







ಪುತ್ತೂರು: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಮೂಡಬಿದಿರೆ ವಿದ್ಯಾರ್ಥಿಗಳ ಸಹಯೋಗದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಡ್ರೋನ್ ತಯಾರಿ ಹಾಗೂ ತಂತ್ರಜ್ಞಾನ ಕಾರ್ಯಗಾರ ಸೆ. 7 ಮತ್ತು 8ರಂದು ನಡೆಯಿತು.


60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ ಕಾರ್ಯಗಾರದಲ್ಲಿ ಡ್ರೋನ್ ರಚನೆ, ಕಾರ್ಯನಿರ್ವಹಣಾ ವಿಧಾನ, ವಿವಿಧ ಬಿಡಿಭಾಗಗಳ ಪರಿಚಯ, ಡ್ರೋನ್‌ಗಳ ಬಳಕೆ ಹಾಗೂ ತಾಂತ್ರಿಕ ಮಹತ್ವದ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.



ಆಧುನಿಕ ತಂತ್ರಜ್ಞಾನದಲ್ಲಿ ಡ್ರೋನ್‌ಗಳ ಮಹತ್ವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ, ಸೃಜನಶೀಲತೆ ಮತ್ತು ತಾಂತ್ರಿಕ ಕೌಶಲ್ಯ ಬೆಳೆಸುವ ಉದ್ದೇಶದಿಂದ ಕಾರ್ಯಗಾರ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಡ್ರೋನ್ ಹಾರಿಸಿ ಖುಷಿಪಟ್ಟು ಪ್ರಾಯೋಗಿಕ ಜ್ಞಾನ ಪಡೆದರು.
ಇಂತಹ ಕಾರ್ಯಗಾರಗಳು ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿ ಭವಿಷ್ಯದಲ್ಲಿ ಹೊಸ ಆವಿಷ್ಕಾರಗಳಿಗೆ ಪ್ರೇರಣೆ ನೀಡಲಿವೆ ಎಂದು ಶಾಲಾ ಸಂಚಾಲಕರು ಹೇಮನಾಥ ಶೆಟ್ಟಿ ಕಾವು ಹಾಗೂ ಪ್ರಭಾರ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎಸ್. ತಿಳಿಸಿದರು.










