ನೆಲ್ಯಾಡಿ: ಊರ ಗೌಡ ಕೊರಗಪ್ಪ ಗೌಡ ನಿಧನ

0

ನೆಲ್ಯಾಡಿ: ಗ್ರಾಮದ ಬಾಯಿತ್ರೋಡಿ ನಿವಾಸಿ, ಬೊನ್ಯಸಾಗು ರಾಜನ್ ದೈವದ ಗುತ್ತಿನ ಮನೆಯ ಯಜಮಾನ ಹಾಗೂ ಊರ ಗೌಡರಾದ ಕೊರಗಪ್ಪ ಗೌಡ (82ವ.) ಅವರು ಅ.7ರಂದು ಹೃದಯಾಘಾತದಿಂದ ನಿಧನರಾದರು.


ಕೊರಗಪ್ಪ ಗೌಡ ಅವರು ಬೊನ್ಯಸಾಗು ರಾಜನ್ ದೈವದ ಯಜಮಾನರಾಗಿ, ಊರ ಗೌಡರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೇ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರೀಯವಾಗಿ ಭಾಗವಹಿಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here