







ಉಪ್ಪಿನಂಗಡಿ: ಸಿಟಿ ಎಲೆಕ್ಟ್ರಾನಿಕ್ಸ್ ಉಪ್ಪಿನಂಗಡಿ ಸಂಸ್ಥೆಯ ಉದ್ಘಾಟನಾ ಪ್ರಯುಕ್ತ ಗ್ರಾಹಕರಿಗೆ ನೀಡಲಾಗಿದ್ದ ಉಚಿತ ಕೂಪನ್‌ಗಳ ಲಕ್ಕಿ ಡ್ರಾ ಸೆ. 10ರಂದು ನಡೆಯಿತು.



ಸಂಸ್ಥೆಯ ಉದ್ಘಾಟನಾ ಕೊಡುಗೆಯ ಅಂಗವಾಗಿ ₹2,000ಕ್ಕಿಂತ ಹೆಚ್ಚಿನ ಖರೀದಿ ಮಾಡಿದ ಗ್ರಾಹಕರಿಗೆ ಉಚಿತ ಕೂಪನ್‌ಗಳನ್ನು ವಿತರಿಸಲಾಗಿತ್ತು. ಈ ಕೂಪನ್‌ಗಳ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಅಡ್ವೊಕೇಟ್ ನೌಶಾದ್ ಉಪ್ಪಿನಂಗಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಸಂಸ್ಥೆಯ ಮಾಲೀಕರಾದ ಟಿ. ಇಸಾಕ್ ಹಾಗೂ ಅಜೀಜ್ ಉಪಸ್ಥಿತರಿದ್ದರು. ಅಲ್ಲದೆ, ಸಿದ್ದೀಕ್ ಮೊಬೈಲ್ ಸೆಂಟರ್, ಕಿಸಾನ್ ಪ್ಯಾಕ್ ಮಾರ್ಟ್‌ನ ಸಿಬ್ಬಂದಿ ಇಕ್ಬಾಲ್ ಹಾಗೂ ಆರ್.ಕೆ. ಫುಟ್‌ವೇರ್ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.





ಲಕ್ಕಿ ಡ್ರಾದಲ್ಲಿ ಕೂಪನ್ ಸಂಖ್ಯೆ 093 ಪ್ರಥಮ ಬಹುಮಾನಕ್ಕೆ, 166 ದ್ವಿತೀಯ ಬಹುಮಾನಕ್ಕೆ ಹಾಗೂ 049 ತೃತೀಯ ಬಹುಮಾನಕ್ಕೆ ಆಯ್ಕೆಯಾದವು.ಪ್ರಥಮ ಬಹುಮಾನವಾಗಿ ಟಾಪ್ ಲೋಡ್ ವಾಷಿಂಗ್ ಮೆಷಿನ್, ದ್ವಿತೀಯ ಬಹುಮಾನವಾಗಿ ಸ್ಮಾರ್ಟ್ ಟಿವಿ ಹಾಗೂ ತೃತೀಯ ಬಹುಮಾನವಾಗಿ ಟಿಲ್ಟಿಂಗ್ ವೆಟ್ ಗ್ರೈಂಡರ್ ನೀಡಲಾಯಿತು. ಲಕ್ಕಿ ಡ್ರಾದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲಾ ಗ್ರಾಹಕರಿಗೆ ಸಿಟಿ ಎಲೆಕ್ಟ್ರಾನಿಕ್ಸ್ ಉಪ್ಪಿನಂಗಡಿ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.










