ಪುತ್ತೂರು: ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿಗೆ ರೋಟರಿ ಕ್ಲಬ್‌ನಿಂದ ಇನ್‌ವರ್ಟರ್ ಕೊಡುಗೆ

0

ಪುತ್ತೂರು:  ಮುಕ್ರಂಪಾಡಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿಗೆ ರೋಟರಿ ಕ್ಲಬ್ ಪುತ್ತೂರು (ಜಿಲ್ಲೆ 3181) ವತಿಯಿಂದ ಸುಮಾರು ರೂ.20,000 ಮೌಲ್ಯದ ಇನ್‌ವರ್ಟರ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಪುತ್ತೂರಿನ ಎಕ್ಸೈಡ್ ಬ್ಯಾಟರೀಸ್  ಮಾಲಕರಾದ ರೋಟರಿಯನ್ ವಿಶ್ವನಾಥ ಗೌಡ ಅವರು ಈ ಇನ್‌ವರ್ಟರ್ ಅನ್ನು ಪ್ರಾಯೋಜಿಸಿದ್ದಾರೆ.

​ಸೆ. 24 ರಂದು ಕಾಲೇಜು ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರೋಟರಿ ಪದಾಧಿಕಾರಿಗಳು ಸಂಸ್ಥೆಗೆ ಭೇಟಿ ನೀಡಿ, ಕಾಲೇಜಿನ ಪ್ರಾಂಶುಪಾಲರಾದ ಪ್ರಮೀಳಾ ಜೆಸ್ಸಿ ಕ್ರಾಸ್ತಾ ಅವರಿಗೆ ಇನ್‌ವರ್ಟರ್ ಅನ್ನು ಹಸ್ತಾಂತರಿಸಿದರು.

​ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ರೋಟರಿಯನ್ ದತ್ತಾತ್ರೇಯ ರಾವ್, ಅಸಿಸ್ಟೆಂಟ್ ಗವರ್ನರ್ ಕ್ಸೇವಿಯರ್ ಡಿ’ಸೋಜಾ, ಕಾರ್ಯದರ್ಶಿ ಆರ್‌ಟಿಎನ್ ಲೋವಲ್ ಮೇವಡ, ಕಮ್ಯೂನಿಟಿ ಸರ್ವಿಸ್ ಡೈರೆಕ್ಟರ್ ಆರ್‌ಟಿಎನ್ ಶ್ರೀಧರ್ ಗೌಡ, ಐಪಿಪಿ ಡಾ. ಶಿವಪ್ರಕಾಶ್, ಪೂರ್ವಾಧ್ಯಕ್ಷರಾದ ಎಂ.ಜಿ. ರಫೀಕ್ ಹಾಗೂ ರೋಟರಿ ಸದಸ್ಯರಾದ ಆರ್‌ಟಿಎನ್ ಹೆರಾಲ್ಡ್ ಮಾಡ್ತಾ ಮತ್ತು ಆರ್‌ಟಿಎನ್ ಶೋಭಾ ಕೆ. ಉಪಸ್ಥಿತರಿದ್ದರು.

​ವಿದ್ಯಾರ್ಥಿನಿಯರ ಶೈಕ್ಷಣಿಕ ಅನುಕೂಲಕ್ಕಾಗಿ ರೋಟರಿ ಕ್ಲಬ್ ಉದಾರವಾಗಿ ನೀಡಿದ ಈ ಕೊಡುಗೆಗೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿವರ್ಗದವರು ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here