ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಉರ್ಲಾಂಡಿ ನಾಗರಕ್ತೇಶ್ವರಿ ಸ್ಥಾನದಿಂದ ಸ್ವರ್ಣ ಸಮರ್ಪಣೆ

0


ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರ ಸ್ವರ್ಣ ಕವಚ ನಿರ್ಮಾಣಕ್ಕೆ ಪುತ್ತೂರು ಬೈಪಾಸ್ ರಸ್ತೆ ಉರ್ಲಾಂಡಿಯಲ್ಲಿರುವ ಶ್ರೀ ನಾಗ ರಕ್ತೇಶ್ವರಿ ಭೈರವ ದೈವಾದಿಗಳ ಸ್ಥಾನ(ಬನ) ಇದರ ಸಮಿತಿಯಿಂದ 1.035 ಗ್ರಾಂ ಸ್ವರ್ಣ ಸಮರ್ಪಣೆ ಮಾಡಲಾಯಿತು.


ಸಮಿತಿ ಅಧ್ಯಕ್ಷ ಯು ಲೋಕೇಶ್ ಹೆಗ್ಡೆ, ಕಾರ್ಯದರ್ಶಿ ಗಣೇಶ್ ಹೆಗ್ಡೆ, ಖಜಾಂಚಿ ನಾರಾಯಣ ಹೆಗ್ಡೆ, ಸದಸ್ಯರಾದ ರಘುರಾಮ ಹೆಗ್ಡೆ, ಶ್ರೀಕಾಂತ್ ಹೆಗ್ಡೆ, ಸಾವಿತ್ರಿ ಹೆಗ್ಡೆಯವರು ಜೊತೆಯಾಗಿ ಸ್ವರ್ಣ ಸಮರ್ಪಣೆ ಮಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಸಮಿತಿ ಪದಾಧಿಕಾರಿಗಳಿಗೆ ಶಾಲು ಹೊದಿಸಿ ಗೌರವಿಸಿದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಪ್ರಸಾದ ವಿತರಿಸಿದರು.

LEAVE A REPLY

Please enter your comment!
Please enter your name here