







ಪುತ್ತೂರು:ಪುತ್ತೂರು ನಗರ ವಲಯ ಮಟ್ಟದ ಕ್ರೀಡಾಕೂಟವು ವಿವೇಕಾನಂದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾಂಗಣದಲ್ಲಿ ನಡೆಯಿತು. 17 ವರ್ಷದ ಬಾಲಕರ ವಿಭಾಗಲ್ಲಿ ಸುಧಾನ ಶಾಲೆಯ ಮನಾಫ್ ಮೊಹಮ್ಮದ್ ವೈಯಕ್ತಿಕ ಚಾಂಪಿಯನ್ ಗಳಿಸಿರುತ್ತಾರೆ. ಮಹಮ್ಮದ್ ರಿಮಾಝ್(8th) 100 ಮೀ ನಲ್ಲಿ ದ್ವಿತೀಯ, ಮಹಮ್ಮದ್ ಕೈಫ್ (8th) ಶಾಟ್ ಪುಟ್ನಲ್ಲಿ ತೃತೀಯ, ಇಂಪನ ಸಿ ಭಟ್( 9th) ಜಾವಲಿನ್ ನಲ್ಲಿ ದ್ವಿತೀಯ, ಶಿಬಾನಿ ಆರ್ ರೈ(9th), ಜಾವಲಿನ್ ನಲ್ಲಿ ತೃತೀಯ ಸ್ಥಾನ ಪಡೆದು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ .



17ರ ಬಾಲಕರ ವಿಭಾಗದ 4×400ಮೀ ರಿಲೇಯಲ್ಲಿ ತನ್ಮಯ್(10th), ಶ್ರೀಶ N.ಹೆಗ್ಡೆ((8th), ಸಹನ್(10th),, ಜಯಂತ್(9th) ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರುಗಳಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ತರಬೇತಿ ನೀಡಿರುತ್ತಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.



ಇವರನ್ನು ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್ , ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ. ಶೋಭಾ ನಾಗರಾಜ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಅಭಿನಂದಿಸಿ ಶುಭ ಹಾರೈಸಿದ್ದಾರೆ.










