ಆಲಂಕಾರು: ಶ್ರೀದೇವಿ ಆಪ್ಟಿಕಲ್ಸ್ ಶುಭಾರಂಭ

0

ಆಲಂಕಾರು: ಇಲ್ಲಿನ ಶ್ರೀ ದುರ್ಗಾನುಗ್ರಹ ಕಾಂಪ್ಲೆಕ್ಸ್‌ನಲ್ಲಿ ’ಶ್ರೀ ದೇವಿ ಆಪ್ಟಿಕಲ್ಸ್’ ಸೆ.10ರಂದು ಶುಭಾರಂಭಗೊಂಡಿತು.


ಮಂಗಳೂರಿನ ಖ್ಯಾತ ಕಣ್ಣಿನ ವೈದ್ಯ ಡಾ. ಸುಧೀಂದ್ರ ಎ. ಎನ್. ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸಾ ಸೇವೆಗಳು ಸುಲಭವಾಗಿ ಲಭ್ಯವಾಗಬೇಕು. ಕಣ್ಣಿನ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಆರಂಭಿಕ ಹಂತದಲ್ಲಿಯೇ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ. ದೃಷ್ಟಿ ನಮ್ಮ ಅಮೂಲ್ಯ ಸಂಪತ್ತಾಗಿದೆ. ಶ್ರೀ ದೇವಿ ಆಪ್ಟಿಕಲ್ಸ್ ಮೂಲಕ ಜನರಿಗೆ ಉತ್ತಮ ಸೇವೆ ದೊರೆಯಲಿ ಎಂದು ಹೇಳಿ ಶುಭ ಹಾರೈಸಿದರು.


ಶ್ರೀ ದೇವಿ ಆಪ್ಟಿಕಲ್ಸ್‌ನ ಮಾಲಕಿ ಮಂಜುಳಾ ಸ್ವಾಗತಿಸಿ ಮಾತನಾಡಿ, ಶ್ರೀದೇವಿ ಕಣ್ಣಿನ ಚಿಕಿತ್ಸಾಲಯ ಈ ಹಿಂದೆ ಕಡಬದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಆಲಂಕಾರಿಗೆ ಸ್ಥಳಾಂತರಿಸಲಾಗಿದೆ. ಮಂಗಳೂರಿನ ಖ್ಯಾತ ಕಣ್ಣಿನ ತಜ್ಞ ಡಾ. ಸುಧೀಂದ್ರ ಎ.ಎನ್. ಅವರು ಪ್ರತೀ ಗುರುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಇಲ್ಲಿ ಲಭ್ಯರಿರಲಿದ್ದಾರೆ. ಆಪ್ಟಿಕಲ್ಸ್ ಕ್ಷೇತ್ರದಲ್ಲಿ 14 ವರ್ಷಗಳ ಅನುಭವವಿದ್ದು ಉಪ್ಪಿನಂಗಡಿ, ಉಜಿರೆ ಹಾಗೂ ಬೆಳ್ತಂಗಡಿಯಲ್ಲಿ ಸಂಸ್ಥೆಯನ್ನು ಹೊಂದಿ ಕಣ್ಣಿನ ದೃಷ್ಟಿ ಪರೀಕ್ಷೆ ಮತ್ತು ಕನ್ನಡಕಗಳ ಸೇವೆಯನ್ನು ನೀಡಲಾಗುತ್ತಿದೆ. ಗುಣಮಟ್ಟದ ಸೇವೆಯೊಂದಿಗೆ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಕನ್ನಡಕಗಳನ್ನು ಒದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಆಕರ್ಷಕ ವಿನ್ಯಾಸ ಹಾಗೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಕನ್ನಡಕಗಳನ್ನು ತಯಾರಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.
ಶುಭಾರಂಭದ ಪ್ರಯುಕ್ತ ಉಚಿತ ಕಣ್ಣಿನ ದೃಷ್ಟಿ ಪರೀಕ್ಷೆ ನಡೆಸಲಾಗಿದ್ದು ಹಲವರು ಇದರ ಪ್ರಯೋಜನ ಪಡೆದುಕೊಂಡರು. ಈ ಸಂದರ್ಭದಲ್ಲಿ ಕಟ್ಟಡ ಮಾಲಕಿ ವಿಮಲಾ, ಧರ್ಣಪ್ಪ ಅಳದಂಗಡಿ, ವಾರಿಜ, ರತ್ನ, ಪ್ರಭಾಕರ್, ಗಣೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here