







ವಿಟ್ಲ : ನಿಟ್ಟೆ ವಿಶ್ವ ವಿದ್ಯಾನಿಲಯ ಹಾಗೂ ಮಾಣಿಲ ಗ್ರಾಮ ಪಂಚಾಯತ್ ನ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮಾಣಿಲ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಮಾಣಿಲ ಗ್ರಾಮ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷರಾದ ಶ್ರೀಧರ ಬಾಳೆಕಲ್ಲುರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ದೇಲಂತಮಜಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಗಣೇಶ ಭಟ್ ದೇಲಂತಮಜಲು, ಮಾಣಿಲ ಬೀಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಜಯರಾಮ ಬಲ್ಲಾಳ, ಕೆಳಗಿನ ಮಾಣಿಲ ಜುಮ್ಮಾ ಮಸೀದಿಯ ಧರ್ಮಗುರುಗಳಾದ ಉಮ್ಮರ್ ಹನೀಫ್, ನಿಟ್ಟೆ ಸಂಸ್ಥೆಯ ಡಿಪಾರ್ಟ್ ಮೆಂಟ್ ಆಫ್ ಪಬ್ಲಿಕ್ ಹೆಲ್ತ್ ನ ಪ್ರೊಫೆಸರ್ ಡಾ| ಮಾಕ್ಷಿನ್ ಡಿಮೆಲ್ಲೊ, ಕನ್ಸಲೆಂಟ್ ಡಾ| ಶೆರ್ಲಿ ಡಿ.ಅಲ್ಮೆಡಾ, ಎ.ಬಿ ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಡಾ| ಸಹನಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಮರೆಗುಳಿತನ ಖಾಯಿಲೆಯ ಬಗ್ಗೆ ಅರಿವು : ಶಿಬಿರದ ಪ್ರಾರಂಭದಲ್ಲಿ ಡಾ|ಶೆರ್ಲಿ ಡಿ.ಅಲ್ಮೆಡಾ ಅವರು ಸ್ಲೈಡ್ ಶೋ ನಡೆಸಿ ಮರೆಗುಳಿತನ ಖಾಯಿಲೆಯ ಬಗ್ಗೆ ಅರಿವು ನೀಡಿದರು.ಮಾಯಾ ಮತ್ತು ತಂಡದವರು ಪ್ರಾರ್ಥಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣಕುಮಾರ ಕಮ್ಮಜೆ ಸ್ವಾಗತಿಸಿದರು. ನಿಟ್ಟೆ ಸಂಸ್ಥೆಯ ಡಾ|ಶರಣ್ಯ ಕಾರ್ಯಕ್ರಮ ನಿರೂಪಿಸಿದರು. ಅಸಿಸ್ಟೆಂಟ್ ಪ್ರೊಫೆಸರ್ ಡಾ| ಶ್ರೀಶರತ್ ಕೆ ವಂದಿಸಿದರು.










