







14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ,ಕಂಗನಾ ರೈಗೆ ವೈಯಕ್ತಿಕ ಚಾಂಪಿಯನ್


ಕಾಣಿಯೂರು: ಶಾಲಾ ಶಿಕ್ಷಣ ಇಲಾಖೆ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಸವಣೂರು, ಪ್ರೌಢಶಾಲಾ ವಿಭಾಗ ಇದರ ಆಶ್ರಯದಲ್ಲಿ ನಡೆದ ಸವಣೂರು ವಲಯ ಮಟ್ಟದ 14ರ ಮತ್ತು 17ರ ವಯೋಮಾನದ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಗೆ ಹಲವಾರು ಬಹುಮಾನಗಳು ಬಂದಿವೆ.
ಪ್ರಾಥಮಿಕ ಬಾಲಕಿಯರ ವಿಭಾಗ
ಕಂಗನಾ ರೈ (8ನೇ) 400 ಮೀ ಓಟ ಪ್ರಥಮ, 600 ಮೀ ಓಟ ಪ್ರಥಮ, ಉದ್ದ ಜಿಗಿತ ಪ್ರಥಮ ಸ್ಥಾನದೊಂದಿಗೆ ವೈಯಕ್ತಿಕ ಚಾಂಪಿಯನ್ಶಿಪ್ ಪಡೆದುಕೊಂಡಿರುತ್ತಾರೆ. ವರ್ಣಿಕ (7ನೇ) 600 ಮೀ ತೃತೀಯ, ತನಿಷ್ಕ ರೈ (7ನೇ) ಎತ್ತರ ಜಿಗಿತ ದ್ವಿತೀಯ ಸ್ಥಾನವನ್ನು ಗಳಿಸುವ ಮೂಲಕ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.




ಪ್ರಾಥಮಿಕ ಬಾಲಕರ ವಿಭಾಗ
ಅಕ್ಷಿತ್ ಕೆ (8ನೇ) 200 ಮೀ ದ್ವಿತೀಯ, ಉದ್ದ ಜಿಗಿತ ದ್ವಿತೀಯ, 100 ಮೀ ತೃತೀಯ, ಇಶಾನ್ (8ನೇ) ಎತ್ತರ ಜಿಗಿತ ಪ್ರಥಮ, ಉದ್ದ ಜಿಗಿತ ತೃತೀಯ, ಅಭಿನ್ ಜೆ ಬಿ (8ನೇ) ಗುಂಡೆಸೆತ ದ್ವಿತೀಯ, ಚಕ್ರಸೆತ ತೃತೀಯ, ಮೊಹಮ್ಮದ್ ಶಮ್ಮಾಸ್ (8ನೇ) ಎತ್ತರ ಜಿಗಿತ ತೃತೀಯ ಸ್ಥಾನಗಳನ್ನು ಪಡೆದುಕೊಂಡಿರುತ್ತಾರೆ.
ಪ್ರೌಢಶಾಲಾ ಆಂಗ್ಲ ಮಾಧ್ಯಮ
17ರ ಬಾಲಕರ ವಿಭಾಗ
ರಚನ್ ಸಿ ಎ (9ನೇ) 3000 ಮೀ ಪ್ರಥಮ, 1500 ಮೀ ತೃತೀಯ, ನಿಶಾಂತ್ ಕೆ ಜಿ (10ನೇ) 200 ಮೀ ದ್ವಿತೀಯ, 100 ಮೀ ತೃತೀಯ, ವಿಕಾಸ್ (10ನೇ) ಗುಂಡೆಸೆತ ದ್ವಿತೀಯ, 400 ಮೀ ದ್ವಿತೀಯ, ಮಧ್ವರಾಜ್ (10ನೇ) ತ್ರಿವಿಧ ಜಿಗಿತ ದ್ವಿತೀಯ, ಅನ್ವಿತ್ ಎಂ ವಿ (9ನೇ) ತ್ರಿವಿಧ ಜಿಗಿತ ತೃತೀಯ ಸ್ಥಾನಗಳನ್ನು ಪಡೆದುಕೊಂಡಿರುತ್ತಾರೆ.
17 ರ ಬಾಲಕಿಯರ ವಿಭಾಗ
ಭವಿಷ್ಯ ರೈ (10ನೇ) 3000 ಮೀ ಪ್ರಥಮ, ಮಂಗಳ (9ನೇ) ಎತ್ತರ ಜಿಗಿತ ದ್ವಿತೀಯ, ಉದ್ದ ಜಿಗಿತ ದ್ವಿತೀಯ, ತೃಶಾ ಎನ್ ಓ (9ನೇ)100 ಮೀ ತೃತೀಯ, ಪ್ರಣಮ್ಯ (10ನೇ) ಈಟಿ ಎಸೆತ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿರುತ್ತಾರೆ.
ಪ್ರಗತಿ ಕನ್ನಡ ಮಾಧ್ಯಮ:-
ಬೆನಡಿಕ್ಟ್ ಇಶಾನಿ ಕಾಂಬ್ರೆಕರ್ (10ನೇ) ಚಕ್ರಸೆತ ತೃತೀಯ, ತೃಪ್ತಿ (10ನೇ) ಈಟಿ ಎಸೆತ ಪ್ರಥಮ, 4400 ಮೀ ರಿಲೇ ತೃತೀಯ, ಗಗನ ಡಿ (10ನೇ) ಗುಂಡೆಸೆತ ದ್ವಿತೀಯ, 4400 ಮೀ ರಿಲೇ ತೃತೀಯ, ದುರ್ಗಾಶ್ರೀ (10ನೇ) 4400 ಮೀ ರಿಲೇ ತೃತೀಯ, ಧನ್ವಿತಾ (9ನೇ) 4400 ಮೀ ರಿಲೇ ತೃತೀಯ ಸ್ಥಾನಗಳನ್ನು ಪಡೆದುಕೊಂಡಿರುತ್ತಾರೆ.
ವಿಜೇತರನ್ನು ಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಮುಂಡಾಳ, ಶಾಲಾ ಆಡಳಿತ ಅಧಿಕಾರಿಗಳು, ಮುಖ್ಯ ಗುರುಗಳು, ಶಿಕ್ಷಕ- ಶಿಕ್ಷಕರೇತರ ವೃಂದದವರು ಮತ್ತು ವಿದ್ಯಾರ್ಥಿ ಮಿತ್ರರು ಅಭಿನಂದಿಸಿದರು.ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್ ಕೆ ಮತ್ತು ಸುವರ್ಣ ಕೆ.ಬಿ ತರಬೇತಿ ನೀಡಿರುತ್ತಾರೆ. ಶಿಕ್ಷಕಿಯರಾದ ಸೌಮ್ಯ ರೈ ಮತ್ತು ಸುಷ್ಮಾ ಎಚ್ ರೈ ಸಹಕರಿಸಿದರು.










