






ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನ ಗ್ರಾಹಕರಾಗಿ ಮಾಡದಿರಲಿ-ಡಾ.ಸೂರ್ಯನಾರಾಯಣ ಕೆ


ಪುತ್ತೂರು:ಈಗಿನ ಕೆಲವು ವಿದ್ಯಾಸಂಸ್ಥೆಗಳು ವ್ಯಾಪಾರಿ ಸಂಸ್ಥೆಗಳಾಗಿ ಮಾರ್ಪಟ್ಟಿದ್ದು ಅಲ್ಲಿ ವ್ಯಾಸಂಗಕ್ಕೆ ಬರುವ ವಿದ್ಯಾರ್ಥಿಗಳನ್ನು ‘ವಿದ್ಯಾರ್ಥಿಗಳು’ ಎಂದು ಭಾವಿಸದೆ “ಗ್ರಾಹಕರು” ಎಂಬುದಾಗಿ ಮಾರ್ಪಟ್ಟಿರೋದು ವಿಪರ್ಯಾಸ. ಸಮಾಜದಲ್ಲಿ ವೈದ್ಯರು, ಇಂಜಿನಿಯರ್ ಹೀಗೆ ಉನ್ನತ ಸ್ಥಾನದಲ್ಲಿರಬೇಕಾದರೆ ಅವರ ಹಿಂದೆ ಶಿಕ್ಷಕರ ಪಾತ್ರ ಅನನ್ಯ. ಶಾಲೆಗೆ ಬಂದ ಮಗುವಿನ ಸೈಕಾಲಜಿ ಸ್ಟಡಿ ಮಾಡುವವರು ಶಿಕ್ಷಕರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ವಿಯಾದಾಗ ಮಾತ್ರ ಅದುವೇ ಜೀವನದ ನಿಜವಾದ ಮಾಕ್ಸ್೯ ಕಾರ್ಡ್ ಆಗಿದೆ ಎಂದು ರೋಟರಿ ಜಿಲ್ಲೆ 3181 ಇದರ 2028-29ರ ಸಾಲಿನ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಡಾ. ಸೂರ್ಯನಾರಾಯಣ ಕೆ.ರವರು ಹೇಳಿದರು.



ಸೆ.12 ರಂದು ಬೈಪಾಸ್ ರಸ್ತೆಯ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ರೋಟರಿ ಕ್ಲಬ್ ಪುತ್ತೂರು ಮತ್ತು ಇನ್ನರ್‌ವೀಲ್ ಕ್ಲಬ್ ಪುತ್ತೂರು ಸಹಭಾಗಿತ್ವದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಜೀವನದ ಸತ್ಯ ಅರಿತು ಶಿಕ್ಷಣ ಧಾರೆಯೆರೆಯುವವನೇ ನಿಜವಾದ ಶಿಕ್ಷಕ-ಪ್ರೊ|ದತ್ತಾತ್ರೇಯ ರಾವ್:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್ ಮಾತನಾಡಿ, ಜೀವನದ ಸತ್ಯ ಅರಿತು ವಿದ್ಯಾರ್ಥಿಗಳಿಗೆ ಶಿಕ್ಷಣ ಧಾರೆಯೆರೆಯುವವನೇ ನಿಜವಾದ ಶಿಕ್ಷಕ. ಆ ಶಿಕ್ಷಕ ತನ್ನ ವೃತ್ತಿ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಎಷ್ಟೇ ತೊಂದರೆ ಅನುಭವಿಸಿದರೂ, ಅಪಮಾನ ಅನುಭವಿಸಿದರೂ ಶಿಕ್ಷಕ ನಗುಮುಖದಿಂದಲೇ ‘ವಿದ್ಯಾರ್ಥಿಗಳ ಭವಿಷ್ಯ ಒಳ್ಳೆಯದಾಗಲೆಂದು’ ಹಾರೈಸುವುದು ‘ ಆಗಿದೆ. ಇಂದಿಲ್ಲಿ ಆಯೋಜನೆ ಮಾಡಿದ ಕಾರ್ಯಕ್ರಮ ಒಂದರ್ಥದಲ್ಲಿ ಭಾವನಾತ್ಮಕತೆಯ ಸಂದೇಶವಾಗಿದೆ ಎಂದರು.
ಡಾ.ಸೂರ್ಯನಾರಾಯಣ ದಂಪತಿಗೆ ಸನ್ಮಾನ..
ರೋಟರಿ ಜಿಲ್ಲೆ 3181 ಇದರ 2028-29ರ ಸಾಲಿನ ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಪೂರ್ವಾಧ್ಯಕ್ಷ ಮೇಜರ್ ಡೋನರ್ ಡಾ. ಸೂರ್ಯನಾರಾಯಣ ಕೆ. ಹಾಗೂ ಅವರ ಪತ್ನಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮನೋರಮಾ ಡಾ ಸೂರ್ಯರವರುಗಳನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಕ್ಲಬ್ ವೃತ್ತಿಪರ ವಿಭಾಗದ ನಿರ್ದೇಶಕ ಸುಜಿತ್ ಡಿ.ರೈ ಮುಖ್ಯ ಅತಿಥಿಗಳ ಪರಿಚಯ ಮಾಡಿದರು.

ಅನಿಸಿಕೆ:
ಸನ್ಮಾನಿತ ನಿವೃತ್ತ ಶಿಕ್ಷಕರ ಪರವಾಗಿ ಈಶ್ವರಮಂಗಲ ಶ್ರೀ ಗಜಾನನ ಹಿರಿಯ ಪ್ರಾ. ಶಾಲೆ ಶಿಕ್ಷಕ ಎನ್.ನರೇಂದ್ರ ಭಟ್ ಹಾಗೂ ಕೆಯ್ಯೂರು ಸರಕಾರಿ ಶಾಲೆಯ ಶಿಕ್ಷಕಿ ವಸಂತಿ ಬಿ.ಎಸ್ ರವರು ವ್ಯಕ್ತಪಡಿಸಿದ ಅನಿಸಿಕೆಯಲ್ಲಿ ರೋಟರಿ ಕಾರ್ಯವನ್ನು ಶ್ಲಾಘಿಸಿದರು.
ಗೌರವಾರ್ಪಣೆ:
ಶಿಕ್ಷಕರಾಗಿದ್ದು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರೋಟರಿ ಪುತ್ತೂರು ಹಾಗೂ ಇತರ ರೋಟರಿ ಕುಟುಂಬದ ಸದಸ್ಯರಾಗಿರುವ ಸುರೇಶ್ ಶೆಟ್ಟಿ, ಪ್ರೊ|ಝೇವಿಯರ್ ಡಿ’ಸೋಜ, ಪ್ರೊ|ದತ್ತಾತ್ರೇಯ ರಾವ್, ಪ್ರೊ|ಸುಬ್ಬಪ್ಪ ಕೈಕಂಬ, ಡಾ.ಶ್ರೀಪತಿ ರಾವ್, ಡಾ.ಗೋಪಿನಾಥ್ ಪೈ, ಕಿಶನ್ ಬಿ.ವಿ, ಪ್ರೀತಾ ಹೆಗ್ಡೆ, ಸತೀಶ್ ತುಂಬ್ಯ, ಸಹದೇವ್, ವಾಲ್ಟರ್ ಡಿ’ಮೆಲ್ಲೋ, ಶೋಭಾ, ಇವಾನ್ ಮಸ್ಕರೇನ್ಹಸ್, ಶಂಕರಿ ಎಂ.ಎಸ್ ಭಟ್, ತನುಜಾ ಝೇವಿಯರ್, ಸಂಧ್ಯಾ ಬೈಲಾಡಿ, ತೆರೆಜಾ ಮಾಡ್ತಾ, ಅನಸೂಯ ಸತೀಶ್, ಜಲಜಾಕ್ಷಿ, ರೇಖಾ ಪ್ರಕಾಶ್, ಮೀನಾಕ್ಷಿ ಸತೀಶ್, ಒಲಿವಿಯಾ ಡಿ’ಮೆಲ್ಲೋ, ಪವಿತ್ರಾ ರೂಪೇಶ್, ಶ್ರೀಲತಾ ಕಿಶನ್, ರೋಟರಿ ಸಿಟಿಯ ಪದ್ಮನಾಭ ಶೆಟ್ಟಿ ಹಾಗೂ ಶ್ಯಾಮಲಾ ಶೆಟ್ಟಿ, ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಶ್ರುತಿ ಎಸ್.ಬಂಗೇರ, ರೋಟರಿ ಸ್ವರ್ಣ ಅಧ್ಯಕ್ಷೆ ಆಶಾ ರೆಬೆಲ್ಲೋ, ಕಾರ್ಯಕ್ರಮದ ಪತ್ರ ವ್ಯವಹಾರ ನಿರ್ವಹಿಸಿದ ಲತಾ, ಒಕ್ಕಲಿಗ ಗೌಡ ಸಮುದಾಯ ಸಂಘದ ಮಾಜಿ ಅಧ್ಯಕ್ಷ ರವಿ ಮುಂಗ್ಲಿಮನೆರವರುಗಳಿಗೆ ಹೂಗುಚ್ಛ ನೀಡಿ ಗೌರವಾರ್ಪಣೆ ಸಲ್ಲಿಸಲಾಯಿತು.
ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಶ್ರುತಿ ಎಸ್.ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇನ್ನರ್‌ವೀಲ್ ಕ್ಲಬ್ ಸದಸ್ಯೆ ರಮಾ ಪ್ರಭಾಕರ್ ಪ್ರಾರ್ಥಿಸಿದರು. ರೋಟರಿ ಪುತ್ತೂರು ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್ ಸ್ವಾಗತಿಸಿ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಮನೋರಮಾ ಸೂರ್ಯ ವಂದಿಸಿದರು. ರೋಟರಿ ಪುತ್ತೂರು ಕಾರ್ಯದರ್ಶಿ ಲೋವಲ್ ಮೇವಾಡ ವರದಿ ಮಂಡಿಸಿದರು. ಕ್ಲಬ್ ವೃತ್ತಿಪರ ವಿಭಾಗದ ನಿರ್ದೇಶಕ ಸುಜಿತ್ ಡಿ.ರೈ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಕಾರ್ಯಕ್ರಮದ ಸಂಯೋಜಕ ಚಿದಾನಂದ ಬೈಲಾಡಿರವರು ಸನ್ಮಾನಿತ ನಿವೃತ್ತ ಶಿಕ್ಷಕರ ಹೆಸರನ್ನು ವಾಚಿಸಿ ಸಭೆಗೆ ಪರಿಚಯಿಸಿದರು. ರೋಟರಿ ಸದಸ್ಯ ಪರಮೇಶ್ವರ ಗೌಡ ಕಾರ್ಯಕ್ರಮ ನಿರೂಪಿಸಿದರು.
27 ಶಿಕ್ಷಕರಿಗೆ ಸನ್ಮಾನ..
ಕೋಡಿಂಬಾಡಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಖ್ಯ ಶಿಕ್ಷಕ ಬಾಲಕೃಷ್ಣ, ಕುಂತೂರು ಸರಕಾರಿ ಉನ್ನತ ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕಿ ಸುಚೇತ ಕುಮಾರಿ, ಸವಣೂರು ಆರೇಲ್ತಡಿ ಸರಕಾರಿ ಹಿ. ಪ್ರಾ ಶಾಲೆ ಶಿಕ್ಷಕ ಜಗನ್ನಾಥ್ ಎಸ್, ಬಡಗನ್ನೂರು ಪಟ್ಟೆ ಪ್ರತಿಭಾ ಪ್ರೌಢಶಾಲೆಯ ಮೋನಪ್ಪ ಎಂ, ಪುತ್ತೂರು ಕಸಬಾ ಶಿವರಾಮ ಕಾರಂತ ಪ್ರೌಢಶಾಲೆಯ ನಾರಾಯಣ ನಾಯ್ಕ್, ಕಣಿಯಾರುಬೈಲು ಸರಕಾರಿ ಕಿರಿಯ ಪ್ರಾ. ಶಾಲೆ ಶಿಕ್ಷಕ ಗಂಗಾಧರ ನಾಯೈಕ್, ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀಧರ ಭಟ್, ನಿಡ್ಪಳ್ಳಿ ಕಕ್ಕೂರು ಸರಕಾರಿ ಹಿ.ಪ್ರಾ ಶಾಲೆ ಮುಖ್ಯ ಶಿಕ್ಷಕಿ ಗ್ರೆಟ್ಟ ಮಸ್ಕರೇನ್ಹಸ್, ಸರ್ವೆ ಭಕ್ತಕೋಡಿ ಸರಕಾರಿ ಹಿ. ಪ್ರಾ ಶಾಲೆ ಮುಖ್ಯ ಶಿಕ್ಷಕಿ ಗೀತಾ ಕುಮಾರಿ, ನಾಣಿಲ ಚಾರ್ವಾಕ ಸರಕಾರಿ ಹಿ.ಪ್ರಾ ಶಾಲೆ ಮುಖ್ಯ ಶಿಕ್ಷಕ ಪದ್ಮಯ್ಯ ಗೌಡ, ರಾಮಕುಂಜ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ ಸತೀಶ್ ಭಟ್, ಆಲಂತಡ್ಕ ಸರಕಾರಿ ಹಿ.ಪ್ರಾ ಶಾಲೆ ಮುಖ್ಯ ಶಿಕ್ಷಕಿ ಕಾತ್ಯಾಯಿನಿ ಕೆ, ಬಡಗನ್ನೂರು ಪಟ್ಟೆ ಶ್ರೀಕೃಷ್ಣ ಹಿ.ಪ್ರಾ ಶಾಲೆ ಶಿಕ್ಷಕ ರಾಮಚಂದ್ರಪ್ಪ ಕೆ, ನೆಹರುನಗರ ಮಂಜಲ್ಪಡ್ಪು ಬಿಇಎಂ ಹಿ. ಪ್ರಾ ಶಾಲೆ ಶಿಕ್ಷಕ ಶಿವಾನಂದಪ್ಪ ಟಿ, ಕಡಬ ಕೇಪು ಸರಕಾರಿ ಹಿ. ಪ್ರಾ ಶಾಲೆಯ ಶಿಕ್ಷಕ ದಾಮೋದರ್ ಕೆ, ಬಜತ್ತೂರು ಕಾಂಚನ ಕೆವಿಎಸ್ ಎಂ ಪ್ರೌಢಶಾಲೆಯ ಶಿಕ್ಷಕ ರಮೇಶ್ ಮಯ್ಯ ಬಿ, ಸವಣೂರು ಸರಕಾರಿ ಉನ್ನತ ಹಿ ಪ್ರಾ ಶಾಲೆ ಶಿಕ್ಷಕಿ ತುಳಸಿ ಎಂ, ಈಶ್ವರಮಂಗಲ ಪಲ್ಲತ್ತಾರು ಸರಕಾರಿ ಹಿ. ಪ್ರಾ ಶಾಲೆ ಶಿಕ್ಷಕ ಸೀತಾರಾಮ ಕೆ.ಜಿ, ಬಜತ್ತೂರು ಕಾಂಚನ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿ. ಪ್ರಾ ಶಾಲೆ ಶಿಕ್ಷಕ ರಾಜೇಶ್ ಕಾರ್ಯಾಪ್ಪ ಆರ್, ಉಪ್ಪಿನಂಗಡಿ ಸರಕಾರಿ ಉನ್ನತ ಪ್ರಾ.ಶಾಲೆಯ ಶಿಕ್ಷಕ ಹನುಮಂತಯ್ಯ, ಕಡಬ ಮೊಗೇರಡ್ಕ ಸರಕಾರಿ ಉನ್ನತ ಪ್ರಾ. ಶಾಲೆಯ ಶಿಕ್ಷಕಿ ಜಯಂತಿ ಪಿ, ಈಶ್ವರಮಂಗಲ ಶ್ರೀ ಗಜಾನನ ಹಿರಿಯ ಪ್ರಾ. ಶಾಲೆ ಶಿಕ್ಷಕ ಎನ್.ನರೇಂದ್ರ ಭಟ್, ರಾಮಕುಂಜ ಸರಕಾರಿ ಉನ್ನತ ಹಿ. ಪ್ರಾ. ಶಾಲೆ ಶಿಕ್ಷಕಿ ಗುಲಾಬಿ ಎಸ್, ಪಾಣಾಜೆ ಸರಕಾರಿ ಉನ್ನತ ಹಿ. ಪ್ರಾ ಶಾಲೆ ಶಿಕ್ಷಕ ಸೀತಾರಾಮ ಭಟ್, ಕೆಯ್ಯೂರು ಸರಕಾರಿ ಶಾಲೆಯ ವಸಂತಿ ಬಿ.ಎಸ್, ಉಪ್ಪಿನಂಗಡಿ ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯ ಶಿಕ್ಷಕ ಶಕುಂತಲಾ ಕೆ.ರವರುಗಳನ್ನು ಸನ್ಮಾನಿಸಲಾಯಿತು.
ನಿರಂತರ ಆಚರಣೆ..
1965 ರಲ್ಲಿ ಪುತ್ತೂರಿನಲ್ಲಿ ಸ್ಥಾಪನೆಯಾದ ಜಿಲ್ಲೆಯ ಹಿರಿಯ ಕ್ಲಬ್ ರೋಟರಿ ಪುತ್ತೂರು ನಿರಂತರವಾಗಿ ನಿವೃತ್ತಗೊಂಡ ಶಿಕ್ಷಕರನ್ನು ಭಾರತ ರತ್ನ ಪ್ರಶಸ್ತಿ ಪುರಸ್ಕೃತ, ದೇಶದ ಪ್ರಥಮ ಶಿಕ್ಷಕ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನದಂದು ಆಯಾ ವರ್ಷ ಗುರುತಿಸಿ ಸನ್ಮಾನಿಸುತ್ತಾ ಬಂದಿದೆ. ಮೂರು ವಿಶ್ವವಿದ್ಯಾನಿಲಯದಲ್ಲಿ ವೈಸ್ ಚಾನ್ಸಲರ್ ಆಗಿರುವ ಭಾರತದ ಉಪ ರಾಷ್ಟ್ರಪತಿಯಾಗಿರುವ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರು ತನ್ನ ಹುಟ್ಟುಹಬ್ಬ ಆಚರಣೆ ಬೇಡ, ತನ್ನ ಹುಟ್ಟುಹಬ್ಬದ ದಿನದಂದು ಅಕ್ಷರ ಕಲಿಸುವ ಶಿಕ್ಷಕರನ್ನು ಗುರುತಿಸಿ ಎಂದಿದ್ದರು. ಸನ್ಮಾನದ ಜೊತೆಗೆ ಶಿಕ್ಷಕರಿಗೆ ಯಾರು ಮಾದರಿ ವ್ಯಕ್ತಿ ಎಂದು ಕ್ಲಬ್ ಸೂಚಿಸಿದ್ದು, ಶಿಕ್ಷಕರು ತಮ್ಮ ಮಾದರಿ ವ್ಯಕ್ತಿ ಯಾರೆಂಬುದು ಸೂಚಿಸಿರುತ್ತಾರೆ. -ಚಿದಾನಂದ ಬೈಲಾಡಿ, ಕಾರ್ಯಕ್ರಮದ ಸಂಯೋಜಕರು










