







ಪುತ್ತೂರು: ದಾರಂದಕುಕ್ಕು ಕೊಡಿಮರ ರಸ್ತೆ ಕೊಲ್ಯ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ತೆಂಗಿನಕಾಯಿ, ನಿಂಬೆಹಣ್ಣು, ಕುಂಕುಮ ಸೇರಿದಂತೆ ವಿವಿಧ ವಸ್ತುಗಳನ್ನು ಇರಿಸಿರುವ ಘಟನೆ ಸೆ.8ರಂದು ರಾತ್ರಿ ನಡೆದಿದ್ದು, ಸ್ಥಳೀಯರಲ್ಲಿ ವಾಮಾಚಾರದ ಶಂಕೆ ಮೂಡಿಸಿದೆ.



ಕೊಲ್ಯ ಒಳರಸ್ತೆಯಲ್ಲಿ ಬನ್ನೂರು ಪಂಚಾಯತ್‌ನ ಸಂಜೀವಿನಿ ವೃತ್ತಿ ಕೌಶಲ್ಯ ಕಟ್ಟಡಕ್ಕೆ ತೆರಳುವ ದಾರಿಯಲ್ಲಿ ಸೆ.8ರಂದು ರಾತ್ರಿ 8ರಿಂದ 10 ಗಂಟೆಯೊಳಗೆ ಅಪರಿಚಿತರು ಈ ವಸ್ತುಗಳನ್ನು ಇರಿಸಿರುವುದು ಗಮನಕ್ಕೆ ಬಂದಿದೆ ಎನ್ನಲಾಗಿದೆ. ಘಟನೆ ನಡೆದ ಸ್ಥಳದ ಸಮೀಪದಲ್ಲೇ ರಾಹುಕುಲೆಯ ಬನ ಇರುವುದರಿಂದ ಸ್ಥಳೀಯರಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಯಾರೋ ಉದ್ದೇಶಪೂರ್ವಕವಾಗಿ ಈ ರೀತಿಯ ವಸ್ತುಗಳನ್ನು ಇರಿಸಿರುವ ಶಂಕೆ ವ್ಯಕ್ತವಾಗಿದ್ದು, ಇದನ್ನು ಯಾರು ಮಾಡಿದ್ದಾರೆ ಎಂಬುದು ತಿಳಿದುಬಂದಿಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ಸ್ಥಳೀಯರು ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ. ಮುಂದೆ ಇದೇ ರೀತಿಯ ಘಟನೆಗಳು ನಡೆದರೆ ಗ್ರಾಮದ ದೈವಕ್ಕೆ ಹರಕೆ ಸಲ್ಲಿಸುವುದಾಗಿ ಸ್ಥಳೀಯರು ತಿಳಿಸಿದ್ದಾರೆ.













