ಕುಂಬ್ರ ಶ್ರೀ ರಾಮ ಭಜನಾ ಮಂದಿರದ 45 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಂಪನ್ನ

0

5 ಸಾವಿರಕ್ಕೂ ಅಧಿಕ ಮಂದಿಗೆ ಅನ್ನ ಸಂತರ್ಪಣೆ, ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ

ಪುತ್ತೂರು: ಕುಂಬ್ರ ಶ್ರೀ ಕ್ಷೇತ್ರ ರಾಮಗಿರಿಯ ಶ್ರೀರಾಮ ಭಜನಾ ಮಂದಿರದಲ್ಲಿ ಸೆ.14 ರಿಂದ 16 ರ ತನಕ ನಡೆದ ಮೂರು ದಿನಗಳ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸಂಪನ್ನಗೊಂಂಡಿತು. ಅರ್ಚಕ ಪ್ರಕಾಶ್ ನಕ್ಷತ್ರಿತ್ತಾಯರವರ ನೇತೃತ್ವದಲ್ಲಿ ವಿವಿಧ ವೈಧಿಕ ಕಾರ್ಯಕ್ರಮಗಳು, ಮಹಾಪೂಜೆ, ರಂಗಪೂಜೆ ನಡೆದು ಸೆ.16 ರಂದು ಶ್ರೀ ಗಣೇಶ ವಿಗ್ರಹದ ಜಲಸ್ತಂಭನ ಕಾರ್ಯಕ್ರಮ ನಡೆಯಿತು.

ಊರ ಪರವೂರ ಭಕ್ತಾಧಿಗಳು ಸೇರಿದಂತೆ ಸುಮಾರು 5 ಸಾವಿರಕ್ಕೂ ಅಧಿಕ ಮಂದಿಗೆ ಅನ್ನಪ್ರಸಾದ ವಿತರಣೆ ನಡೆಯಿತು. ಪ್ರತಿ ದಿನ ಬೆಳಿಗ್ಗೆ ಶ್ರೀ ಗಣಪತಿ ಹೋಮ, ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು ಇದಲ್ಲದೆ ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆದವು. ಪ್ರತಿ ದಿನ ಮಕ್ಕಳಿಗೆ, ಮಹಿಳೆಯರಿಗೆ, ಸಾರ್ವಜನಿಕರಿಗೆ ಧಾರ್ಮಿಕ ರಸಪ್ರಶ್ನೆ, ರಾಮಾಯಣ ವೇಷ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.

ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು
ವಿಶೇಷವಾಗಿ ವಿಶ್ವಭಾರತಿ ಕಲಾವಿದರು ಕುಂಬ್ರ ಇವರಿಂದ ಪೊಣ್ಣು ಪೊಕ್ಕಡೆ ತುಳು ನಾಟಕ, ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಬೃಂದಾವನ ನಾಟ್ಯಾಲಯದಿಂದ ಕಾರ್ಯಕ್ರಮ ವೈವಿಧ್ಯ, ಸಹದೇವ ದಿಗ್ವಿಜಯ ಪೌರಾಣಿಕ ಯಕ್ಷಗಾನ ಬಯಲಾಟ ಹಾಗೇ ಶೋಭಾಯಾತ್ರೆಯ ದಿನ ಕುಂಬ್ರ ಕಟ್ಟೆಯ ಬಳಿ ವಯಲಿನ್ ವಾದನದೊಂದಿಗೆ ಸಿಂಗಾರಿ ಮೇಳ ಪ್ರದರ್ಶನಗೊಂಡಿತು. ಊರ ಪರವೂರ ಸಾವಿರಾರು ಮಂದಿ ಆಗಮಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.



ಆಕರ್ಷಕ ಶೋಭಾಯಾತ್ರೆ
ಸೆ.16 ರಂದು ಶ್ರೀ ಗಣೇಶ ವಿಗ್ರಹದ ಆಕರ್ಷಕ ಶೋಭಾಯಾತ್ರೆ ನಡೆಯಿತು. ಸಂಜೆ ಶ್ರೀ ಗಣೇಶ ದೇವರಿಗೆ ಮಹಾಪೂಜೆ ನಡೆದು ವಿವಿಧ ವೈಧಿಕ ಕಾರ್ಯಗಳು ನಡೆದು ಶೋಭಾಯಾತ್ರೆ ಆರಂಭಗೊಂಡಿತು. ಕುಂಬ್ರ ಅಶ್ವತ್ಥ ಕಟ್ಟೆಯ ಬಳಿ ತಿಂಗಳಾಡಿ ಶ್ರೀ ದೇವತಾ ಸಮಿತಿಯಿಂದ ಪೂಜಿಸಲ್ಪಟ್ಟ ಶ್ರೀ ಗಣೇಶ ವಿಗ್ರಹದ ಜೊತೆಗೂಡಿ ಇಬ್ಬರು ಗಣೇಶ ವಿಗ್ರಹಗಳ ಜಲಸ್ತಂಭನ ಕಾರ್ಯಕ್ರಮ ಶೇಖಮಲೆಯ ಪುಣ್ಯ ನದಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಮಂದಿ ಭಕ್ತರು ಪುಣ್ಯ ಸ್ನಾನ ಮಾಡುವ ಮೂಲಕ ಗಣೇಶ ದೇವರ ಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಶ್ರೀರಾಮ ಭಜನಾ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ರತನ್ ರೈ ಕುಂಬ್ರ, ಪ್ರಧಾನ ಕಾರ್ಯದರ್ಶಿ ರಾಜ್‌ಪ್ರಕಾಶ್ ರೈ ಕುಂಬ್ರ, ಕೋಶಾಧಿಕಾರಿ ಅಂಕಿತ್ ರೈ ಕುಯ್ಯಾರು, ಲೆಕ್ಕ ಪರಿಶೋಧಕ ಶೇಖರ ರೈ ಕುರಿಕ್ಕಾರ, ಉಪಾಧ್ಯಕ್ಷರುಗಳಾದ ಜಗನ್ನಾಥ ಪೂಜಾರಿ ಮುಡಾಲ, ಸದಾಶಿವ ನಾಯ್ಕ ಶೇಖಮಲೆ, ಶ್ರೀ ಗಣೇಶೋತ್ಸವ ಸಮಿತಿಯ ಸಂಚಾಲಕ ಹರೀಶ್ ರೈ ಮುಗೇರು, ಜೊತೆ ಕಾರ್ಯದರ್ಶಿ ಉದಯ ಮಡಿವಾಳ ಕುಂಬ್ರ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಸಂಚಾಲಕರು, ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.


ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಅಶೋಕ್ ರೈ ಸಹಿತ ಹಲವರು ಭೇಟಿ
ಕುಂಬ್ರ ಶ್ರೀ ಗಣೇಶೋತ್ಸವಕ್ಕೆ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಅಶೋಕ್ ಕುಮಾರ್ ರೈ, ಮಾಜಿ ಶಾಸಕರುಗಳಾದ ಸಂಜೀವ ಮಠಂದೂರು, ಶಕುಂತಳಾ ಟಿ.ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ, ಸುನೀಲ್ ದಡ್ಡು, ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಗ್ರಾಮಾಂತರ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ, ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ಉದ್ಯಮಿ ಶಿವಪ್ರಸಾದ್ ರೈ ಕಿನಾರ, ಉದ್ಯಮಿ ಮುರಳೀಕೃಷ್ಣ ಹಸಂತಡ್ಕ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶ್ರೀ ಗಣೇಶ ದೇವರ ದರ್ಶನ ಪಡೆದರು. ಆಡಳಿತ ಮಂಡಳಿಯವರು ಪ್ರಸಾದ ನೀಡಿ ಸತ್ಕರಿಸಿದರು.



` 45 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವೈಭವದಿಂದ ಜರಗಿದ್ದು ಊರ ಪರವೂರ ಭಕ್ತಾಧಿಗಳು, ಧಾರ್ಮಿಕ, ರಾಜಕೀಯ, ಸಾಮಾಜಿಕ ಕ್ಷೇತ್ರದ ಗಣ್ಯರು ಸೇರಿದಂತೆ ಹಲವು ಮಂದಿ ಆಗಮಿಸಿ ಶ್ರೀ ಗಣೇಶ ದೇವರ ದರ್ಶನ ಪಡೆದಿದ್ದಾರೆ. ಸಹಕರಿಸಿದ ಸಮಸ್ತ ಭಕ್ತಾಧಿಗಳಿಗೆ ಶ್ರೀ ಗಣೇಶ ದೇವರ ಒಳ್ಳೆಯದನ್ನು ಕರುಣಿಸಲಿ ಎಂಬ ಪ್ರಾರ್ಥನೆಯೊಂದಿಗೆ ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.’ ರತನ್ ರೈ ಕುಂಬ್ರ, ಅಧ್ಯಕ್ಷರು ಶ್ರೀರಾಮ ಭಜನಾ ಮಂದಿರ ಆಡಳಿತ ಸಮಿತಿ

LEAVE A REPLY

Please enter your comment!
Please enter your name here