






ಪಾಣಾಜೆ:ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಆರ್ಲಪದವು ಶ್ರೀ ಉಳ್ಳಾಕುಲು, ಪಿಲಿಭೂತ ಪರಿವಾರ ದೈವಗಳ ವರ್ಷಾವದಿ ಜಾತ್ರೋತ್ಸವ ಬರುವ ಜನವರಿ 22 ರಿಂದ 28 ರವರೆಗೆ ನಡೆಯಲಿದ್ದು ಅದರ ಆಮಂತ್ರಣ ಪತ್ರವನ್ನು ಸೆ.12 ರಂದು ರಣಮಂಗಲ ದೇವಸ್ಥಾನದಲ್ಲಿ ಬಿಡುಗಡೆ ಗೊಳಿಸಲಾಯಿತು.


ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀಕೃಷ್ಣ ಬೊಳಿಲ್ಲಾಯ ಕಡಮಾಜೆ ಇವರು ಬಿಡುಗಡೆ ಗೊಳಿಸಿದರು.ಊರ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.













