







ಪುತ್ತೂರು: ಬೊಳುವಾರು ಶ್ರೀ ದುರ್ಗಾಪರಮೇಶ್ವರೀ ಉಳ್ಳಾಳ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಅ.11ರಿಂದ ಅ.21ರವರೆಗೆ ನಡೆಯಲಿರುವ ನವರಾತ್ರಿ ಉತ್ಸವದ ಪ್ರಯುಕ್ತ ಆಮಂತ್ರಣ ಪತ್ರ ಬಿಡುಗಡೆ ಸೆ.25ರಂದು ಕ್ಷೇತ್ರದಲ್ಲಿ ನಡೆಯಿತು.
ಅರ್ಚಕ ಮನಮೋಹನ್ ಭಟ್ ದೇವರ ನಡೆಯಲ್ಲಿ ಆಮಂತ್ರಣ ಪತ್ರಿಕೆ ಇಟ್ಟು ಪ್ರಾರ್ಥಿಸಿ, ಪೂಜೆ ಸಲ್ಲಿಸಿ ಬಳಿಕ ಸಮಿತಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಬಲ್ಲಾಳ್, ಕೋಶಾಧಿಕಾರಿ ಜಲಜಾಕ್ಷಿ ಹೆಗ್ಡೆ, ಜತೆ ಕಾರ್ಯದರ್ಶಿಗಳಾದ ಸುಂದರ ನಾಯ್ಕ, ಜಯಕಿರಣ್ ಉರ್ಲಾಂಡಿ, ಟ್ರಸ್ಟಿ ಕಿರಣ ಶಂಕರ ಮಲ್ಯ, ಸ್ಥಳಿಯರಾದ ಅನಂತ್ಕೃಷ್ಣ, ಭವಾನಿ ಶಂಕರ್, ಪ್ರಕಾಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.












