







ಪುತ್ತೂರು: ಯಶವಂತಪುರ-ಮಂಗಳೂರು ಜಂಕ್ಷನ್-ಯಶವಂತಪುರ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ಟ್ರಯಲ್ ರನ್ ಸೆಪ್ಟೆಂಬರ್ 10ರ ಗುರುವಾರ ನಡೆಯಲಿದೆ.


ನೈಋತ್ಯ ರೈಲ್ವೆಯ PCOM ಕಚೇರಿಯಿಂದ ಈ ಕುರಿತು ಆದೇಶ ಹೊರಡಿಸಲಾಗಿದ್ದು, ರೈಲ್ವೆ ಬೋರ್ಡ್ ಸೂಚನೆಯಂತೆ ಸಮಯ ಪರಿಶೀಲನೆಗಾಗಿ 16 ಬೋಗಿಯ ವಂದೇ ಭಾರತ್ ರೇಕ್ (IC2015) ಖಾಲಿ ರೈಲಾಗಿ ಸಂಚರಿಸಲಿದೆ.



ತಾತ್ಕಾಲಿಕ ವೇಳಾಪಟ್ಟಿ:
ಯಶವಂತಪುರದಿಂದ ಮಂಗಳೂರು ಜಂಕ್ಷನ್ಗೆ:
ಯಶವಂತಪುರ – ಬೆಳಿಗ್ಗೆ 06.50ಕ್ಕೆ ನಿರ್ಗಮನ, ಹಾಸನ – 09.33/09.35, ಸಕಲೇಶಪುರ – 10.25/10.30, ಸುಬ್ರಹ್ಮಣ್ಯ ರೋಡ್ – 12.50/12.55, ಕಬಕ ಪುತ್ತೂರು – 14.34/14.36, ಪಡೀಲ್ – 14.40, ಮಂಗಳೂರು ಜಂಕ್ಷನ್ – 14.50ಕ್ಕೆ ಆಗಮನ.
ಮಂಗಳೂರು ಜಂಕ್ಷನ್ನಿಂದ ಯಶವಂತಪುರಕ್ಕೆ ವಾಪಸ್:
ಮಂಗಳೂರು ಜಂಕ್ಷನ್ – ಮಧ್ಯಾಹ್ನ 15.10ಕ್ಕೆ ನಿರ್ಗಮನ, ಪಡೀಲ್ – 15.20, ಕಬಕ ಪುತ್ತೂರು – 15.38/15.40, ಸುಬ್ರಹ್ಮಣ್ಯ ರೋಡ್ – 16.35/16.40, ಸಕಲೇಶಪುರ – 18.50/18.55, ಹಾಸನ – 19.45/19.47, ಯಶವಂತಪುರ – ರಾತ್ರಿ 22.30ಕ್ಕೆ ಆಗಮನ.
ಘಾಟ್ ಸೆಕ್ಷನ್ ಸೇರಿದಂತೆ ಎಲ್ಲಾ ನಿಲ್ದಾಣಗಳ ಸಮಯವನ್ನು ಗಮನಿಸಿ, ಸುರಕ್ಷತಾ ಕ್ರಮಗಳೊಂದಿಗೆ ರನ್ನಿಂಗ್ ಟೈಮ್ ಕಡಿಮೆ ಮಾಡುವ ಕುರಿತು ವಿವರವಾದ ವರದಿ ಸಲ್ಲಿಸಲು SBC ಮತ್ತು MYS ವಿಭಾಗಗಳಿಗೆ ಸೂಚಿಸಲಾಗಿದೆ.
ಪುತ್ತೂರಿನಲ್ಲಿ ವಂದೇ ಭಾರತ್ಗೆ ನಿಲುಗಡೆ ನೀಡುವಂತೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ಗೆ ಡಾ. ಅರುಣ್ ಶ್ಯಾಮ್ ಪತ್ರ
ಬೆಂಗಳೂರು-ಮಂಗಳೂರು ನಡುವೆ ಪ್ರಾಯೋಗಿಕ ಸಂಚಾರ ನಡೆಸಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಪುತ್ತೂರಿನಲ್ಲಿ ನಿಲುಗಡೆ ಕಲ್ಪಿಸುವಂತೆ ಹಿರಿಯ ವಕೀಲ ಡಾ. ಅರುಣ್ ಶ್ಯಾಮ್ ಎಂ. ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದರು.
ಡಾ. ಅರುಣ್ ಶ್ಯಾಮ್ ಅವರು ಸಚಿವರಿಗೆ ಪತ್ರ ಬರೆದಿದ್ದು, ಟ್ರಯಲ್ ಸಂದರ್ಭದಲ್ಲೇ ಪುತ್ತೂರಿನಲ್ಲಿ ಅಧಿಕೃತ ನಿಲುಗಡೆ ನೀಡಿ ಪ್ರಯಾಣಿಕರ ಬೇಡಿಕೆಯನ್ನು ಅಂದಾಜಿಸಬೇಕು ಎಂದು ಕೋರಿದ್ದಾರೆ. ನಿಯಮಿತ ಸೇವೆ ಆರಂಭವಾದಾಗಲೂ ಪುತ್ತೂರನ್ನು ಖಾಯಂ ನಿಲುಗಡೆಯಾಗಿ ಉಳಿಸಿಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ, ಶೈಕ್ಷಣಿಕ ಮತ್ತು ಆಡಳಿತ ಕೇಂದ್ರವಾಗಿದ್ದು, ಇಲ್ಲಿಂದ ಬೆಂಗಳೂರು-ಮಂಗಳೂರಿಗೆ ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಪುತ್ತೂರಿನಲ್ಲಿ ನಿಲುಗಡೆ ನೀಡಿದರೆ ಕರಾವಳಿ ಭಾಗದ ಹೆಚ್ಚಿನ ಜನರಿಗೆ ಈ ಪ್ರತಿಷ್ಠಿತ ರೈಲಿನ ಪ್ರಯೋಜನ ಸಿಗಲಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.










