ಕರಾಟೆಯಲ್ಲಿ ಎವಿಜಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ

0

ಪುತ್ತೂರು :ಇತ್ತೀಚೆಗೆ ಉಪ್ಪಿನಂಗಡಿಯಲ್ಲಿ ನಡೆದ ಯುನೈಟೆಡ್ ಕರಾಟೆ ಬುಡೊಕಾನ್ ಇಂಟರ್ ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್ ಶಿಪ್ 2026ರಲ್ಲಿ ಪುತ್ತೂರಿನ ಎವಿಜಿ ಇಂಗ್ಲೀಷ್ ಮೀಡಿಯಂ ಶಾಲೆಯ 7ನೇ ತರಗತಿಯ ಆದ್ಯ ಹಾಗೂ 3ನೇ ತರಗತಿಯ ಪ್ರೀತಂ ಪ್ರಶಸ್ತಿ ಪಡೆದಿರುತ್ತಾರೆ.


ಆದ್ಯಾ ಅವರು 12ರ ವಯೋಮಾನದ ಬಾಲಕಿಯರ ಗ್ರೀನ್ ಬೆಲ್ಟ್ ನ ಕಾಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.ಪ್ರೀತಮ್ ಅವರು 8ರ ವಯೋಮಾನದ ಬಾಲಕರ ಗ್ರೀನ್ ಬೆಲ್ಟ್ ನ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಕಾಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಇವರಿಬ್ಬರು ಪುತ್ತೂರಿನ ಸುರೇಶ್ ಮಾಸ್ಟರ್ ಅವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದು, ಬನ್ನೂರಿನ ಬೆಳಿಯಪ್ಪ ಗೌಡ ಹಾಗೂ ಸಾವಿತ್ರಿ ದಂಪತಿಯ ಮಕ್ಕಳು.

LEAVE A REPLY

Please enter your comment!
Please enter your name here