







ಪಾಳ್ಯತ್ತಡ್ಕ: ಇಲ್ಲಿನ SKSSF ಶಾಖೆಯ ವತಿಯಿಂದ ಭಾನುವಾರ (ಅ. 04) ರಾತ್ರಿ ‘ಶಂಸುಲ್ ಉಲಮಾ ಮೌಲಿದ್ ಮಜ್ಲಿಸ್’ ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ಜರುಗಿತು.


ಪಾಳ್ಯತ್ತಡ್ಕ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಬಹು| ಮುರ್ಶಿದ್ ಫೈಝಿ ಅವರು ಮಜ್ಲಿಸ್ನ ನೇತೃತ್ವ ವಹಿಸಿ, ಶಂಸುಲ್ ಉಲಮಾರವರ ಧಾರ್ಮಿಕ ಚಿಂತನೆಗಳು ಹಾಗೂ ಜೀವನ ಚರಿತ್ರೆಯ ಕುರಿತು ಸುದೀರ್ಘವಾಗಿ ಪ್ರವಚನ ನೀಡಿದರು. ಇಮಾಮ್ ಶಾಫಿ ಅಕಾಡೆಮಿಯ ಪ್ರೊಫೆಸರ್ ಬಹು| ಅಬ್ದುಲ್ ರಹಿಮಾನ್ ಹೈತಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಶುಭಕೋರಿದರು.



ಸನ್ಮಾನ ಕಾರ್ಯಕ್ರಮ:
SKSSF ಕುಂಬ್ರ ವಲಯದ ಕೋಶಾಧಿಕಾರಿಯಾಗಿ ನೂತನವಾಗಿ ಆಯ್ಕೆಯಾದ ಜನಾಬ್ ಅಬ್ದುಲ್ ಸಲಾಂ ಮೇನಾಲ ಅವರನ್ನು ಈ ಸುಸಂದರ್ಭದಲ್ಲಿ SKSSF ಪಾಳ್ಯತ್ತಡ್ಕ ಶಾಖೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಳ್ಯತ್ತಡ್ಕ ಜಮಾಅತ್ ಕಮಿಟಿ ಕಾರ್ಯದರ್ಶಿ ಸಲಾಂ ಪದಡ್ಕ, SKSSF ಕುಂಬ್ರ ವಲಯ ಮಾಜಿ ಕೋಶಾಧಿಕಾರಿ ಮುಹಮ್ಮದ್ ಹಾಜಿ KH, SKSSF ಈಶ್ವರಮಂಗಲ ಕ್ಲಸ್ಟರ್ ಅಧ್ಯಕ್ಷರಾದ ಶಂಸುದ್ದೀನ್ ಈಂದುಮೂಲೆ, ಕಾರ್ಯದರ್ಶಿ ರಹ್ಮಾನ್ ಮೇನಾಲ, ತರ್ಬಿಯತುಲ್ ಅನಾಂ ಮದ್ರಸದ ಸದರ್ ಮುಅಲ್ಲಿಂ ರಝಾಕ್ ಮುಸ್ಲಿಯಾರ್, ಮುಅಲ್ಲಿಂಗಳಾದ ಖಾದರ್ ಮುಸ್ಲಿಯಾರ್, ಇಸ್ಮಾಯಿಲ್ ಹನೀಪಿ ಸೇರಿದಂತೆ ಜಮಾಅತಿನ ಗಣ್ಯರು, ಹಿರಿಯರು ಹಾಗೂ SKSSF SYS SKSBV ಪಾಳ್ಯತ್ತಡ್ಕ ಶಾಖೆಯ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.ಬಹು| ಅಬ್ದುಲ್ಲಾ ನಯೀಮಿ ವಂದಿಸಿದರು.










