ಸೆ. 14: ಪುಣ್ಚಪ್ಪಾಡಿ-ನೇರೋಳ್ತಡ್ಕದಲ್ಲಿ 38 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ಮೊಸರುಕುಡಿಕೆ ಉತ್ಸವ

0

ಪುತ್ತೂರು: ಪುಣ್ಚಪ್ಪಾಡಿ-ನೇರೋಳ್ತಡ್ಕ ಶ್ರೀ ಗೌರಿ ಗಣೇಶ ಉತ್ಸವ ಸಮಿತಿಯ ಆಶ್ರಯದಲ್ಲಿ ಸೆ.14 ರಂದು ಪುಣ್ಚಪ್ಪಾಡಿ-ನೇರೋಳ್ತಡ್ಕ ವಿನಾಯಕ ನಗರದ ಗೌರಿಸದನದಲ್ಲಿ ರಮೇಶ್ ಪುದ್ವುಣ್ಣಾಯ ಇವರ ಪೌರೋಹಿತ್ಯದೊಂದಿಗೆ ವೈದಿಕ ಕಾರ್ಯಕ್ರಮ ಹಾಗೂ ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ, ಜರಗಲಿರುವುದು.


ಬೆಳಿಗ್ಗೆ ಪುಣ್ಚಪ್ಪಾಡಿ- ನೇರೋಳ್ತಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಸೂರಪ್ಪ ಗೌಡ ಬದಿಯಡ್ಕ ಅವರು ಧ್ವಜಾರೋಹಣಗೈಯಲಿದ್ದಾರೆ. ಬಳಿಕ ಶ್ರೀ ಗಣಪತಿ ದೇವರ ಮೂರ್ತಿ ಪ್ರತಿಷ್ಠಾಪನೆ, ಭಜನಾ ಕಾರ್ಯಕ್ರಮ, ಗಣಹೋಮ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ (ಪುಣ್ಚಪ್ಪಾಡಿ ಗ್ರಾಮದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ) ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಜರಗಲಿದೆ. ಮಧ್ಯಾಹ್ನ ಶ್ರೀ ಮಹಾಗಣಪತಿ ದೇವರ ಮಹಾಪೂಜೆ- ಅನ್ನಸಂತರ್ಪಣೆ , ಸಂಜೆ ಶ್ರೀ ಗಣಪತಿ ದೇವರ ಮೂರ್ತಿ ವಿಸರ್ಜನಾ ಶೋಭಾಯಾತ್ರೆ ಹಾಗೂ ಜಲಸ್ತಂಭನ ಜರಗಲಿದೆ ಎಂದು ಉತ್ಸವ ಸಮಿತಿಯ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ ದೇವಸ್ಯ, ಅಧ್ಯಕ್ಷ ಮಹೇಶ್ ಕೆ.ಸವಣೂರು ಹಾಗೂ ಕಾರ್‍ಯದರ್ಶೀ ಪ್ರಮೋದ್ ಬೊಳ್ಳಾಜೆ ಮತ್ತು ಗೌರವಾಧ್ಯಕ್ಷರು, ಅಧ್ಯಕ್ಷರು ಹಾಗೂ ಟ್ರಸ್ಟಿಗಳು ಗೌರಿ ಗಣೇಶ ಸೇವಾ ಟ್ರಸ್ಟ್‌ನವರು ತಿಳಿಸಿದ್ದಾರೆ.
ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here