







ಅಧ್ಯಕ್ಷ -ಬಾಲಕೃಷ್ಣ ಗೌಡ, ಉಪಾಧ್ಯಕ್ಷೆ -ವನಜಾ, ಕಾರ್ಯದರ್ಶಿ-ಪುಷ್ಪಾ ಎ., ಜೊತೆ ಕಾರ್ಯದರ್ಶಿ-ಮಹಾಬಲ ಶೆಟ್ಟಿ, ಕೋಶಾಧಿಕಾರಿ-ಚೇತನ್ ಎಂ.


ರಾಮಕುಂಜ; ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು ಹಾಗೂ ಪ್ರೌಢಶಾಲೆಯ ರಕ್ಷಕ-ಶಿಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಗೌಡ ಬೇಂಗದಪಡ್ಪು ಕೊಯಿಲ, ಉಪಾಧ್ಯಕ್ಷರಾಗಿ ವನಜಾ, ಕಾರ್ಯದರ್ಶಿಯಾಗಿ ಶಿಕ್ಷಕಿ ಪುಷ್ಪಾ ಎ., ಜೊತೆ ಕಾರ್ಯದರ್ಶಿಯಾಗಿ ಮಹಾಬಲ ಶೆಟ್ಟಿ ನೇಲಡ್ಕ, ಕೋಶಾಧಿಕಾರಿಯಾಗಿ ಉಪನ್ಯಾಸಕ ಚೇತನ್ ಎಂ. ಆಯ್ಕೆಯಾಗಿದ್ದಾರೆ.




ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆದ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯಲ್ಲಿ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು. ನಿರ್ಗಮಿತ ಅಧ್ಯಕ್ಷ ಉಮೇಶ್ ಕೆ.ಎನ್.ಪೆರುವಾಜೆ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ ಕೆ. ರಕ್ಷಕ-ಶಿಕ್ಷಕ ಸಂಘದ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ವೆಂಕಟೇಶ ದಾಮ್ಲೆ ಸಂದರ್ಭೋಚಿತವಾಗಿ ಮಾತನಾಡಿದರು. ಗತವರ್ಷದ ಲೆಕ್ಕಪತ್ರಗಳನ್ನು ಉಪನ್ಯಾಸಕರಾದ ಚೇತನ್ ಎಂ.ಮಂಡಿಸಿದರು. ನಿರ್ಗಮಿತ ಕಾರ್ಯದರ್ಶಿ ಶಿಕ್ಷಕ ದಿನೇಶ್ ಅವರು ಸ್ವಾಗತಿಸಿ, ವರದಿ ಮಂಡಿಸಿದರು. ನೂತನ ಕಾರ್ಯದರ್ಶಿ ಶಿಕ್ಷಕಿ ಪುಷ್ಪಾ ಎ.ವಂದಿಸಿದರು.










