ಆತೂರು: ತರಕಾರಿ ವ್ಯಾಪಾರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ-ದೂರು

0

ರಾಮಕುಂಜ: ಮಗಳ ವಿವಾಹ ನಿಶ್ಚಿತಾರ್ಥಕ್ಕೆ ಕರೆಯಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ತರಕಾರಿ ವ್ಯಾಪಾರಿಯೊಬ್ಬರನ್ನು ಅವರ ಅಂಗಡಿಯ ಬಳಿ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವ ಘಟನೆ ಕಡಬ ತಾಲೂಕಿನ ಕೊಯಿಲ ಗ್ರಾಮದ ಆತೂರಿನಲ್ಲಿ ನಡೆದಿದೆ.


ಘಟನೆಗೆ ಸಂಬಂಧಿಸಿ ಕೊಯಿಲ ಗ್ರಾಮದ ಹೇಂತಾರು ನಿವಾಸಿ ಮಹಮ್ಮದ್ ನವಾಜ್ (32ವ.)ಎಂಬಾತನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ಆತೂರು ಪೇಟೆ ನಿವಾಸಿ, ಆತೂರು ಬಿ.ಆರ್.ಕಾಂಪ್ಲೆಕ್ಸ್‌ನಲ್ಲಿ ತರಕಾರಿ ವ್ಯಾಪಾರಿಯಾಗಿರುವ ಅಬ್ದುಲ್ ಖಾದರ್(58ವ.) ಅವರು ಸೆ.4ರಂದು ರಾತ್ರಿ ಅಂಗಡಿಯಲ್ಲಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಬಂದು, ನನ್ನನ್ನು ನಿನ್ನ ಮಗಳ ನಿಶ್ಚಿತಾರ್ಥಕ್ಕೆ ಯಾಕೆ ಕರೆಯಲಿಲ್ಲ ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದರಿಂದ ಆತಂಕಗೊಂಡ ಅಬ್ದುಲ್ ಖಾದರ್ ಅವರು ಅಂಗಡಿಯಿಂದ ಹೊರಬಂದು ನೀನು ಯಾಕೆ ನನಗೆ ಬೈಯುತ್ತೀಯಾ, ಇಲ್ಲಿಂದ ಹೋಗು ಎಂದು ಹೇಳಿ ವಾಪಸ್ಸು ಅಂಗಡಿಯ ಒಳಗೆ ಹೊಗಲು ಯತ್ನಿಸಿದ ವೇಳೆ ಆರೋಪಿ ಅಡ್ಡಗಟ್ಟಿ ಮತ್ತೆ ಅವಾಚ್ಯವಾಗಿ ಬೈದಿರುವುದಾಗಿ ಆರೋಪಿಸಲಾಗಿದೆ. ಗಲಾಟೆ ಸದ್ದು ಕೇಳಿ ಸ್ಥಳೀಯರು ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿ ತನ್ನ ಕೈಯಲ್ಲಿದ್ದ ಮರದ ದೊಣ್ಣೆಯನ್ನು ಅಂಗಡಿಯ ಮುಂದೆ ಬಲವಾಗಿ ಎಸೆದು ಈ ದೊಣ್ಣೆಯಿಂದಲೇ ನಿನ್ನ ಸಾವು. ಇದೇ ನಿನಗೆ ಸಾಕ್ಷಿ ಎಂದು ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಖಾದರ್ ಅವರು ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here