ಸ್ನೇಹ ವಿವಿದೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

0

ಪುತ್ತೂರು : ಸ್ನೇಹ ವಿವಿದೋದ್ಧೇಶ ಸೌಹಾರ್ದ ಸಹಕಾರಿ ಸಂಘದ 2025-26ನೇ ಸಾಲಿನ ಮಹಾಸಭೆ ನೆಹರು ನಗರದ ಮಾಸ್ಟರ್ ಪ್ಲಾನರಿಯ ಸರ್ ಎಂ. ವಿ ಸಭಾಭವನದಲ್ಲಿ ನಡೆಯಿತು.


ಮುಖ್ಯಕಾರ್ಯನಿರ್ವಾಹಣಾಧಿಕಾರಿ ರೇಖಾ ಆನಂದ್ 2025-26ನೇ ಸಾಲಿನ ವರದಿ ವಾಚಿಸಿದರು ಸಂಘವು 2047 ಸದಸ್ಯರನ್ನು ಹೊಂದಿದ್ದು ರೂ.8,95,35,393.84/- ದುಡಿಯುವ ಬಂಡವಾಳ ಹೊಂದಿರುತ್ತದೆ. ವರದಿ ಸಾಲಿನಲ್ಲಿ ಸಂಘವು ರೂ. 65,71,59,230.44/- ವಹಿವಾಟು ನಡೆಸಿ ರೂ 7,32,345.00/- ಲಾಭ ಗಳಿಸಿದೆ ಎಂದು ಹೇಳಿದರು.


ಅಧ್ಯಕ್ಷರಾದ ಅರ್ಜುನ್ ಎಸ್ .ಕೆ ಮಾತನಾಡಿ ನಮ್ಮ ಸಂಘವು ಸಹಕಾರಿ ಕಾಯ್ದೆಗೆ ಅನುಗುಣವಾಗಿ ವ್ಯವಹಾರಿಸಿ ಲಾಭದಾಯಕವಾಗಿ ನಡೆದುಕೊಂಡು ಬರುತ್ತಿದ್ದು ಮುಂದೆಯೂ ಈ ರೀತಿಯಾಗಿ ಬೆಳೆಯಲು ಸದಸ್ಯರು ಸಹಕರಿಸಬೇಕು. ನಮ್ಮ ಸಹಕಾರಿಯ ಸಿಬ್ಬಂದಿಗಳಿಗೆ ಯಾವುದೇ ರೀತಿಯ ಟಾರ್ಗೆಟ್‌ಗಳನ್ನು ನೀಡಿಲ್ಲ ನಮ್ಮ ಸದಸ್ಯರಿಗೆ ಉತ್ತಮ ಸೇವೆ ನೀಡುವ ಮೂಲಕ ಅವರ ಉದ್ದಾರವೇ ನಮ್ಮ ಧ್ಯೇಯವಾಗಿದೆ ಸಂಘವು ಉತ್ತiವಾಗಿ ಸೇವೆ ನೀಡಲು ನಮ್ಮ ಸಿಬ್ಬಂದಿಗಳ ಸಹಕಾರ ಅತ್ಯಮೂಲ್ಯ ಎಂದು ಹೇಳಿ ಸಹಕಾರಿಯ ಬೆಳವಣಿಗೆಯ ಬಗ್ಗೆ ಏನಾದರೂ ಸಲಹೆ ಸೂಚನೆಗಳಿದ್ದರೆ ಪರಿಶೀಲಿಸಿ ಅಳವಡಿಸಲಾಗುವುದು ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು. ಈ ಬಾರಿ ಶೇ.೧೦% ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು.


ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿ.ಯು.ಸಿ ಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಯನ್ನು ಪುರಸ್ಕರಿಸಲಾಯಿತು.
ಸಭೆಯಲಿ ಉಪಾಧ್ಯಕ್ಷ ರಾಘವೇಂದ್ರ ಹೆಚ್.ಎಂ, ನಿರ್ದೇಶಕರಾದ ರಾಘವೇಂದ್ರ ನಾಯಕ್ , ಆಕಾಶ್ ಎಸ್.ಕೆ, ನವೀನ್ ನಾಯಕ್, ಅಕ್ಷಯ್ ಎಸ್.ಕೆ, ರವಿರಾಜ್ ನಾಯ್ಕ್.ಕೆ, ವಿನಯ್ ಕುಮಾರ್ ಎಂ ಎಸ್, ಮುಕ್ತಾ ಎಸ್ ನಾಯಕ್ ಗೌರಿ ಅಕ್ಷಯ್, ಶ್ರೀನಿವಾಸ ಎನ್, ಕೇಶವ. ಕೆ,ಉಪಸ್ಥಿತರಿದ್ದರು.

ನಿರ್ದೇಶಕ ಚಂದ್ರಶೇಖರ ಭಟ್ ಅಂದಾಜು ಆಯ-ವ್ಯಯ , ಮುಂಗಡ ಪತ್ರ ಮಂಡಿಸಿದರು. ಲೆಕ್ಕಿಗ ಪಾಂಡುರಂಗ ನಾಯಕ್ ಲೆಕ್ಕಪರಿಶೋದನಾ ವರದಿ ಮಂಡಿಸಿದರು. ಸದಸ್ಯರಾದ ಕಿಶೋರ್ ಕುಮಾರ್ ರೈ ಸ್ವಾಗತಿಸಿ, ಸಹಕಾರಿಯ ವ್ಯವಸ್ಥಾಪಕ ಹರೀಶ .ಪಿ ಕಾರ್ಯಕ್ರಮ ನಿರೂಪಿಸಿದರು. ಸದಸ್ಯೆ ಮೀನಾಕ್ಷಿ ಬಿ ವಂದಿಸಿದರು. ಸಿಬ್ಬಂದಿಗಳಾದ ಸುಶ್ಮಿತಾ ಎನ್.ಎಸ್, ನವ್ಯ ಬಿಎಸ್, ಅಧೀಕ್ಷಾ ಆರ್.ಕೆ ಸಹಕರಿಸಿದರು

LEAVE A REPLY

Please enter your comment!
Please enter your name here