಹನದಾಸ ರೈ ಕುಂಬ್ರ, ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ರತನ್ ರೈ ಕುಂಬ್ರ, ಸಂಟ್ಯಾರು ಶ್ರೀ ವಿನಾಯಕ ಭಜನಾ ಮಂದಿರದ ಜೀರ್ಣೊದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ವಾಗ್ಲೆ, ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ ಮೂಲೆ, ಮೂಡಬಿದ್ರೆ ಮಂಗಳೂರು ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಇಂಜಿನಿಯರಿಂಗ್ ಇದರ ಸಹಾಯಕ ತರಬೇತಿ ಮತ್ತು ಪ್ಲೇಸ್ಮೆಂಟ್ ಆಫೀಸರ್ ಭರತ್ರಾಜ್ ನೆಕ್ಕರೆ, ರತ್ನಶ್ರೀ ಗ್ರೂಪ್ನ ಉದ್ಯಮಿ ಪವನ್ ಶೆಟ್ಟಿ ಕಂಬಳತ್ತಡ್ಕ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು. ಸ್ನೇಹ ಯುವಕ ಮಂಡಲದ ಗೌರವ ಸಲಹೆಗಾರ ರಾಜೇಶ್ ರೈ ಪರ್ಪುಂಜ ಸ್ವಾಗತಿಸಿದರು. ಶ್ರೇಯಾ ರೈ ಪ್ರಾರ್ಥಿಸಿದರು. ಪವಿತ್ರಾ ವರದಿ ಮಂಡಿಸಿದರು. ರಕ್ಷಾ ವಂದಿಸಿದರು. ಭವ್ಯ ವೇಣುಗೋಪಾಲ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲ, ವಿಜಯ ಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ ಸಂಜೆ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ,ಶಿವಕೃಪಾ ಅಡಿಟೋರಿಯಂ ಮಾಲಕ ಹರಿಹರ ಕೋಡಿಬೈಲ್, ಉದ್ಯಮಿ, ಪ್ರಗತಿಪರ ಕೃಷಿಕ ಅನಿಲ್ ರೈ ಬಾರಿಕೆ ಸೇರಿದಂತೆ ಹಲವು ಮಂದಿ ಆಗಮಿಸಿ ಶುಭ ಹಾರೈಸಿದರು.
ಬೆಳಿಗ್ಗೆ ಸಭಾ ಕಾರ್ಯಕ್ರಮದ ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ಆರಂಭಗೊಂಡಿತು. ವಿಶೇಷವಾಗಿ ಪುರುಷರಿಗೆ ಕಂಬ ಏರುವುದು, ಮಡಿಕೆ ಹೊಡೆಯುವುದು, ಹಗ್ಗ ಜಗ್ಗಾಟ, ಗೋಣಿ ಚೀಲದ ಓಟ, ಕೋಲು ಓಟ ಹಾಗೇ ಮಹಿಳೆಯರಿಗೆ ಮಡಿಕೆ ಹೊಡೆಯುವುದು, ಹಗ್ಗ ಜಗ್ಗಾಟ, ಲಕ್ಕಿ ಸರ್ಕಲ್,ಗುಂಡೆಸೆತ, ಪುಟಾಣಿಗಳಿಗೆ ರಾಧಾಕೃಷ್ಣ ಛದ್ಮವೇಷ, ಕಡ್ಲೆ ಹೆಕ್ಕುವುದು ಅಲ್ಲದೆ ೧ರಿಂದ ೧೦ ನೇ ತರಗತಿ ತನಕದ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ಸೇರಿದಂತೆ ವಿವಿಧ ರೀತಿಯ ಮನೋರಂಜನಾ ಆಟೋಟ ಸ್ಪರ್ಧೆಗಳು ನಡೆಯಿತು. ಸ್ನೇಹ ಯುವಕ ಮಂಡಲದ ಗೌರವ ಅಧ್ಯಕ್ಷ ಪ್ರೇಮ್ರಾಜ್ ರೈ ಪರ್ಪುಂಜ, ಗೌರವ ಸಲಹೆಗಾರ ನಾರಾಯಣ ರೈ ಬಾರಿಕೆ, ಸ್ನೇಹ ಯುವಕ ಮಂಡಲದ ಅಧ್ಯಕ್ಷ ಅಶ್ವಿನ್ ಪೂಜಾರಿ, ಕಾರ್ಯದರ್ಶಿ ಕಿಶನ್ ಗೌಡ, ಸ್ನೇಹ ಮಹಿಳಾ ಮಂಡಲದ ಗೌರವ ಅಧ್ಯಕ್ಷೆ ಬೇಬಿ ರೈ, ಅಧ್ಯಕ್ಷೆ ಪ್ರಮೀಳಾ ಎಸ್, ಕಾರ್ಯದರ್ಶಿ ರೇಖಾ ಎಸ್ ಹಾಗೂ ಯುವಕ ಮತ್ತು ಮಹಿಳಾ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರ ಪ್ರಾಯೋಜಕತ್ವದಲ್ಲಿ ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಬೆಳಗ್ಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆಯಿತು. ನಿವೃತ್ತ ಪೊಲೀಸ್ ಅಧಿಕಾರಿಗಳಾದ ಜಯಾನಂದ ರೈ ಮತ್ತು ಶ್ರೀಧರ ರೈ, ವೈಧಿಕ ಕ್ಷೇತ್ರದ ಸಾಧಕ ಹರೀಶ್ ಶಾಂತಿ, ಉದ್ಯಮಿ ಹರಿಹರ ಕೋಡಿಬೈಲು, ಮೆಸ್ಕಾಂನ ಚಂದ್ರ, ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು ಸನ್ನಿಧಿ ನಾನಿಲತ್ತಡ್ಕ, ಶಿಕ್ಷಣ ಕ್ಷೇತ್ರದ ಸಾಧಕ ಅನ್ವೇಷ್ ಆಚಾರ್ಯರವರುಗಳನ್ನು ಶಾಲು,ಹಾರ,ಪೇಟಾ, ಸ್ಮರಣಿಕೆ,ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಳೆದ 22 ವರ್ಷಗಳಿಂದ ನಿರಂತರವಾಗಿ ರಾಮಜಾಲು ಗರಡಿ ವಠಾರದಲ್ಲಿ ಸ್ನೇಹ ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಆಯೋಜನೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ ಮಾಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಭಾಗದ ಯುವಕರನ್ನು ಮತ್ತು ಮಹಿಳೆಯರನ್ನು ಸೇರಿಸಿಕೊಂಡು ಎಲ್ಲರ ಸಹಕಾರ ಪಡೆದುಕೊಂಡು ಕಾರ್ಯಕ್ರಮ ಮಾಡುತ್ತಿದ್ದೇವೆ. ಮನೋರಂಜನಾ ಆಟೋಟ ಸ್ಪರ್ಧೆಗಳನ್ನು ನಡೆಸುವ ಮೂಲಕ ಎಲ್ಲರನ್ನು ಸೇರಿಸುವ ಕೆಲಸ ಆಗುತ್ತಿದೆ. ಇದಲ್ಲದೆ ನಮ್ಮ ಯುವಕ, ಮಹಿಳಾ ಮಂಡಲದಿಂದ ಬಹಳಷ್ಟು ಸಮಾಜಮುಖಿ ಕೆಲಸಗಳನ್ನು ನಡೆಸುತ್ತಾ ಬರುತ್ತಿದ್ದು ಇದಕ್ಕೆ ಪ್ರತಿಯೊಬ್ಬರು ಸಹಕಾರ ನೀಡುತ್ತಿದ್ದಾರೆ. ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.
ರಾಜೇಶ್ ರೈ ಪರ್ಪುಂಜ, ಗೌರವ ಸಲಹೆಗಾರರು, ಸ್ನೇಹ ಯುವಕ ಮಂಡಲ ಪರ್ಪುಂಜ










