






3.79 ಲಕ್ಷ ರೂ.ನಿವ್ವಳ ಲಾಭ | ಶೇ.15 ಡಿವಿಡೆಂಡ್, ಪ್ರತಿ ಲೀ.ಹಾಲಿಗೆ 75 ಪೈಸೆ ಬೋನಸ್ ಘೋಷಣೆ


ನೆಲ್ಯಾಡಿ: ಆಲಂತಾಯ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.1ರಂದು ಸಂಘದ ಆವರಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷೆ ಸುಶೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. 2025-26ನೇ ಸಾಲಿನಲ್ಲಿ ಸಂಘಕ್ಕೆ 3,79,919 ರೂ.ನಿವ್ವಳ ಲಾಭ ಬಂದಿದೆ. ಲಾಭಾಂಶದಲ್ಲಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 75 ಪೈಸೆ ಬೋನಸ್ ನೀಡಲಾಗುವುದು ಎಂದು ಅಧ್ಯಕ್ಷೆ ಸುಶೀಲ ಘೋಷಿಸಿದರು. ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಅವರು ಒಕ್ಕೂಟದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.




ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಶಶಿಕಲಾ (ಪ್ರಥಮ), ಸುಶೀಲ (ದ್ವಿತೀಯ) ಹಾಗೂ ಲಲಿತಕುಮಾರಿ (ತೃತೀಯ) ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಉಳಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು. ಕಳೆದ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದುಕೊಂಡ ಸಂಘದ ಉಪಾಧ್ಯಕ್ಷೆ ಪವಿತ್ರ ಅವರ ಪುತ್ರಿ ಪ್ರೇಕ್ಷಾ ಅವರನ್ನು ಗೌರವಿಸಲಾಯಿತು. ಸಂಘದ ಸದಸ್ಯೆಯರಾದ ಯಶೋಧ, ಲಲಿತಾ ಅವರಿಗೆ ಚಿಕಿತ್ಸೆಗಾಗಿ ತಲಾ 2 ಸಾವಿರ ರೂ.ಧನ ಸಹಾಯ ನೀಡಲಾಯಿತು.
ಸಂಘದ ಉಪಾಧ್ಯಕ್ಷೆ ಪವಿತ್ರ, ನಿರ್ದೇಶಕರಾದ ರೇವತಿ, ವಿಮಲಾ, ಯಶೋಧ, ಗಿರಿಜ, ಜಾನಕಿ, ಅಮಿತಾ, ರೋಹಿಣಿ, ಮಾಲತಿ, ಯಶೋಧ ಎಂ., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಲತಾ ವರದಿ ವಾಚಿಸಿದರು. ಯಶೋಧ ಎಂ.ಸ್ವಾಗತಿಸಿದರು. ಲಲಿತಾ ನಿರೂಪಿಸಿ, ವಂದಿಸಿದರು. ಅಮಿತಾ ಪ್ರಾರ್ಥಿಸಿದರು. ಹಾಲು ಪರೀಕ್ಷಕಿ ಲತಾಕುಮಾರಿ ಸಹಕರಿಸಿದರು.










