






ಪುತ್ತೂರು : ಶ್ರೀ ರಾಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ , ಸವಣೂರು ಪಂಚಾಯತ್ ಇದರ ವಾರ್ಷಿಕ ಮಹಾಸಭೆಯು ಒಕ್ಕೂಟದ ಅಧ್ಯಕ್ಷರಾದ ವಿಜಯ ಈಶ್ವರ ಗೌಡ ರವರ ಅಧ್ಯಕ್ಷತೆಯಲ್ಲಿ ಕುಮಾರಧಾರ ಸಭಾಂಗಣದಲ್ಲಿ ನಡೆಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರು ಕಾರ್ಯದರ್ಶಿ ಪದಾಧಿಕಾರಿಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಡಬ ತಾಲೂಕು ವಲಯ ಮೇಲ್ವಿಚಾರಕರು ನಳಿನಾಕ್ಷಿ , ತಾಲೂಕು ಸಂಪನ್ಮೂಲ ವ್ಯಕ್ತಿ BRP PRI ಧನ್ಯಶ್ರೀ , BRP-EP ರಮ್ಯಾ , ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು.
ಒಕ್ಕೂಟದ ಕಾರ್ಯದರ್ಶಿಯಾದ ಪೂರ್ಣಿಮಾ ಮಹೇಶ್ ಇವರು ಒಕ್ಕೂಟದ ವರದಿಯನ್ನು ವಾಚಿಸಿದರು .ಒಕ್ಕೂಟದ ಲೆಕ್ಕ ಪರಿಶೋಧನಾ ವರದಿಯನ್ನು ಕೋಶಾಧಿಕಾರಿಯಾಗಿರುವ ಸರೋಜಿನಿ .M,ರವರು ವಾಚಿಸಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಈ ಸಭೆಯಲ್ಲಿ ಮಹಿಳಾ ಸಬಕಲೀಕರಣ, ಸಂಜೀವಿನಿ ಒಕ್ಕೂಟದ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕರಾದ ನಳಿನಾಕ್ಷಿರವರು ಸಮುದಾಯ ಬಂಡವಾಳ ನಿಧಿ ಬಗ್ಗೆ, ಸ್ವಸಹಾಯ ಸಂಘಗಳನ್ನು ನಡೆಸುವ ಬಗ್ಗೆ, ಲೋಕೋಸ್ , ಒಕ್ಕೂಟ ನಿರ್ವಹಣೆಯ ಬಗ್ಗೆ, ನವೋದಯ ಸಂಘಗಳ ಸೇರ್ಪಡೆಯ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಿ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ನಡೆಸಿಕೊಟ್ಟರು.
ಒಕ್ಕೂಟದ ಜೊತೆ ಕಾರ್ಯದರ್ಶಿ ಸುಶ್ಮೀತಾರವರು ಒಕ್ಕೂಟದ ಬೈಲವನ್ನು ವಾಚಿಸಿದರು.ಒಕ್ಕೂಟದ ಅಧ್ಯಕ್ಷರಾದ ವಿಜಯ ಈಶ್ವರ ಗೌಡ ರವರು ಎಲ್ಲರನ್ನು ಸ್ವಾಗತಿಸಿ ಅಧ್ಯಕ್ಷ ನೆಲೆಯಲ್ಲಿ ಮಾತನಾಡುತ್ತಾ ಘನ ತ್ಯಾಜ್ಯ ನಿರ್ವಹಣೆ ವಿಲೇವಾರಿ, ಒಕ್ಕೂಟದ ಪದಾಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿ ಸಭೆಗೆ ಶುಭ ಹಾರೈಸಿದರು. ಪಶು ಸಖಿ ಹೇಮಲತಾರವರು ವಂದಿಸಿದರು.
ಮಹಾಸಭೆಯ ನಿರೂಪಣೆಯನ್ನು mbk ಗೀತಾ ಜಿ ಎಸ್ ನಡೆಸಿದರು. LCRP ಉಷಾ ಕುಮಾರಿ, ರೇವತಿ. M ಹಾಗೂ ಕೃಷಿ ಸಖಿ ಜಯಂತಿ ರವರು ಸಹಕರಿಸಿದರು.ಕೊನೆಯಲ್ಲಿ ಅದೃಷ್ಟ ಮಹಿಳೆ ಸ್ಪರ್ಧೆ ಮಾಡಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಒಕ್ಕೂಟದ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸರಕಾರ ನೀಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಲು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ, ಪಂಚಾಯತ್ ಸಿಬ್ಬಂದಿಗಳು ಅಂಗನವಾಡಿ ಕಾರ್ಯಕರ್ತೆಯರು,ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಜೀವಿ .ವಿ ಶೆಟ್ಟಿ, ಗ್ರಂಥಪಾಲಕರು, ಜಲಸಖಿ, ಸ್ತ್ರೀ ಶಕ್ತಿ ಹಾಗೂ ಸಂಜೀವಿನಿ ಸಂಘದ ಸದಸ್ಯರು ಹಾಜರಿದ್ದರು.












