ನಮ್ಮ ಬಗ್ಗೆ

ಸುದ್ದಿ ಬಿಡುಗಡೆ – ನಮ್ಮ ಬಗ್ಗೆ

ಮಾಧ್ಯಮ, ಸಂವಹನ ಮತ್ತು ಮಾಹಿತಿ ಕ್ಷೇತ್ರದಲ್ಲಿ ಸುದ್ದಿ ಸಮೂಹ ಸಂಸ್ಥೆ ವಿಶೇಷ ಛಾಪು ಮೂಡಿಸಿದೆ. ಗ್ರಾಮೀಣ ಪತ್ರಿಕೋದ್ಯಮದಿಂದ ಹಿಡಿದು ಜನರ ಮೂಲಭೂತ ಅವಶ್ಯಕತೆಗಳಿಗಾಗಿನ ಎಲ್ಲಾ ಮಾಹಿತಿಗಳನ್ನು ಮತ್ತು ಸೇವೆಗಳನ್ನು ಒದಗಿಸಿಕೊಡುವಲ್ಲಿ ಸುದ್ದಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಮಾಹಿತಿ ಆಧಾರಿತ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪಾರ ಜನಮನ್ನಣೆಗಳಿಸಿರುವ ಸುದ್ದಿ ಪತ್ರಿಕೆಗಳು ಗ್ರಾಮೀಣ ಭಾಗದ ಪ್ರತಿಯೋರ್ವನನ್ನು ತಲುಪುವ ಸಂವಹನ ಮಾಧ್ಯಮವಾಗಿ ಬೆಳೆದು ಬಂದಿದೆ. ೧೯೮೪-೮೫ ರಲ್ಲಿ ಪತ್ರಿಕೋದ್ಯಮದ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಪ್ರವೇಶಿಸಿದ ಸುದ್ದಿ ಇಂದು ಸುಳ್ಯ ಮತ್ತು ಬೆಳ್ತಂಗಡಿಗಳಲ್ಲಿ ವಾರ ಪತ್ರಿಕೆ ಹಾಗೂ ಪುತ್ತೂರಿನಲ್ಲಿ ದಿನಪತ್ರಿಕೆಯಾಗಿ ಹೊರಹೊಮ್ಮುತ್ತಿದೆ. ತಾಲೂಕಿನ ಸರ್ವರಿಗೂ ಪತ್ರಿಕೆ ತಲುಪಬೇಕೆನ್ನುವ ದೃಷ್ಠಿಯಿಂದ ಜಗತ್ತಿನೆಲ್ಲೆಡೆ ಇರುವ ತಾಲೂಕಿನವರು ಪತ್ರಿಕೆ ಪಡೆಯಬೇಕೆಂಬ ಹಿನ್ನೆಲೆಯಲ್ಲಿ ಸುದ್ದಿ ಬಿಡುಗಡೆ ಇ-ಪತ್ರಿಕೆಯೂ ಲಭ್ಯವಾಗುತ್ತಿದೆ. ಸುಳ್ಯದಲ್ಲಿ ಸುದ್ದಿ ಚಾನೆಲ್, ಸುದ್ದಿ ಶಿಕ್ಷಣ ಉದ್ಯೋಗ ಮಾಹಿತಿ ಪಾಕ್ಷಿಕ ಪತ್ರಿಕೆ ಸುದ್ದಿಯ ಇನ್ನೆರಡು ಮಾಧ್ಯಮ ಮುಖಗಳು. ಮಂಗಳೂರು ಬೆಂಗಳೂರುಗಳಲ್ಲಿಯೂ ಮಾಹಿತಿ ಮತ್ತು ಸೇವೆ ನೀಡುವಲ್ಲಿ ಸುದ್ದಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಶಿಕ್ಷಣ ಮಾಹಿತಿ, ಉದ್ಯೋಗ ಮಾಹಿತಿ, ಕಂಪ್ಯೂಟರ್ ಶಿಕ್ಷಣ, ವಿವಿಧ ಸ್ಪರ್ಧಾತ್ಮಕ ತರಬೇತಿಗಳೂ ನಿರಂತರವಾಗಿ ನಡೆಯುತ್ತಿವೆ.

ಪತ್ರಿಕೆ ಬೆಳೆದು ಬಂದ ದಾರಿ

1985ರಲ್ಲಿ ಸುಳ್ಯದ ಭ್ರಷ್ಟ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಂಬಿಬಿಎಸ್ ಓದಿದ ವೈದ್ಯರೊಬ್ಬರು ಗ್ರಾಹಕರ ವೇದಿಕೆಯ ಮೂಲಕ ಹಚ್ಚಿದ ಹೋರಾಟದ ಕಿಡಿ ಬಳಿಕ ಕರಪತ್ರದ ಮೂಲಕ ಜನಮೆಚ್ಚುಗೆ ಪಡೆದಾಗ ಹೋರಾಟಕ್ಕೆ ತೋರಿದ ಮುಂದಿನ ದಿಕ್ಕು ಇಂದಿನ ಸುದ್ದಿ ಪತ್ರಿಕೆ. ಅಂದು ಸುಳ್ಯದಲ್ಲಿ ತಮ್ಮ ಸ್ವಂತ ವಾಹನ ಮತ್ತು ಸ್ವಂತ ಖರ್ಚಿನಲ್ಲಿ ಹಳ್ಳಿ ಹಳ್ಳಿಗೆ ತೆರಳಿ ಜನಬೆಂಬಲ ಪಡೆದು ಡಾ. ಯು.ಪಿ ಶಿವಾನಂದ ಅವರು ಪತ್ರಿಕೆಯನ್ನು ಮುನ್ನೆಡೆಸಿದರು. ಬಳಿಕ ಬೆಳ್ತಂಗಡಿ, ಪುತ್ತೂರಿನಲ್ಲಿಯೂ ಪತ್ರಿಕೆ ಆರಂಭಿಸಲು ಇದು ಪ್ರೇರಣೆ ನೀಡಿತು. ಆಂದೋಲನ, ಅಭಿಯಾನ, ಜನಜಾಗೃತಿಯೇ ಪತ್ರಿಕೆಯ ಮೂಲ ತಿರುಳಾಗಿರುವುದು ಗ್ರಾಮೀಣ ಮಟ್ಟದಲ್ಲಿ ಪ್ರತಿಯೋರ್ವನ ಪ್ರೀತಿಯಿಂದ ಜನಪ್ರಿಯತೆ ಗಳಿಸಲು ‘ಸುದ್ದಿ ಬಿಡುಗಡೆ’ ಯಶಸ್ವಿಯಾಗಿದೆ.

ಪತ್ರಿಕೆಯಲ್ಲೇನಿದೆ :

ತಾಲೂಕಿನ ರಾಜಕೀಯ, ಘಟನೆಗಳ ವರದಿಗಳ ಜೊತೆಗೆ ಹುಟ್ಟು ಹಬ್ಬದಿಂದ ಹಿಡಿದು ಮರಣದವರೆಗೆ, ಶುಭ ವಿವಾಹ ಫೋಟೋ ಸಮೇತ ವರದಿಗಳು, ಪ್ರಶಸ್ತಿಗಳು, ವರ್ಗಾವಣೆ ಪದೋನ್ನತಿ, ನೇಮಕ, ಪದಾಧಿಕಾರಿ ಆಯ್ಕೆ, ಇಂದಿನ ಕಾರ್ಯಕ್ರಮ ಅಧಿಕಾರಿಗಳ ಮಾಹಿತಿ, ಇಲಾಖಾ ಮಾಹಿತಿ, ಶೈಕ್ಷಣಿಕ ಉದ್ಯೋಗ ಮಾಹಿತಿ, ಸಾಧಕರ ಸಂದರ್ಶನ, ಪರವೂರ ಸುದ್ದಿ, ಜಿಲ್ಲೆ, ದೇಶ ವಿದೇಶ ಸುದ್ದಿಗಳು, ಕೃಷಿ, ಆರೋಗ್ಯ, ಕಲೆ-ಸಾಹಿತ್ಯಿಕ ಅಂಕಣಗಳು

ಸುದ್ದಿ ಮಾಹಿತಿ :

ಮನುಷ್ಯನ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಾಹಿತಿ ಹಾಗೂ ಅನುಭವ ಅತ್ಯಂತ ಪ್ರಧಾನ ಪಾತ್ರವಹಿಸುತ್ತವೆ. ಮಾಹಿತಿಯ ಕೊರತೆಯಿದ್ದರೆ ಯಾವುದೇ ಕಾರ್‍ಯದಲ್ಲಿ ಒಂದು ಹೆಜ್ಜೆ ಇಡಲೂ ಕಷ್ಟಸಾಧ್ಯ. ಸಾಮಜಿಕ, ಧಾರ್ಮಿಕ, ರಾಜಕೀಯ ಮತ್ತು ತನ್ನ ಖಾಸಗಿ ಕಾರ್ಯಗಳಲ್ಲಿಯೂ ಮನುಷ್ಯ ಅನೇಕಾನೇಕ ಮಾಹಿತಿ ಹೊಂದಿರಬೇಕಾಗುತ್ತದೆ. ಇದಕ್ಕಿಂತಲೂ ಜಟಿಲವಾದದು ಏನೆಂದರೆ ಯಾವುದೇ ವಿಷಯದ ಬಗ್ಗೆ ಮಾಹಿತಿ ಪಡೆಯುವುದು ಯಾರಿಂದ ? ಈ ಪ್ರಶ್ನೆಗೆ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲಿ ಪ್ರತಿಯೋರ್ವನು ಸುದ್ದಿ ಮಾಹಿತಿ ಕೇಂದ್ರದ ಮೂಲಕ ಉತ್ತರ ಕಂಡುಕೊಂಡಿದ್ದಾನೆ ಎಂದರೆ ತಪ್ಪಾಗಲಾರದು. ತಾಲೂಕಿನ ಸಮಗ್ರ ಮಾಹಿತಿ ಕೈಪಿಡಿಯನ್ನೂ ಸಿದ್ದಮಾಡಿಕೊಂಡು ಯಾವುದೇ ವ್ಯಕ್ತಿಗೆ ಯಾವುದೇ ಕ್ಷೇತ್ರದ ಮಾಹಿತಿ ನೀಡಲು ಬದ್ಧವಾಗಿದೆ. ಉದಾಹರಣೆಗೆ: ಮರದ ಕೆಲಸಗಾರರು, ಮೇಸ್ತ್ರಿಗಳು, ಗಾರೆಯವರು, ಅಡಿಕೆ ತೆಗೆಯುವವರು, ಪೈಂಟ್ ಕೆಲಸಗಾರರು, ಕಬ್ಬಿಣದ ಕೆಲಸಗಾರರು ಇತ್ಯಾದಿ ಕೆಲಸಗಾರರ ಮಾಹಿತಿಯನ್ನು ಜನರಿಗೆ ನೀಡುತ್ತಿದೆ. ಅಲ್ಲದೆ ಹೊಯಿಗೆ, ಜಲ್ಲಿ, ಕೆಂಪು ಕಲ್ಲು, ಬೋರ್ ವೆಲ್ ಇತ್ಯಾದಿ ಸೇವೆಗಳನ್ನು ಕೂಡ ಜನರಿಗೆ ನೀಡುತ್ತಿದೆ. ಒಟ್ಟಿನಲ್ಲಿ ಸಾರ್ವಜನಿಕರಿಗೆ ದಿನನಿತ್ಯ ಏನೆಲ್ಲಾ ಸೇವೆಗಳಿಗಾಗಿ ಮಾಹಿತಿ ಬೇಕೋ ಅದೆಲ್ಲವೂ ಸುದ್ದಿ ಮಾಹಿತಿ ಕೇಂದ್ರದ ಮೂಲಕ ಅಥವಾ ಗ್ರಾಮೀಣ ಭಾಗದ ಸುದ್ದಿ ಸೆಂಟರ್‌ಗಳ ಮೂಲಕ ದೊರಕುತ್ತಿರುವುದು ಪುತ್ತೂರಿನ ಮಾಹಿತಿ ಕ್ಷೇತ್ರದಲ್ಲಿನ ಒಂದು ವಿಶೇಷ ಸಾಧನೆಯೆನ್ನಬಹುದು.

ಇನ್ನು ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಜಗತ್ತಿನ ಇತರೇ ಮಾಹಿತಿಗಳನ್ನು ಪೂರೈಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಸುದ್ದಿ ಮಾಹಿತಿ ಟ್ರಸ್ಟ್ ಇಂದು ರಾಜ್ಯ ಮಟ್ಟದ ಶಿಕ್ಷಣ ಉದ್ಯೋಗ ಮಾಹಿತಿ ಎಂಬ ಪಾಕ್ಷಿಕ ಪತ್ರಿಕೆಯನ್ನು ನಡೆಸುತ್ತಿದೆ.

ಸುದ್ದಿ ಸೆಂಟರ್

ಮಾಹಿತಿ, ವರದಿ, ಜಾಹಿರಾತು ಮತ್ತು ವಿವಿಧ ಸೇವೆಗಳ ಸಮರ್ಪಕ ಕೊಡು ಕೊಳ್ಳುವಿಕೆಯ ದೃಷ್ಠಿಯಿಂದ ಕಡಬ, ನೆಲ್ಯಾಡಿ, ಉಪ್ಪಿನಂಗಡಿ ಹಾಗೂ ವಿಟ್ಲದಲ್ಲಿ ಸಂಸ್ಥೆಯ ಅಧಿಕೃತ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಪುತ್ತೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ 25 ಸೆಂಟರ್‌ಗಳು ಹಾಗೂ ಪುತ್ತೂರು ಪಟ್ಟಣ ವ್ಯಾಪ್ತಿಯಲ್ಲಿ12 ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಕಂಪ್ಯೂಟರ್ ಇಂಟರ್ನಟ್ ವ್ಯವಸ್ಥೆ ಹೊಂದಿದ ಈ ಸೆಂಟರ್ ಗಳು ಗ್ರಾಮದ ಸುದ್ದಿಗಳನ್ನು ಮಾಹಿತಿಗಳನ್ನು ನೇರವಾಗಿ ಜನರಿಗೆ ತಿಳಿಸುವ ವ್ಯವಸ್ಥೆಯನ್ನು ಮಾಡುತ್ತಿವೆ.

ಸುದ್ದಿ ಪ್ರತಿನಿಧಿಗಳು:

ಪತ್ರಿಕೆಯಲ್ಲಿ ಗ್ರಾಮೀಣ ಭಾಗದ ನ್ಯೂಸ್‌ಗಳಿಗೆ ಮಹತ್ವ ಕೊಡುತ್ತಿರುವುದರಿಂದ ಪ್ರತೀ ಗ್ರಾಮ ಪಂಚಾಯತ್ ಭಾಗದಿಂದ ವರದಿಗಾರಿಕೆ, ಜಾಹಿರಾತು ಸಂಗ್ರಾಹಕ್ಕಾಗಿ ಪ್ರತಿನಿಧಿಗಳ ನೆಟ್‌ವರ್ಕ್ ಹೊಂದಲಾಗಿದೆ. ಪುತ್ತೂರು ತಾಲೂಕಿನ 67 ಗ್ರಾಮಗಳಲ್ಲಿ ಒಬ್ಬರಂತೆ ಪ್ರತಿನಿಧಿಗಳಿದ್ದಾರೆ. ಆ ಗ್ರಾಮದ ಸುದ್ದಿಗಳನ್ನು, ಗ್ರಾಮದ ಜನರಿಗೆ ಬೇಕಾದ ಮಾಹಿತಿ, ಸೇವೆಗಳನ್ನು ನೀಡುವಲ್ಲಿ ಈ ಪ್ರತಿನಿಧಿಗಳು ಪ್ರಮುಖ ಪಾತ್ರ ವಹಿಸುತ್ತಾರೆ.

ಪರವೂರ ಸುದ್ದಿ :

ನಮ್ಮೂರಿನ ಜನರು ಇತರ ದೇಶಗಳಲ್ಲಿ ಊರುಗಳಲ್ಲಿ ಮಾಡುತ್ತಿರುವ ಸಾಧನೆ, ಸಾಮಾಜಿಕ ಕಾರ್ಯಗಳು ನಮ್ಮೂರಿನ ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿರುವ ವಿಭಾಗವೇ ‘ಪರವೂರಲ್ಲಿರುವ ಪುತ್ತೂರಿನವರು’ ವಿಭಾಗ. ಪುತ್ತೂರಿನಲ್ಲಿನ ಯಾವುದೇ ನ್ಯೂಸ್‌ಗಳು ಪ್ರಕಟವಾಗುವಂತೆ ಪರವೂರಲ್ಲಿರುವ ಪುತ್ತೂರಿನವರ ಸುದ್ದಿಯೂ ಈ ವಿಭಾಗದಲ್ಲಿ ಪ್ರಕಟವಾಗುತ್ತದೆ. ಪರವೂರಲ್ಲಿದ್ದು, ವಿಶೇಷ ಸಾಧನೆಗೈದವರ ಸಂದರ್ಶನ ಮಾಡಿ ಅವರ ಸಂಪೂರ್ಣ ವರದಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತಿದೆ.

ಉದ್ಯೋಗ ವಿಭಾಗ

ಸುದ್ದಿ ಉದ್ಯೋಗ ಮಾಹಿತಿ ಕೇಂದ್ರ ದಿನೇಶ ಭವನದಲ್ಲಿ ಯಾವುದೇ ಸರಕಾರಿ/ ಖಾಸಗಿ ಉದ್ಯೋಗಗಳ ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ, ತರಬೇತಿ ನೀಡಲಾಗುತ್ತಿದೆ. ಸ್ಥಳೀಯವಾಗಿ ಹಾಗೂ ಕಂಪೆನಿಗಳಿಗೆ ಖಾಸಗಿ ಉದ್ಯೋಗಗಳಿಗಾಗಿ ನೊಂದಾವಣೆ ಮತ್ತು ಅಭ್ಯರ್ಥಿಗಳನ್ನು ಬೇಕಾಗಿದಲ್ಲಿ ಕೇಂದ್ರದ ಮೂಲಕ ವ್ಯವಸ್ಥೆ ಮಾಡಲಾಗುತ್ತದೆ. ವಿವಿಧ ಕಂಪೆನಿಗಳಿಗೆ ಅಭ್ಯರ್ಥಿಗಳಿಗಾಗಿ ಈ ಕೇಂದ್ರದಲ್ಲಿ ಸಂದರ್ಶನ ನಡೆಯುತ್ತದೆ.

ಶಿಕ್ಷಣ ವಿಭಾಗ

ಸುದ್ದಿ ಶಿಕ್ಷಣ ವಿಭಾಗದ ಮೂಲಕ ಎಸ್‌ಎಸ್‌ಎಲ್‌ಸಿ, ಪಿಯುಸಿ ಬಳಿಕ ಮುಂದೇನು?, ವಿವಿಧ ಕೋರ್ಸುಗಳ ಮಾಹಿತಿ, ಶಿಕ್ಷಣ ಸಂಸ್ಥೆಗಳ ಮಾಹಿತಿ, ಪ್ರವೇಶ ಪರೀಕ್ಷೆಗಳ ಮಾಹಿತಿ, ಆನ್‌ಲೈನ್ ಪ್ರವೇಶಾತಿ ಪ್ರಕ್ರಿಯೆ, ಮಂಗಳೂರು-ಬೆಂಗಳೂರಿನ ಶಿಕ್ಷಣ ಸಂಸ್ಥೆಗಳ ಜೊತೆಗೆ ಸಂಪರ್ಕ ವ್ಯವಸ್ಥೆ ಕಲ್ಪಿಸುವುದು, ಬಗ್ಗೆಗಿನ ಉಚಿತ ಮಾಹಿತಿ ದಿನೇಶಭವನದಲ್ಲಿ ನೀಡಲಾಗುತ್ತಿದೆ.

ಕಂಪ್ಯೂಟರ್ ಶಿಕ್ಷಣ ವಿಭಾಗ

ಸುದ್ದಿ ಕಂಪ್ಯೂಟರ್ ಶಿಕ್ಷಣ ವಿಭಾಗದ ಮೂಲಕ ಬೇಸಿಕ್ ಕಂಪ್ಯೂಟರ್ ತರಬೇತಿಗಳು ಹಾಗೂ ಪ್ರಮಾಣ ಪತ್ರದ ಕೋರ್ಸುಗಳು, ಡಿಸೈನಿಂಗ್, ಗ್ರಾಫಿಕ್ಸ್ ಕೋರ್ಸುಗಳನ್ನು ನೀಡಲಾಗುತ್ತಿದೆ. ಮಾತ್ರವಲ್ಲದೇ ಕೇಂದ್ರ ಸರಕಾರದ ಡಿಜಿಟಲ್ ಸಾಕ್ಷರತಾ ಅಭಿಯಾನದ ಮೂಲಕ ಡಿಜಿಟಲ್ ತರಬೇತಿಗಳನ್ನು ಗ್ರಾಮೀಣ ಮಟ್ಟದಲ್ಲಿ ನೀಡಲಾಗುತ್ತಿದೆ.

ಪತ್ರಿಕೆ (www.suddimahithi.com)

ತಾಲೂಕಿನ ಜನತೆ ತಮ್ಮ ಸ್ಥಳೀಯ ಸುದ್ದಿಗಳಿಗಾಗಿ, ಮಾಹಿತಿಗಾಗಿ ಸ್ಥಳೀಯ ಪತ್ರಿಕೆಯನ್ನು ಬಯಸುವಂತೆ ಪರವೂರಿನಲ್ಲಿ ಉದ್ಯೋಗ, ಶಿಕ್ಷಣ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ತಾಲೂಕಿನ ಜನತೆ ಇಲ್ಲಿನ ನ್ಯೂಸ್ ಹಾಗೂ ಮಾಹಿತಿಗಳನ್ನು ತಿಳಿದುಕೊಳ್ಳಲು ಬಯಸುವುದೂ ಸಹಜವಾಗಿದೆ. ಈ ದಿಶೆಯಲ್ಲಿ ಸುದ್ದಿ ಬಿಡುಗಡೆ ಇ-ಪೇಪರ್ ಮೂಲಕ (www.suddimahithi.com) ಪ್ರತಿ ದಿವಸ ಮುಂಜಾನೆ ಅಪ್‌ಲೋಡ್ ಮಾಡಲಾಗುತ್ತಿದೆ. ಈ ತಾಣದಲ್ಲಿ ಪುತ್ತೂರು ದಿನಪತ್ರಿಕೆ, ಸುಳ್ಯ ಹಾಗೂ ಬೆಳ್ತಂಗಡಿ ವಾರಪತ್ರಿಕೆ ಹಾಗೂ ‘ಸುದ್ದಿ ಶಿಕ್ಷಣ ಉದ್ಯೋಗ’ ಪಾಕ್ಷಿಕ ಪತ್ರಿಕೆ ಸಮಯಾನುಸಾರವಾಗಿ ಲಭ್ಯವಾಗುತ್ತಿವೆ.

ಆನ್ಲೈನ್ ನ್ಯೂಸ್ (www.suddinews.com)

ತಂತ್ರಜ್ಞಾನ ಬೆಳೆದಂತೆ ‘ಸುದ್ದಿ’ ಕೂಡ ಆಧುನಿಕ ಬದುಕಿಗೆ ಪೂರಕವಾಗಿ ಮಾಹಿತಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿಯುತ್ತಿದೆ. ತಾಲೂಕಿನ ಕ್ಷಣಕ್ಷಣದ ಸುದ್ದಿ-ಮಾಹಿತಿಗಳನ್ನು ಓದುಗರಿಗೆ ತಕ್ಷಣಕ್ಕೆ ನೀಡಲು ಆನ್‌ಲೈನ್ ನ್ಯೂಸ್ ಅಂತರ್ಜಾಲ (www.suddinews.com) ಪ್ರಾರಂಭಿಸಲಾಗಿದೆ. ಕ್ಷಣಕ್ಷಣದ ಸುದ್ದಿಗಳು ಮಾತ್ರವಲ್ಲದೇ ವಿವಿಧ ಇಲಾಖೆಗಳ ಮಾಹಿತಿಗಳು, ಸುತ್ತೋಲೆಗಳು, ಸೌಲಭ್ಯ-ಯೋಜನೆಗಳ ವಿವರ, ಜನಪ್ರತಿನಿಧಿಗಳ/ ಇಲಾಖಾಧಿಕಾರಿಗಳ ಮಾಹಿತಿ, ವಿವಿಧ ಅಗತ್ಯ ಸಂಪರ್ಕ ವಿಳಾಸ ಹಾಗೂ ದೂರವಾಣಿ, ಶಿಕ್ಷಣ- ಉದ್ಯೋಗಗಳ ಮಾಹಿತಿ, ಕೃಷಿ-ಆರೋಗ್ಯ-ಸಾಹಿತ್ಯಕ ಅಂಕಣಗಳು, ಪೇಟೆ ಧಾರಣೆ, ಧಾರ್ಮಿಕ ಕ್ಷೇತ್ರಗಳ ಮಾಹಿತಿ, ಶಿಕ್ಷಣ ಸಂಸ್ಥೆಗಳ ಮಾಹಿತಿ ಹಾಗೂ ಇನ್ನಿತರ ಸಾರ್ವಜನಿಕ ಉಪಯೋಗಿ ಮಾಹಿತಿಗಳು ಸಮಯಾನುಸಾರವಾಗಿ ಅಪ್‌ಡೇಟ್ ಮಾಡಲಾಗುತ್ತಿದೆ. ತಾಲೂಕಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ಸಾಕಷ್ಟು ಮುಂಚಿತವಾಗಿ ಕಾರ್ಯಕ್ರಮಗಳ ಕ್ಯಾಲೆಂಡರ್‌ನಲ್ಲಿ ಪ್ರಕಟಿಸಲಾಗುತ್ತಿದೆ.

‘ಸುದ್ದಿ ಆಪ್’ : www.suddinews.comನಲ್ಲಿ ದೊರೆಯುವ ಎಲ್ಲಾ ನ್ಯೂಸ್ ಹಾಗೂ ಮಾಹಿತಿಗಳು ಪ್ರತಿಯೊಬ್ಬನೂ ತನಗೆ ಬೇಕಾದ ಸಂದರ್ಭದಲ್ಲಿ ಅಂಗೈಯಲ್ಲೇ ಪಡೆಯಬೇಕೆಂಬ ಹಿನ್ನೆಲೆಯಲ್ಲಿ ‘ಸುದ್ದಿ ಆಪ್’ ಬಿಡುಗಡೆಗೊಳಿಸಲಾಗಿದೆ.

ಸುದ್ದಿ ವಾಟ್ಸಪ್

ನ್ಯೂಸ್, ಮಾಹಿತಿಗಳ ಪಡೆಯುವಿಕೆ ಮತ್ತು ಪಬ್ಲಿಕ್ ಪ್ರಮೋಷನ್‌ಗಾಗಿ ವಾಟ್ಸ್ಯಾಪ್ ಮೂಲಕ ಓದುಗರಿಗೆ ನ್ಯೂಸ್ ಲಿಂಕ್ ನೀಡಲಾಗುತ್ತಿದೆ. ಯಾವುದೇ ಸಮಸ್ಯೆ ಹಾಗೂ ಕಾರ್ಯಕ್ರಮಗಳ ಮಾಹಿತಿಗಳನ್ನು ———- ಈ ನಂಬರ್‌ಗೆ ವಾಟ್ಸ್ಯಾಪ್ ಮಾಡಬಹುದಾಗಿದೆ. ನೈಜ ವರದಿಗಳನ್ನು ಪತ್ರಿಕೆ ಹಾಗೂ ಆನ್‌ಲೈನ್ ನ್ಯೂಸ್‌ನಲ್ಲಿ ಪ್ರಕಟಿಸಲಾಗುತ್ತಿದೆ. ಜನರಿಗೆ ಸುದ್ದಿಗಳು ಹಾಗೂ ಮಾಹಿತಿಗಳು ತಕ್ಷಣಕ್ಕೆ ಲಭ್ಯವಾಗುವಂತೆ ಓದುಗರ ಮೊಬೈಲ್‌ಗಳಿಗೆ ವಾಟ್ಸ್ಯಾಪ್ ಮೂಲಕ ನ್ಯೂಸ್ ಲಿಂಕ್ ನೀಡಲಾಗುತ್ತಿದೆ. ಅಲ್ಲದೇ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಜಾಹಿರಾತುಗಳನ್ನು ಪಬ್ಲಿಕ್ ವಾಟ್ಸ್ಯಾಪ್ ಗ್ರೂಪ್‌ಗಳಲ್ಲಿ ನ್ಯೂಸ್ ಜೊತೆ ಕಳುಹಿಸಿ ಪ್ರಮೋಷನ್ ಸರ್ವೀಸ್ ನೀಡಲಾಗುತ್ತಿದೆ.

ಸುದ್ದಿ ಸರ್ವೀಸ್

ಸುದ್ದಿ ಸರ್ವೀಸ್ ವಿಭಾಗದ ಮೂಲಕ ತಾಲೂಕಿನ ಜನತೆಗೆ ವಿವಿಧ ರೀತಿಯ ಮಾಹಿತಿ ಮತ್ತು ಸರ್ವೀಸ್‌ಗಳನ್ನು ನೀಡಲಾಗುತ್ತಿದೆ. ಯಾವುದೇ ರೀತಿಯ ವಾಣಿಜ್ಯ/ ವ್ಯಾಪಾರ ಮಳಿಗೆಗಳ ಸಂಪೂರ್ಣ ವಿವರವನ್ನು ಹೊಂದಲಾಗಿದ್ದು ಯಾರೇ ಮಾಹಿತಿ ಕೇಳಿದರೂ ಸಮರ್ಪಕವಾಗಿ ನೀಡಲು ‘ಸುದ್ದಿ ಸರ್ವಿಸ್’ ಬದ್ದವಾಗಿದೆ. ಈ ಮೂಲಕ ಪ್ರತಿಯೊಬ್ಬ ಜಾಹಿರಾತುದಾರ/ ವ್ಯಾಪಾರ ಮಳಿಗೆಯವರಿಗೆ ಪೂರ್ಣ ಪ್ರಮಾಣದ ಪ್ರಮೋಷನ್ ಸರ್ವೀಸ್ ನೀಡಲಾಗುತ್ತಿದೆ.

ಉದ್ಯೋಗ, ಮನೆ, ಕಟ್ಟಡ ಬಾಡಿಗೆ/ಖರೀದಿ ವಿಭಾಗ

ತಾಲೂಕಿನ ಪ್ರತಿಯೊಬ್ಬ ವ್ಯಾಪಾರ ಮಳಿಗೆಯವರಿಗೆ ಹಾಗೂ ಪರವೂರಿನಿಂದ ಪುತ್ತೂರು, ಸುಳ್ಯ, ಬೆಳ್ತಂಗಡಿಗಳಿಗೆ ಬರುವ ಎಲ್ಲರಿಗೂ ‘ಸುದ್ದಿ ಸರ್ವಿಸ್’ ಸಾಕಷ್ಟು ಪ್ರಯೋಜನಕಾರಿಯಾಗುತ್ತಿದೆ. ಅಧಿಕಾರಿಗಳು, ಪ್ರವಾಸಿಗರು ಯಾರೇ ಬಂದಾಗಲೂ ಅವರಿಗೆ ಉಳಿದುಕೊಳ್ಳಲು ವಸತಿ, ಮನೆ ಬಗ್ಗೆ ಮಾಹಿತಿ ಮತ್ತು ಸರ್ವೀಸ್ ಸುದ್ದಿ ಮಾಹಿತಿ ಕೇಂದ್ರದ ಮೂಲಕ ನೀಡಲಾಗುತ್ತಿದೆ. ಸುದ್ದಿ ಉದ್ಯೋಗ ವಿಭಾಗದ ಮೂಲಕ ವಿವಿಧ ವ್ಯಾಪಾರ ಮಳಿಗೆ ಹಾಗೂ ಕಚೇರಿಗಳಿಗೆ ಮತ್ತು ಮಂಗಳೂರು ಬೆಂಗಳೂರಿನಲ್ಲಿರುವ ಕಂಪೆನಿಗಳಿಗೆ ಸ್ಥಳೀಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೊಡಲಾಗುತ್ತಿದೆ. ಯಾವುದೇ ಶಿಕ್ಷಣ ಮಾಡಿದ ಅಭ್ಯರ್ಥಿಗಳು ಉದ್ಯೋಗ ವಿಭಾಗದಲ್ಲಿ ನೋಂದಣಿ ಮಾಡಿಕೊಂಡರೆ ಅವರಿಗೆ ಆಯಾ ವಿದ್ಯಾರ್ಹತೆಗನುಗುಣವಾಗಿ ಜಾಬ್ ಪ್ಲೇಸ್‌ಮೆಂಟ್ ಮಾಡಿಕೊಡಲಾಗುತ್ತಿದೆ.

ಸುದ್ದಿ ಸರ್ವೀಸ್ ಮೂಲಕ ನೀಡಲಾಗುತ್ತಿರುವ ಪ್ರಮುಖ ಸೇವೆಗಳು

* ಉದ್ಯೋಗ

* ಮನೆ, ಕಟ್ಟಡ ಬಾಡಿಗೆ/ಖರೀದಿ

* ವೈದ್ಯಕೀಯ ಮಾಹಿತಿ / ಮೆಡಿಸಿನ್ ಸರ್ವೀಸ್

* ಸುದ್ದಿ ಟೂರ್‍ಸ್ & ಟ್ರಾವೆಲ್ಸ್ – ಬಸ್ಸು, ರೈಲು, ಬಾಡಿಗೆ ವಾಹನಗಳ ಮುಂಗಡ ಬುಕ್ಕಿಂಗ್

* ಹೊಟೇಲ್, ವಸತಿ, ಸಭಾಭವನ, ಮದುವೆ ಹಾಲ್ ಬುಕ್ಕಿಂಗ್

* ಮಂಗಳೂರು, ಬೆಂಗಳೂರುಗಳಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸರ್ವೀಸ್, ಶಿಕ್ಷಣ ಸಂಸ್ಥೆಗಳ ಸಂಪರ್ಕ ಹಾಗೂ ಕೋರ್ಸುಗಳ ಮಾಹಿತಿ

* ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಇತರೇ ಪುಸ್ತಕಗಳನ್ನು ಆರ್ಡರ್ ಮೇರೆಗೆ ತರಿಸಿಕೊಡುವ ಸರ್ವೀಸ್

ಜನಪರ ಆಂದೋಲನ, ಜನಜಾಗೃತಿ, ಶಾಂತಿಯುತ ಸಮಾಜಕ್ಕಾಗಿ ವಿವಿಧ ಹೋರಾಟ

ಕಳೆದ 25-30 ವರ್ಷಗಳಿಂದ ಈ ಪತ್ರಿಕೆಗಳು ಅನೇಕ ಸಾಮಾಜಿಕ ಜಾಗೃತಿಯನ್ನು ನಡೆಸಿದ್ದು, ಅವುಗಳ ಕೆಲವು ನಿದರ್ಶನಗಳು:

ಕಳಪೆ ರಸ್ತೆಗಳ ಬಗ್ಗೆ ಜನರಲ್ಲಿ ಜಾಗೃತಿ

ಅನಧಿಕೃತ ಶರಾಬು ಅಂಗಡಿಗಳ ವಿರುದ್ಧ ಆಂದೋಲನ

ಕಳಪೆ ಮತ್ತು ಸ್ಥಗಿತಗೊಂಡ ಕಾಮಗಾರಿಗಳ ಬಗ್ಗೆ ವರದಿ

ಶಿಕ್ಷಣ/ಉದ್ಯೋಗ ಅವಕಾಶಗಳ ಮಾಹಿತಿ ಪ್ರಕಟಣೆ- ಮಾಹಿತಿ ಹಬ್ಬ

ಬಲಾತ್ಕಾರದ ಬಂದ್‌ಗಳ ವಿರುದ್ಧ ಜನಜಾಗೃತಿ

ಕೋಮು ಗಲಭೆಗಳ ವಿರುದ್ಧ ಜನಜಾಗೃತಿ, ಸಾಮರಸ್ಯಕ್ಕಾಗಿ ಪ್ರಯತ್ನ.

1990ರಲ್ಲಿ ಜಿಲ್ಲಾ ಸಾಕ್ಷರತಾ ಸಮಿತಿಯ ಮೂಲಕ ಪತ್ರಿಕೆಗಳಲ್ಲಿ 3 ತಾಲೂಕುಗಳಲ್ಲಿ ಸಾಕ್ಷರತಾ ಜಾಗೃತಿಗೆ ಬೆಂಬಲ Awareness

2002ರಲ್ಲಿ ಸುಳ್ಯ, ಬೆಳ್ತಂಗಡಿ, ಪುತ್ತೂರು ತಾಲೂಕುಗಳಲ್ಲಿ ‘ಸಮಗ್ರ ಮಾಹಿತಿ’ ಪುಸ್ತಕಗಳ ಬಿಡುಗಡೆ.

ಗ್ರಾಮೀಣ ಮಾಹಿತಿ ತಂತ್ರಜ್ಞಾನದ ಬಗ್ಗೆ ಬೆಂಗಳೂರಿನ  (Indian Institute of Science) ಇಲ್ಲಿ ನಡೆದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಪ್ರಬಂಧ ಮಂಡನೆ, ವೀಡಿಯೋ ಪ್ರದರ್ಶನ.

2004ರಲ್ಲಿ ಜಾರ್ಖಂಡ್ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆಗಳ ಆಹ್ವಾನದ ಮೇರೆಗೆ ಗ್ರಾಮೀಣ ಮಾಹಿತಿ ತಂತ್ರಜ್ಞಾನದ ಕುರಿತು ರಾಂಚಿ ಮತ್ತು ಭುವನೇಶ್ವರಗಳಲ್ಲಿ ಉಪನ್ಯಾಸ/ಪ್ರಾತ್ಯಕ್ಷಿಕೆ. (ಒಟ್ಟು ಒಂದು ವಾರ)

2004ರಲ್ಲಿ ರಾಜ್ಯ ಪ್ರವಾಸ-ಶೈಕ್ಷಣಿಕ ಮಾಹಿತಿ ಸಂಗ್ರಹ. ರಾಜ್ಯದ ಸಮಗ್ರ ಶೈಕ್ಷಣಿಕ ಮತ್ತು ಶಿಕ್ಷಣ ಸಂಸ್ಥೆಗಳ ಮಾಹಿತಿಯ ಸಂಗ್ರಹ. ಶಿಕ್ಷಣ ಕ್ಷೇತ್ರ ವಿವಿಧ ಸಾಧ್ಯತೆಗಳು, ಅವಕಾಶಗಳ ಮಾಹಿತಿ ಸಂಗ್ರಹ.

26-6-2004 ಸುಳ್ಯದಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಮಾಹಿತಿಯ ಪ್ರದರ್ಶನ ಮತ್ತು ಶಿಕ್ಷಣ ತಜ್ಞರಿಂದ ಶೈಕ್ಷಣಿಕ ಉಪನ್ಯಾಸ ಕಾರ್ಯಕ್ರಮ.

10-9-2004ರಂದು ಮಡಿಕೇರಿಯಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಮಾಹಿತಿ ಪ್ರದರ್ಶನ ಮತ್ತು ಶೈಕ್ಷಣಿಕ ಉಪನ್ಯಾಸ ಕಾರ್ಯಕ್ರಮ,

2004-05 ಸುಳ್ಯ, ಬೆಳ್ತಂಗಡಿ, ಪುತ್ತೂರು ತಾಲೂಕುಗಳ ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಮಾಹಿತಿಗಳ ಪ್ರದರ್ಶನ, ಉಪನ್ಯಾಸ

ಸುಳ್ಯ, ಬೆಳ್ತಂಗಡಿ, ಪುತ್ತೂರಿನ ಹಳ್ಳಿಹಳ್ಳಿಗಳಲ್ಲಿ ಸುದ್ದಿ ಮಾಹಿತಿ ಕೇಂದ್ರಗಳ ಸ್ಥಾಪನೆ, ಉಚಿತ ಮಾಹಿತಿ ನೀಡುವಿಕೆ ಮತ್ತು ಸೇವಾ ಕೇಂದ್ರಗಳ ಸ್ಥಾಪನೆ.

ಕರ್ನಾಟಕ AIDS Awareness Programme  ಬಗ್ಗೆ ಮಂಗಳೂರಿನಲ್ಲಿ ನಡೆದ ಕಾರ್ಯಾಗಾರದಲ್ಲಿ ‘ಮಾಧ್ಯಮಗಳಲ್ಲಿ ಜನಜಾಗೃತಿ’ ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡನೆ.

2010ರಲ್ಲಿ ಸುಳ್ಯದ ಸುದ್ದಿ ಬಿಡುಗಡೆ ಪತ್ರಿಕೆಗೆ 25 ವರ್ಷ ತುಂಬಿದಾಗ `ಸುದ್ದಿ-25 ಸುಳ್ಯ ಹಬ್ಬ’ ಎಂಬ ಹಬ್ಬವನ್ನು ಸಂಘಟಿಸಿ ಎರಡು ತಿಂಗಳುಗಳ ಕಾಲ 12 ವಿಚಾರ ಸಂಕಿರಣಗಳು, 7 ಕ್ರೀಡಾಕೂಟಗಳು, ತಾಲೂಕು ಮಟ್ಟದ ಒಂದು ಬೃಹತ್ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ, ಎರಡು ದಿನಗಳ ಕಾಲ ಹಲವಾರು ಸಭಾ ಕಾರ್ಯಕ್ರಮ, ಗ್ರಾಮವಾರು ಹಾಗೂ ತಾಲೂಕು ಮಟ್ಟ, ಪರವೂರ ಸುಳ್ಯದವರು ಹೀಗೆ ಸುಮಾರು 60 ಜನರಿಗೆ ಸನ್ಮಾನ, ಶೈಕ್ಷಣಿಕ ಮಾಹಿತಿ ಮತ್ತು ಪ್ರದರ್ಶನ, ಬೃಹತ್ ಉದ್ಯೋಗ ಮೇಳ

2011ರಲ್ಲಿ ಬೆಳ್ತಗಂಡಿ ಸುದ್ದಿ ಬಿಡುಗಡೆಗೆ 25 ವರ್ಷ ತುಂಬಿದಾಗ `ಬೆಳ್ತಂಗಡಿ ಹಬ್ಬ’ ಸಂಘಟನೆ

2015ರಲ್ಲಿ 1) ಸಾಮಾಜಿಕ ಶಾಂತಿ ಸೌಹಾರ್ದತೆ ಕಾಪಾಡುವ ದೃಷ್ಠಿಯಿಂದ ಸುದ್ದಿ ವೇದಿಕೆ ಮೂಲಕ ‘ಬಲಾತ್ಕಾರದ ಬಂದ್’ ವಿರುದ್ಧದ ಆಂದೋಲನ – ಜನಜಾಗೃತಿ

2) ವಾಟ್ಸ್ಯಾಪ್, ಫೇಸ್‌ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶ, ನಿಂದನಾತ್ಮಕ ಸಂದೇಶ, ಬ್ಲ್ಯಾಕ್‌ಮೇಲ್ ಮಾಡುವವರ ವಿರುದ್ಧ ಸುದ್ದಿ ವೇದಿಕೆ ವತಿಯಿಂದ ಆಂದೋಲನ, ಜಾಗೃತಿ ಅಭಿಯಾನ

ಸುದ್ದಿ ಸಮೂಹ ಸಂಸ್ಥೆ

ಸುದ್ದಿ ಸಮೂಹ ಸಂಸ್ಥೆಯು ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಸುದ್ದಿ ಬಿಡುಗಡೆ ಪತ್ರಿಕಾ ಕಾರ್ಯಾಲಯ ಹೊಂದಿದ್ದು, ವಿವಿಧ ಕಡೆ ಕಚೇರಿ, ಉಪಕಚೇರಿಗಳನ್ನು ಹೊಂದಿದೆ.

* ಪುತ್ತೂರು: (ಪ್ರಧಾನ ಕಚೇರಿ) ಸುದ್ದಿ ಬಿಡುಗಡೆ ಕಾರ್ಯಾಲಯ, ಹಳೇ ಬಜ್ಹಾರ್ ಅಂಚೆ ಕಚೇರಿ ಬಳಿ, ಪುತ್ತೂರು, ದ.ಕ.

08251-231949, 233949, 9986416802 (ಮಾಹಿತಿ & ಸರ್ವೀಸ್), 9620372389 (ನ್ಯೂಸ್ ವಿಭಾಗ), 9986416820 (ಜಾಹಿರಾತು ವಿಭಾಗ)

ಇ-ಮೇಲ್: [email protected][email protected][email protected]

* ಸುಳ್ಯ: ಸುದ್ದಿ ಬಿಡುಗಡೆ ಕಾರ್ಯಾಲಯ, ಶ್ರೀಕೃಷ್ಣ ಕಾಂಪ್ಲೆಕ್ಸ್, ಸುಳ್ಯ 08257-230230, M: 9620516768

* ಬೆಳ್ತಂಗಡಿ: ಸುದ್ದಿ ಬಿಡುಗಡೆ ಕಾರ್ಯಾಲಯ, ಬಸ್ ನಿಲ್ದಾಣದ ಬಳಿ, Ph: 08256-232211, M: 9739860192

* ಮಂಗಳೂರು: ಸುದ್ದಿ ಸೆಂಟರ್, ನೆಲ ಅಂತಸ್ತು, ಕ್ಯಾಪಿಟಲ್ ಬಿಲ್ಡಿಂಗ್, ಜಿಲ್ಲಾಧಿಕಾರಿ ಕಚೇರಿ ಬಳಿ, ಸ್ಟೇಟ್‌ಬ್ಯಾಂಕ್, ಮಂಗಳೂರು Ph: 0824-2427457  M: 9986416879

* ಸುಬ್ರಹ್ಮಣ್ಯ: ಸುದ್ದಿ ಸೆಂಟರ್ Ph: 08257-281320, M: 9739165627

* ಉಪ್ಪಿನಂಗಡಿ: ಸುದ್ದಿ ಸೆಂಟರ್ ಮತ್ತು ಮಾಹಿತಿ ಕೇಂದ್ರ, ಮಾದರಿ ಶಾಲಾ ಬಳಿ, ಉಪ್ಪಿನಂಗಡಿ 574441 Ph: 08251-251949

* ಕಡಬ: ಸುದ್ದಿ ಸೆಂಟರ್ ಮತ್ತು ಮಾಹಿತಿ ಕೇಂದ್ರ, ಗ್ರಾ.ಪಂ. ಕಟ್ಟಡ, ಮುಖ್ಯ ರಸ್ತೆ ಕಡಬ 574221 Ph: 08251-260949, 9513782166

* ನೆಲ್ಯಾಡಿ: ಸುದ್ದಿ ಸೆಂಟರ್ ಮತ್ತು ಮಾಹಿತಿ ಕೇಂದ್ರ, ತೋಮ್ಸನ್ ಕಾಂಪ್ಲೆಕ್ಸ್ ನೆಲ್ಯಾಡಿ, Ph: 08251-254949, 9513781056

* ವಿಟ್ಲ: ಸುದ್ದಿ ಸೆಂಟರ್ ಮತ್ತು ಮಾಹಿತಿ ಕೇಂದ್ರ, ಹೀರಾ ಟವರ್, ಜ್ಯೋತಿಕಾ ಸ್ಟುಡಿಯೋ ಮೇಲ್ಬಾಗ, ಖಾಸಗಿ ಬಸ್‌ನಿಲ್ದಾಣ, ವಿಟ್ಲ, ಬಂಟ್ವಾಳ ತಾಲೂಕು, ದ.ಕ., Ph: 08255-238182

ಸುದ್ದಿ ಶಿಕ್ಷಣ, ಉದ್ಯೋಗ, ತರಬೇತಿ ಕೇಂದ್ರಗಳು

* ಸುದ್ದಿ ಶಿಕ್ಷಣ, ಉದ್ಯೋಗ, ತರಬೇತಿ ಕೇಂದ್ರ, 2ನೇ ಮಹಡಿ, ದಿನೇಶ್ ಭವನ, ಎಂ.ಟಿ. ರಸ್ತೆ, ಪುತ್ತೂರು Ph: 08251-238949, M: 7829503541

* ಸುದ್ದಿ ಶಿಕ್ಷಣ, ಉದ್ಯೋಗ, ತರಬೇತಿ ಕೇಂದ್ರ, ಶ್ರೀಹರಿ ಕಾಂಪ್ಲೆಕ್ಸ್, ಸುಳ್ಯ Ph: 08257-232600, M: 9986416484

* ಸುದ್ದಿ ಶಿಕ್ಷಣ, ಉದ್ಯೋಗ, ತರಬೇತಿ ಕೇಂದ್ರ, ಸುವರ್ಣ ಆರ್ಕೆಡ್, ಸಂತೆಕಟ್ಟೆ ಬಳಿ, ಬೆಳ್ತಂಗಡಿ Ph: 08256-232911, M: 9620372412

* ಸುದ್ದಿ ಮಾಹಿತಿ ಕೇಂದ್ರ, ಪುರಸಭಾ ವಾಣಿಜ್ಯ ಸಂಕೀರ್ಣ, ಮುಖ್ಯರಸ್ತೆ, ಪುತ್ತೂರು Ph: 08251-232388, M: 8095882011