







ನೆಲ್ಯಾಡಿ: ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಪಡುಬೆಟ್ಟು ಎಳ್ತಿಮಾರ್ ದಿ| ಅಂಬೋಡಿಯವರ ಪತ್ನಿ ಕುಂಞಿ (70ವ.)ರವರು ವಯೋಸಹಜ ಅನಾರೋಗ್ಯದಿಂದ ಅ.6ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.


ಮೃತರು ಗದ್ದೆ ನಾಟಿ, ಪಾಡ್ದನ ಹೇಳುವುದರಲ್ಲಿ ನಿಪುಣರಾಗಿದ್ದರು. ಮೃತರು ಪುತ್ರರಾದ ದ.ಕ.ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅಣ್ಣಿ ಎಳ್ತಿಮಾರ್, ವಸಂತ, ಪುತ್ರಿಯರಾದ ಅಕ್ಕು, ಅಮಿತಾ, ಬಾಲಕಿ ಅವರನ್ನು ಅಗಲಿದ್ದಾರೆ.













