







ಪುತ್ತೂರು: ಶಿವಳ್ಳಿ ಸಂಪದ ಬೊಳುವಾರು ವಲಯದ ನೇತೃತ್ವದಲ್ಲಿ ಸೆ.15ರಿಂದ ಸೆ.21ರ ವರೆಗೆ ಕೆಮ್ಮಾಯಿ ಶ್ರೀ ವಿಷ್ಣು ಮಂಟಪದಲ್ಲಿ ಹರಿವಂಶ ಪುರಣಾ ಪ್ರವಚನ ನಡೆಯಲಿದೆ.
ಜಿಎಲ್ ಸಮೂಹ ಸಂಸ್ಥಗಳ ಮಾಲಕ ಜಿಎಲ್ ಬಲರಾಮ ಆಚಾರ್ಯ ಅವರು ದೀಪ ಪ್ರಜ್ವಲಿಸುವ ಮೂಲಕ ಪ್ರವಚನಕ್ಕೆ ಚಾಲನೆ ನೀಡಲಾಗುತ್ತಿದ್ದು, ಡಾ.ಬೆ.ನಾ ವಿಜಯೀಂದ್ರ ಆಚಾರ್ಯ ಮೈಸೂರು ಅವರು ಪ್ರವಚನ ನೀಡಲಿದ್ದಾರೆ.


ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಜಿ.ಪುರಾಣಿಕ್ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಶಿವಳ್ಳಿ ಸಂಪದ ಬೊಳುವಾರು ವಲಯಾಧ್ಯಕ್ಷ ಅನಂತಕೃಷ್ಣ ಹಡ್ಡಿಲ್ಲಾಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಶಿವಳ್ಳಿ ಸಂಪದ ಪುತ್ತೂರು ತಾಲೂಕು ಅಧ್ಯಕ್ಷ ಸತೀಶ್ ಕೆ.ಎಸ್., ತಾಲೂಕು ಮಹಿಳಾ ಸಂಘದ ಗೌರವಾಧ್ಯಕ್ಷೆ ವತ್ಸಲಾ ರಾಜ್ಞಿ, ಮಹಿಳಾ ಸಂಪದ ಬೊಳುವಾರು ವಲಯದ ಅಧ್ಯಕ್ಷೆ ಅನ್ನಪೂರ್ಣ ಶೇವಿರೆ ಅವರು ಗೌರವ ಉಪಸ್ಥಿತರಿರಲಿದ್ದಾರೆ.



ಸೆ.15ರಂದು ಸಂಜೆ 6ರಿಂದ 8ರವರೆಗೆ, ಸೆ.16ರಂದು ಸಂಜೆ 5.30ರಿಂದ 7.30ರ ವರೆಗೆ, ಸೆ.17ರಂದು ಸಂಜೆ 5ರಿಂದ 7ರ ವರೆಗೆ, ಸೆ.18ರಂದು ಸಂಜೆ 5.30ರಿಂದ 7.30ರ ವರೆಗೆ, ಸೆ.19ರಂದು ಸಂಜೆ 5.30ರಿಂದ 7.30ರ ವರೆಗೆ, ಸೆ.20ರಂದು ಸಂಜೆ 5.30ರಿಂದ 7.30ರ ವರೆಗೆ, ಸೆ.21ರಂದು ಬೆಳಗ್ಗೆ 10ರಿಂದ 11.30ರ ವರೆಗೆ ಪ್ರವಚನ ನಡೆಯಲಿದೆ.ಪ್ರವಚನದ ಕೊನೆಯ ದಿನದಂದು ವೇ| ಮೂ| ವಿಶ್ವಮೂರ್ತಿ ಬಡೆಕ್ಕಿಲ್ಲಾಯ ನೇತೃತ್ವದಲ್ಲಿ ಶ್ರೀ ಚಕ್ರಾಬ್ದ ಮಂಡಲ ಪೂಜೆ, ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಶ್ರೀಕೃಷ್ಣಾಷ್ಟೋತ್ತರ ಶತ ನಾಮಾವಳಿ, ಅಷ್ಟಾವಧಾನ ಸೇವೆ ನಡೆಯಲಿದೆ.
ಸಮಾರೋಪ ಸಮಾರಂಭ, ಮಂಗಳ ಮಂತ್ರಾಕ್ಷತೆ, ಗುರುವಂದನಾ ಕಾರ್ಯಕ್ರಮಕ್ಕೆ ಪ್ರಗತಿ ಆಸ್ಪತ್ರೆಯ ವೈದ್ಯ ಡಾ.ಶ್ರೀಪತಿ ರಾವ್, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಿವಳ್ಳಿ ಸಂಪದ ಪುತ್ತೂರು ತಾಲೂಕು ಅಧ್ಯಕ್ಷ ಸತೀಶ್ ಕೆಎಸ್, ತಾಲೂಕು ಕಾರ್ಯದರ್ಶಿ ಬಾಲಚಂದ್ರ ಮುಚ್ಚಿಂತ್ತಾಯ, ಮಹಿಳಾ ಸಂಪದ ತಾಲೂಕು ಅಧ್ಯಕ್ಷೆ ಪ್ರೇಮಲತಾ ರಾವ್ ಅವರು ಗೌರವ ಉಪಸ್ಥಿತರಿರಲಿದ್ದಾರೆ. ಬೊಳುವಾರು ವಲಯ ಅಧ್ಯಕ್ಷ ಅನಂತಕೃಷ್ಣ ಪಡ್ಡಿಲ್ಲಾಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಲಯ ಕಾರ್ಯದರ್ಶಿ ಹರಿಪ್ರಸಾದ್ ದಾಳಿಂಬ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










