ಕುಂಬ್ರ ಶ್ರೀಕ್ಷೇತ್ರ ರಾಮಗಿರಿಯಲ್ಲಿ 45ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಂಭ್ರಮ

0

ಸೆ 14 ರಿಂದ 16 ರವರೆಗೆ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು

ಪುತ್ತೂರು : ಒಳಮೊಗ್ರು ಗ್ರಾಮದ ಶ್ರೀ ಕ್ಷೇತ್ರ ರಾಮಗಿರಿ ಕುಂಬ್ರದ ಶ್ರೀ ರಾಮ ಭಜನಾ ಮಂದಿರ ವತಿಯಿಂದ 45ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಮಹೋತ್ಸವವು ಸೆ. 14 ರಿಂದ ಸೆ. 16ರ ವರೆಗೆ ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಮೂರು ದಿನಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೊದಲನೇ ದಿನ ಸೆ.14 ಬೆಳಿಗ್ಗೆ 9:00 ಕ್ಕೆ ಶ್ರೀ ಗಣೇಶ ವಿಗ್ರಹದ ಪ್ರತಿಷ್ಠಾಪನೆ, ಗಣಪತಿ ಹೋಮ, 10 ರಿಂದ ಮಕ್ಕಳಿಗೆ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಭಕ್ತಿಗೀತೆ ನಡೆಯಲಿದೆ.

11 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ 12.45 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 2 ಕ್ಕೆ ಧಾರ್ಮಿಕ ರಸಪ್ರಶ್ನೆ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ, ರಾತ್ರಿ ಭಜನಾ ಸೇವೆ, 7.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸೆ.15 ರಂದು ಬೆಳಿಗ್ಗೆ 9 ಕ್ಕೆ ಗಣಪತಿ ಹೋಮ, 8 ರಿಂದ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ಇದರಲ್ಲಿ ರಂಗೋಲಿ, ಹೂ ಕಟ್ಟುವ ಸ್ಪರ್ಧೆ, ದೇವರ ಹೆಸರು ಹೇಳುವುದು,ಭಕ್ತಿಗೀತೆ ಇರಲಿದೆ. 11 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ 12.45 ಕ್ಕೆ ಮಹಾಪೂಜೆ, ಅಪರಾಹ್ನ 2 ರಿಂದ ವಾಗ್ದೇವಿ ಸಂಗೀತ ಶಾಲೆಯ ಗುರುಗಳಾದ ವಿದುಷಿ ಸವಿತಾ ಪುತ್ತೂರು ಇವರ ಶಿಷ್ಯರಿಂದ ಶಾಸ್ತ್ರೀಯ ಸಂಗೀತ, ರಾತ್ರಿ ಭಜನೆ, 8 ರಿಂದ ಸಾರ್ವಜನಿಕ ರಂಗಪೂಜೆ, 8.30 ರಿಂದ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸೆ.16 ರಂದು ಬೆಳಿಗ್ಗೆ 9 ಕ್ಕೆ ಗಣಪತಿ ಹೋಮ, 9.30 ರಿಂದ ಮಕ್ಕಳಿಗೆ ರಾಮಾಯಣ ವೇಷ ಸ್ಪರ್ಧೆ ಇದರಲ್ಲಿ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತನ ವೇಷ ಹಾಕಲು ಅವಕಾಶ, ವಿಭಾಗ 1 ರಲ್ಲಿ 1 ರಿಂದ 3 ವರ್ಷ, 2 ರಲ್ಲಿ 3 ರಿಂದ 6 ವರ್ಷದ ಅಂಗನವಾಡಿ ಮತ್ತು ಸ್ಥಳೀಯ ಮಕ್ಕಳಿಗೆ ಅವಕಾಶ ಇದೆ.11 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ 12.45 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 2 ರಿಂದ ಶ್ರೀ ಕೃಷ್ಣ ಯಕ್ಷಗಾನ ಕಲಾ ಸಂಘ ಕೌಡಿಚ್ಚಾರು ಇದರ ಬಾಲ ಪ್ರತಿಭೆಗಳಿಂದ ಪೌರಾಣಿಕ ಯಕ್ಷಗಾನ ಬಯಲಾಟ ‘ಸಹದೇವ ದಿಗ್ವಿಜಯ’ ನಡೆಯಲಿದೆ. ಸಂಜೆ ಭಜನೆ, ರಾತ್ರಿ 6 .30 ರಿಂದ ಮಹಾಪೂಜೆ, 7.30 ಕ್ಕೆ ಶ್ರೀ ಗಣೇಶ ವಿಗ್ರಹದ ಶೋಭಾಯಾತ್ರೆ ಆರಂಭ, ಇದೇ ವೇಳೆ 7.30 ರಿಂದ ಕುಂಬ್ರ ಅಶ್ವತ್ಥ ಕಟ್ಟೆಯ ಬಳಿ ಸ್ನೇಹಸಾಗರ ರಿಕ್ಷಾ ಚಾಲಕ ಮಾಲಕರ ಸಂಘದ ಪ್ರಾಯೋಜಕತ್ವದಲ್ಲಿ ವಯಲಿನ್ ವಾದನದೊಂದಿಗೆ ಸಿಂಗಾರಿ ಮೇಳ ಪ್ರದರ್ಶನಗೊಳ್ಳಲಿದೆ.


ಈ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಊರ ಪರವೂರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಶ್ರೀರಾಮ ಭಜನಾ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ರತನ್ ರೈಕುಂಬ್ರ, ಪ್ರಧಾನ ಕಾರ್ಯದರ್ಶಿ ರಾಜ್‌ಪ್ರಕಾಶ್ ರೈ ಕುಂಬ್ರ, ಕೋಶಾಧಿಕಾರಿ ಅಂಕಿತ್ ರೈ ಕುಯ್ಯಾರು, ಉಪಾಧ್ಯಕ್ಷರುಗಳಾದ ಜಗನ್ನಾಥ ಪೂಜಾರಿ ಮುಡಾಲ, ಸದಾಶಿವ ನಾಯ್ಕ ಶೇಖಮಲೆ, ಲೆಕ್ಕ ಪರಿಶೋಧಕ ಶೇಖರ ರೈ ಕುರಿಕ್ಕಾರ,ಜೊತೆ ಕಾರ್ಯದರ್ಶಿ ಉದಯ ಮಡಿವಾಳ ಕುಂಬ್ರ, ಶ್ರೀ ಗಣೇಶೋತ್ಸವ ಸಮಿತಿಯ ಸಂಚಾಲಕ ಹರೀಶ್ ರೈ ಮುಗೇರು ಹಾಗೂ ವಿವಿಧ ಸಮಿತಿಯ ಸಂಚಾಲಕರುಗಳು, ಪದಾಧಿಕಾರಿಗಳು, ಸದಸ್ಯರುಗಳ ಪ್ರಕಟಣೆ ತಿಳಿಸಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ
ಸೆ.14 ರಂದು ರಾತ್ರಿ 9 ಕ್ಕೆ ವಿಶ್ವಭಾರತಿ ಕಲಾವಿದರು ಕುಂಬ್ರ ಅಭಿನಯಿಸುವ ತುಳು ಹಾಸ್ಯಮಯ ನಾಟಕ ‘ಪೊಣ್ಣು ಪೊಕ್ಕಡೆ’ ಪ್ರದರ್ಶನಗೊಳ್ಳಲಿದೆ. ಸೆ.15 ರಂದುಅಪರಾಹ್ನ 2 ರಿಂದ ಶಾಸ್ತ್ರೀಯ ಸಂಗೀತ, ರಾತ್ರಿ 9 ರಿಂದ ಬೃಂದಾವನ ನಾಟ್ಯಾಲಯ ಕುಂಬ್ರ ಬಳಗದವರಿಂದ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ.ಸೆ.16 ರಂದು ಅಪರಾಹ್ನ 2 ರಿಂದ ಪೌರಾಣಿಕ ಯಕ್ಷಗಾನ ಬಯಲಾಟ ‘ಸಹದೇವ ದಿಗ್ವಿಜಯ’, ರಾತ್ರಿ 7.30 ರಿಂದ ಕಟ್ಟೆಯ ಬಳಿ ವಯಲಿನ್ ವಾದನದೊಂದಿಗೆ ಸಿಂಗಾರಿ ಮೇಳ ಪ್ರದರ್ಶನ ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮಗಳ ವೈಭವ
ಸೆ.14 ರಂದು ಬೆಳಿಗ್ಗೆ 11 ಕ್ಕೆ ಧಾರ್ಮಿಕ ಸಭೆ, ಕುಕ್ಕೆಶ್ರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಇಂಜಾಡಿ ದೀಪ ಪ್ರಜ್ವಲನೆ, ವಸಂತ ಲಕ್ಷ್ಮೀ ಮುಕ್ರಂಪಾಡಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಶಾಸಕರಾದ ಅಶೋಕ್ ಕುಮಾರ್ ರೈ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸೆ.15 ರಂದು ಕುಂಪಲ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ದೀಪ ಪ್ರಜ್ವಲನೆ, ವಕೀಲರಾದ ತೇಜಸ್ ನಾಯ್ಕ್ ಕೊಂಬೆಟ್ಟು ಧಾರ್ಮಿಕ ಉಪನ್ಯಾಸ, ವಿಧಾನ ಪರಿಷತ್ತು ಸದಸ್ಯ ಕಿಶೋರ್ ಬೊಟ್ಯಾಡಿ ಸಹಿತ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸೆ.16 ರಂದು ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಉಪ ನಿರೀಕ್ಷಕರಾದ ಸುಷ್ಮಾರವರ ದೀಪ ಪ್ರಜ್ವಲನೆ, ವಕೀಲರಾದ ಕೃಷ್ಣ ಪ್ರಸಾದ್ ನಡ್ಸಾರ್‌ರವರಿಂದ ಧಾರ್ಮಿಕ ಉಪನ್ಯಾಸ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಾಜಿ ಶಾಸಕರುಗಳಾದ ಸಂಜೀವ ಮಠಂದೂರು, ಶಕುಂತಳಾ ಟಿ.ಶೆಟ್ಟಿ ಸಹಿತ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here