







ಪುತ್ತೂರು: ಅಕ್ಟೋಬರ್ ತಿಂಗಳಲ್ಲಿ ಎರಡು ಬಾರಿ ಆರ್ದ್ರಾ ನಕ್ಷತ್ರ ಬರುವ ಹಿನ್ನೆಲೆಯಲ್ಲಿ ಅ.3 ಮತ್ತು 31ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ ಮತ್ತು ಶುದ್ದ ಎಳ್ಳೆಣ್ಣೆ ಅಭಿಷೇಕ ನಡೆಯಲಿದೆ.


ಮೃತ್ಯುಂಜಯ ಹೋಮ ಸೇವೆ ಮಾಡಿಸುವ ಭಕ್ತರು ದೇವಳದ ಕೌಂಟರ್ನಲ್ಲಿ ಸೇವಾ ರಶೀದಿಯನ್ನು ಪಡೆಯುವುದು ಮತ್ತು ಎಳ್ಳೆಣ್ಣೆ ಸಮರ್ಪಣೆಗೆ ಭಕ್ತರು ಸೇವಾ ರಶೀದಿಯನ್ನು ಪಡೆಯುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.













