






ರಾಮಕುಂಜ: ಗ್ರಾಮದ ಗೋಳಿತ್ತಡಿ ನಿವಾಸಿ ಬಾಪುಂಞ (82ವ.) ಅವರು ಅನಾರೋಗ್ಯದಿಂದ ಸೆ.10ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಇವರು ಗೋಳಿತ್ತಡಿಯಲ್ಲಿ ಅಂಗಡಿ ಹೊಂದಿದ್ದು ದಿನಸಿ ವ್ಯಾಪರ ಮಾಡುತ್ತಿದ್ದರು. ಜಾತಿ, ಮತ ಭೇದವಿಲ್ಲದೆ ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.













