ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ದಕ್ಷಿಣ ಮಧ್ಯ ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬಂಧಿತ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಮಟ್ಟದ ಗಣಿತ - ವಿಜ್ಞಾನ ಮೇಳ, ಸಂಸ್ಕೃತಿ ಮಹೋತ್ಸವವು ಬಾಲ ಭಾರತಿ ಕೇಂದ್ರೀಯ ವಿದ್ಯಾಲಯದ ಆವರಣ ಬಳ್ಳಾರಿ ಇಲ್ಲಿ ಸೆ.4ರಿಂದ ಸೆ.6ರವರೆಗೆ ನಡೆದಿದ್ದು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.

ಬಾಲ
ವರ್ಗದ ವಿಜ್ಞಾನ ಮಾದರಿ ತಯಾರಿ ಸ್ಪರ್ದೆಯಲ್ಲಿ ‘ವಿದ್ಯುತ್ ಶಕ್ತಿ ಸಂರಕ್ಷಣೆ’ ಎಂಬ ವಿಷಯದಲ್ಲಿ 7ನೇ ತರಗತಿಯ ವಿಹಾನ್ ಆರ್ ಕೆ ( ರಾಜೇಶ್ ಕೆ ಮತ್ತು ಅಕ್ಷತಾ ಎ ಪಿ ದಂಪತಿ ಪುತ್ರ) ತೃತೀಯ ಸ್ಥಾನ, ಕಿಶೋರ ವರ್ಗದ ‘ಗಣಿತ ಪತ್ರವಾಚನ’ ಸ್ಪರ್ದೆಯಲ್ಲಿ 10ನೇ ತರಗತಿಯ ಅತೀತ್ ಹೆಚ್ ರೈ ( ಹರೀಶ್ ರೈ ಪಿ ಮತ್ತು ಜಲಜ ಹೆಚ್ ರೈ ದಂಪತಿ ಪುತ್ರ) ತೃತೀಯ ಸ್ಥಾನ, ಕಿಶೋರ ವರ್ಗದ ವಿಜ್ಞಾನ ಮಾದರಿ ತಯಾರಿ ಸ್ಪರ್ದೆಯಲ್ಲಿ ‘ಸೆನ್ಸಾರ್ ವಿಜ್ಞಾನ ಮಾದರಿ’ ಎಂಬ ವಿಷಯದಲ್ಲಿ 10ನೇ ತರಗತಿಯ ಕ್ಷಮೇತ್ ಜೈನ್ ( ಹನೀಶ್ ಕುಮಾರ್ ಮತ್ತು ಶ್ರುತಿ ಕುಮಾರಿ ವೈ ದಂಪತಿ ಪುತ್ರ) ಪ್ರಥಮ ಸ್ಥಾನ ಪಡೆದಿರುತ್ತಾರೆ.
ಈ ಸ್ಪರ್ದೆ
ಗಳಲ್ಲಿ ಪ್ರಥಮ ಸ್ಥಾನ ಪಡೆದ 10 ನೇ ತರಗತಿಯ ಕ್ಷಮೇತ್ ಜೈನ್ ಅಕ್ಟೋಬರ್ 2 ರಿಂದ 4ನೇ ತಾರೀಕಿನವರೆಗೆ ಆಂಧ್ರಪ್ರದೇಶದಲ್ಲಿ ನಡೆಯಲಿರುವ ದಕ್ಷಿಣ ಮಧ್ಯ ಕ್ಷೇತ್ರೀಯ ಮಟ್ಟದ ಸ್ಪರ್ದೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here