









ಪುತ್ತೂರು: ಬೊಳುವಾರು ಸೋಜಾ ಅಲ್ಯೂಮಿನಿಯಂ ಇಂಡಸ್ಟ್ರೀಸ್ ಬಳಿಯ ರಸ್ತೆ ಅಂಚಿನಲ್ಲಿರುವ ಏರ್ಟೆಲ್ ಕಂಪೆನಿಯ ಜಂಕ್ಷನ್ ಬಾಕ್ಸ್ ಜಗ್ಗುತ್ತಿದ್ದು ವಾಹನ ಸವಾರರಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ.



ಜಂಕ್ಷನ್ ಬಾಕ್ಸ್ ಜಗ್ಗುತ್ತಿರುವ ಕುರಿತು ಗೊತ್ತಿರುವ ವಾಹನ ಸವಾರರು ಜಂಕ್ಷನ್ ಬಾಕ್ಸ್ ತಪ್ಪಿಸಿಕೊಂಡು ಮುಂದೆ ಸಾಗುತ್ತಿದ್ದರೆ ಈ ಕುರಿತು ಅರಿವು ಇಲ್ಲದವರು ಜಂಕ್ಷನ್ ಬಾಕ್ಸ್ಗೆ ವಾಹನಗಳ ಟಯರ್ ಅನ್ನು ಚಲಾಯಿಸಿದಾಗ ಜಂಕ್ಷನ್ ಬಾಕ್ಸ್ ಕೂಡಲೇ ಜಗ್ಗಿ ವಾಹನ ಸವಾರರಿಗೆ ಅಪಾಯ ಉಂಟಾಗುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸಂಬಂಧಪಟ್ಟವರು ಗಮನಹರಿಸುವಂತೆ ವಾಹನ ಸವಾರರು ಒತ್ತಾಯಿಸಿದ್ದಾರೆ.










