







ಕಾಣಿಯೂರು: ಕುಂಬ್ಲಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 30ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಸೆ 14ರಂದು ನಡೆಯಿತು. ಬೆಳಿಗ್ಗೆ ಶ್ರೀ ದೇವರ ಆರಾಧನೆ ಆರಂಭಗೊಂಡು, ಧಾರ್ಮಿಕ ಸಭೆ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಶ್ರೀ ಗಣೇಶನ ವಿಗ್ರಹ ಶೋಭಾಯಾತ್ರೆ ವೈಭವ ಸಂಭ್ರಮದಿಂದ ನಡೆಯಿತು.


ಧಾರ್ಮಿಕ ಸಭೆ: ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಬ್ಲಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ವಿಜಯಕುಮಾರ್ ಸೊರಕೆ ವಹಿಸಿದ್ದರು. ಕುಂಬ್ಲಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷೆ ಚಂದ್ರಕಲಾ ಜಯರಾಮ್ ಅರುವಗುತ್ತು, ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಮೊಕ್ತೇಸರ ನಾರ್ಣಪ್ಪ ಗೌಡ ಮಾಚಿಲ, ಶ್ರಿ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ, ಸುಳ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ನ್ಯಾಯವಾದಿ ವೆಂಕಪ್ಪ ಗೌಡ ಮಾಚಿಲ, ಶ್ರೀ ಕ್ಷೇತ್ರ ದೈಪಿಲ ಸೇವಾ ಪ್ರತಿಷ್ಟಾನದ ಅಧ್ಯಕ್ಷ ಪ್ರದೀಪ್ ಆರ್ ಗೌಡ ಅರುವಗುತ್ತು, ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣೇಶ್ ಕುಂಬ್ಲಾಡಿ, ಪುತ್ತೂರು ತೆರಿಗೆ ಸಲಹೆಗಾರ ಆನಂದ ಖಂಡಿಗ, ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಪಂಗಡ ಸಂಚಾಲಕ ಪದ್ಮನಾಭ ಅಂಬುಲ, ನಾಣಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್ಡಿಎಂಸಿ ಅಧ್ಯಕ್ಷ ವಸಂತ ದಲಾರಿ, ಕುಂಬ್ಲಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವ ಸಲಹೆಗಾರರಾದ ಯು.ಪಿ ರಾಮಕೃಷ್ಣ ಗೌಡ, ಪ್ರವೀಣ್ ಕುಂಟ್ಯಾನ, ಲಿಂಗಪ್ಪ ಗೌಡ ಅಂಬುಲ, ಶೇಖರ ಗೌಡ ಅಂಬುಲ, ಧರ್ಣಪ್ಪ ಗೌಡ ಅಂಬುಲ, ವಿಶ್ವನಾಥ ಅಂಬುಲ, ಸಮಿತಿ ಅಧ್ಯಕ್ಷ ಗಂಗಾಧರ ಅಂಬುಲ, ಉಪಾಧ್ಯಕ್ಷ ರಾಘವ ಕೆಳಗಿನಕೇರಿ, ಕಾರ್ಯದರ್ಶಿ ಸಂದೇಶ್ ಅಂಬುಲ, ಕೋಶಾಧಿಕಾರಿ ಪದ್ಮನಾಭ ಅಂಬುಲ, ಜತೆ ಕಾರ್ಯದರ್ಶಿ ದಿನೇಶ್ ಕುಕ್ಕುನಡ್ಕ ಉಪಸ್ಥಿತರಿದ್ದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ವಿಜಯಕುಮಾರ್ ಸೊರಕೆ ಸ್ವಾಗತಿಸಿ, ನ್ಯಾಯವಾದಿ ವಿಜಿತ್ ಮಾಚಿಲ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.




ವೈಭವದ ಶೋಭಾಯಾತ್ರೆ: ಶ್ರೀ ಗಣೇಶ ವಿಗ್ರಹದ ಶೋಭಾಯಾತ್ರೆಯು ವೈಭವದಿಂದ ನಡೆಯಿತು. ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಿಂದ ಹೊರಟು, ಶ್ರೀ ಕ್ಷೇತ್ರ ನಾಲ್ಕಂಭಕ್ಕೆ ಆಗಮಿಸಿ ನಂತರ ನಾಣಿಲ ವೃತ್ತದ ಮೂಲಕ ಮುಂದುವರೆದು ದೈಪಿಲ ಬಳಿಯ ಕುಮಾರಧಾರ ನದಿಯಲ್ಲಿ ವಿಸರ್ಜನೆಗೊಳಿಸಲಾಯಿತು.
ದೇವಸ್ಥಾನದ ಅಭಿವೃದ್ಧಿಗೆ ರೂ 50,೦೦೦ ಹಸ್ತಾಂತರ
ಕುಂಬ್ಲಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ವತಿಯಿಂದ ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಮಣ್ಯ ದೇವಸ್ಥಾನದ ಅಭಿವೃದ್ದಿ ಕಾರ್ಯಗಳಿಗೋಸ್ಕರ ದೇಣಿಗೆಯಾಗಿ ರೂ.50೦೦೦ ಮೊತ್ತವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಹಸ್ತಾಂತರಿಸಲಾಯಿತು.










