ಮೋದಿ ಜನ್ಮದಿನಾಚರಣೆ: ಸವಣೂರು ಮುಗೇರು ದೇವಾಲಯದಲ್ಲಿ ರಂಗಪೂಜೆ

0

ಪುತ್ತೂರು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬ ಹಾಗೂ ಸಾರ್ಥಕ ಜನಸೇವೆಯ 25 ವರ್ಷಗಳನ್ನು ಪೂರೈಸಿದ ಅಂಗವಾಗಿ ಸೇವಾ ಸಂಕಲ್ಪದ ಪ್ರಯುಕ್ತ ಮಾನ್ಯ ಮೋದಿಜಿಯವರಿಗೆ ದೀರ್ಘಾಯುಷ್ಯ, ಇನ್ನಷ್ಟು ವರ್ಷಗಳ ಕಾಲ ದೇಶದ ಆಡಳಿತ ನೀಡುವ ಶಕ್ತಿ ಚೈತನ್ಯ ಆರೋಗ್ಯ ಭಾಗ್ಯ ಪ್ರಾಪ್ತಿಯಾಗಲೆಂದು ಪ್ರಾರ್ಥಿಸಿ , ಸವಣೂರು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ರಂಗ ಪೂಜೆ, ಭಜನಾಸೇವೆ ಹಾಗೂ ಆಶೀರ್ವಾದ ದೀಪವನ್ನು ಬೆಳಗಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡಂಜಿ ,ಜಿಲ್ಲಾ ಕಾರ್ಯಕಾರಿಣಿ ಸದಸ್ಯ ದಿನೇಶ್ ಮೇದು ,ಸುಳ್ಯ ಮಂಡಲ ಸಮಿತಿ ಸದಸ್ಯ ತಾರಾನಾಥ ಕಾಯರ್ಗ, ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ ಕೆ ಎಸ್ ಟಿ ಮೋರ್ಚಾದ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿ ಚಂದ್ರಾವತಿ ಸುಣ್ಣಾಜೆ, ಶಕ್ತಿ ಕೇಂದ್ರ ಪ್ರಮುಖ ಚೇತನ್ ಕುಮಾರ್ ಕೋಡಿಬೈಲು ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರುಗಳಾದ ತೀರ್ಥರಾಮ ಕೆಡೆಂಜಿ, ರಾಜೇಶ್ ಇಡ್ಯಾಡಿ ಕಾರ್ಯದರ್ಶಿ ಸತೀಶ್ ಬಲ್ಯಾಯ ಹಾಗೂ ಸುರೇಶ್ ರೈ ಸೂಡಿಮುಳ್ಳು, ಚಂದ್ರಶೇಖರ ಮೆದು, ಜಗದೀಶ ಇಡ್ಯಾಡಿ ,ಹರೀಶ್ಚಂದ್ರ ಕಾಯರ್ಗ, ಶ್ರೀಧರ ಸುಣ್ಣಾಜೆ, ಚಂದ್ರಶೇಖರ ಪಟ್ಟೆ, ಶ್ರೀಧರ ಇಡ್ಯಾಡಿ,ನವೀನ್ ಮೆದು ,ಲಕ್ಷ್ಮಣ ಗೌಡ ಕೆಡೆಂಜಿ ಶಿವರಾಮ ಗೌಡ, ವಸಂತಿ ಮೆದು, ಆಶಾ ಮೇದು ,ಧನಲಕ್ಷ್ಮಿ ಕಾಯರ್ಗ, ಅನಿತಾ ಲಕ್ಷ್ಮಣಗೌಡ, ಯಶೋದ ಮೆದು, ಶಶಿಕಲಾ ಇಡ್ಯಾಡಿ,ಲೇಖಲತಾ ಮೆದು, ಜಯಪ್ಪ ಬೇರಿಕೆ, ಪ್ರವೀಣ್ ಪೆರಿಯಡ್ಕ ದಯಾನಂದ ಮೆದು, ಪ್ರಥಮ ಕಾಯರ್ಗ, ಜನನಿ ಮೆದು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here