







ಪುತ್ತೂರು: ಜೆಕೆ ಟೂರ್ ಟ್ರಾವೆಲ್ಸ್ ವತಿಯಿಂದ 21 ಪ್ರವಾಸಿಗರನ್ನು ಒಳಗೊಂಡ ಮೈಸೂರು ಪ್ರವಾಸವನ್ನು ಆಯೋಜಿಸಲಾಗಿತ್ತು. ಪುತ್ತೂರಿನಿಂದ ಅ.2ರಂದು ಬೆಳಗ್ಗೆ ಪ್ರಯಾಣ ಆರಂಭಿಸಿದ ತಂಡವು ಮೈಸೂರಿನ ಚಾಮುಂಡಿ ಬೆಟ್ಟ, ಅರಮನೆ, ಶ್ರೀರಂಗಪಟ್ಟಣ, ಬೃಂದಾವನ ಹಾಗೂ ಕೆಆರ್ಎಸ್ ಡ್ಯಾಂ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆಯಿತು.


ಅ.16ರಂದು ಪೊಳಲಿ, ಕಾರ್ಕಳದ ಆನೆಕೆರೆ ಬಸದಿ, ಕಮಲಶಿಲೆಯ ಬ್ರಾಹ್ಮಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯ, ಸುಪಾರ್ಶ್ವ ಗುಹೆ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ, ಕಾಪು ಮಾರಿಗುಡಿ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಒಂದು ದಿನದ ಪ್ರವಾಸವನ್ನು ಆಯೋಜಿಸಲಾಗಿದೆ.
ಇದಲ್ಲದೆ ಪ್ರತಿದಿನ ತಿರುಪತಿ ಪ್ರವಾಸಕ್ಕೂ ವ್ಯವಸ್ಥೆ ಕಲ್ಪಿಸಲಾಗಿದ್ದು, ಮುಡಿಪು ಕೊಂಡೊಯ್ಯುವ ಭಕ್ತರಿಗೂ ಅವಕಾಶವಿದೆ ಎಂದು ಆಯೋಜಕ ಜಯರಾಮ್ ಕುಲಾಲ್ ತಿಳಿಸಿದ್ದಾರೆ.
ಪ್ರವಾಸಗಳ ಕುರಿತು ಹೆಚ್ಚಿನ ಮಾಹಿತಿಗಾಗಿ 99452 77507 / 91085 50105 ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













