ಶರವೂರು ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ 39ನೇ ಸೇವೆ

0

ಆಲಂಕಾರು: ಶ್ರೀ ದುರ್ಗಾಂಬಾ ಕಲಾಸಂಗಮ ಆಲಂಕಾರು ಇದರ ವತಿಯಿಂದ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಶ್ರೀ ಕ್ಷೇತ್ರ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಯಕ್ಷಗಾನ ತಾಳಮದ್ದಳೆಯ 39ನೇ ಸೇವೆಯಾಗಿ ‘ಧರ್ಮಾಂಗದ ದಿಗ್ವಿಜಯ’ ತಾಳಮದ್ದಳೆ ಸೆ.26ರಂದು ಸಂಜೆ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಹಿಮ್ಮೇಳದಲ್ಲಿ ಡಿ.ಕೆ.ಆಚಾರ್ಯ ಹಳೆನೇರೆಂಕಿ, ಚಂದ್ರ ದೇವಾಡಿಗ ನಗ್ರಿ, ಮೋಹನ ಶರವೂರು, ದಿವಾಕರ ಆಚಾರ್ಯ ಹಳೆನೇರೆಂಕಿ, ಮುಮ್ಮೇಳದಲ್ಲಿ ಗುಡ್ಡಪ್ಪ ಬಲ್ಯ, ಗಣರಾಜ ಕುಂಬ್ಳೆ (ಧರ್ಮಾಂಗದ ), ಈಶ್ವರ ಭಟ್ ಗುಂಡ್ಯಡ್ಕ (ಭರತ), ನಾರಾಯಣ ಭಟ್ ಆಲಂಕಾರು (ನಾರದ), ಜಯರಾಮ್ ಗೌಡ ಬಲ್ಯ (ಕಂಬಲಾಶ್ವ), ಗುರುಪ್ರಸಾದ್ ಆಲಂಕಾರು (ಬಲಿ ), ಕೃಷ್ಣಮೂರ್ತಿ ಕೆಮ್ಮಾರ (ವಿಷ್ಣು ) ಸಹಕರಿಸಿದರು. ಕೌಶಿಕ ರಾವ್ ಶರವೂರು ಬೆಂಗಳೂರು ಸೇವಾರ್ಥಿಯಾಗಿ ಸಹಕರಿಸಿದರು. ಕಾರ್ಯದರ್ಶಿ ದಿವಾಕರ ಆಚಾರ್ಯ ಸ್ವಾಗತಿಸಿ, ಸದಸ್ಯ ನಾರಾಯಣ ಭಟ್ ಆಲಂಕಾರು ವಂದಿಸಿದರು. ಭಕ್ತಾದಿಗಳು ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here