







ಬೆಟ್ಟಂಪಾಡಿ: ಇಲ್ಲಿನ ವಿನಾಯಕನಗರ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದ ಶ್ರೀ ಸಿದ್ದಿ ವಿನಾಯಕ ಸೇವಾ ಸಮಿತಿ ವತಿಯಿಂದ ಮಕ್ಕಳಿಗೆ ಶಂಖನಾದ ತರಬೇತಿಯು ನಡೆಯಲಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ಅ.15ರಂದು ಮಂದಿರದಲ್ಲಿ ಜರಗಿತು.


ಮಂದಿರದ ಗೌರವ ಸಲಹೆಗಾರರೂ, ಮಂಗಳೂರಿನ ಶ್ರೀನಿಧಿ ಕನ್ಸ್ಟ್ರಕ್ಷನ್ ಮ್ಹಾಲಕ ವಾಸಪ್ಪ ಪೂಜಾರಿ ಮಿತ್ತಡ್ಕ ರವರು ತರಬೇತಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ತರಬೇತುದಾರರಾದ ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ನಿವೃತ್ತ ಚಿತ್ರಕಲಾ ಶಿಕ್ಷಕ ಐ. ಗೋಪಾಲಕೃಷ್ಣ ರಾವ್ ರವರು ಮಾತನಾಡಿ ಶಂಖನಾದ ದ ಮಹತ್ವ, ಹಿನ್ನೆಲೆ ಕುರಿತು ಮಕ್ಕಳಿಗೆ ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ್ ಹರ್ಷಿತ್ ಉಪ್ಪಳಿಗೆ ಉಪಸ್ಥಿತರಿದ್ದರು. ನವರಾತ್ರಿ ವಿಶೇಷ ಭಜನಾ ಕಾರ್ಯಕ್ರಮದ ಬಳಿಕ ಭಗವದ್ಗೀತಾ ಪುಸ್ತಕ ವಿತರಣೆ ನಡೆಯಿತು.



ಮಂದಿರದಲ್ಲಿ ಅ. 11 ರಿಂದ ಮೊದಲ್ಗೊಂಡು 19 ರವರೆಗೆ ನವರಾತ್ರಿ ವಿಶೇಷ ಭಜನಾ ಕಾರ್ಯಕ್ರಮ ಮತ್ತು ಅನ್ನಸಂತರ್ಪಣೆ ನಡೆಯುತ್ತಿದ್ದು, ಅ. 18 ರಂದು ಸಂಜೆ ಆಯುಧ ಪೂಜಾ ಕಾರ್ಯಕ್ರಮ ಜರಗಲಿದೆ. ಸತ್ಯನಾರಾಯಣ ಮಣಿಯಾಣಿ, ಲಿಂಗಪ್ಪ ಗೌಡ ಪಂಬೆಜಾಲು, ಮಣಿಕಂಠ ರವರು ಅತಿಥಿಗಳನ್ನು ಗೌರವಿಸಿದರು.
ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದ ಸನ್ನಿದಾನದಲ್ಲಿ ಹಿರಿಯ ಭಜಕ ಸಾಂತಪ್ಪ ಗೌಡ ಪಂಬೆಜಾಲು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸೇವಾ ಸಮಿತಿ ಅಧ್ಯಕ್ಷ ಜಯಪ್ರಕಾಶ್ ರೈ ಚೆಲ್ಯಡ್ಕ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ನಳಿನಿ ಟಿ. ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಲಿಂಗಪ್ಪ ಗೌಡ ರವರು ಸ್ವಾಗತಿಸಿ, ಕೋಶಾಧಿಕಾರಿ ಸನತ್ ಕುಮಾರ್ ರೈ ವಂದಿಸಿದರು.
ತರಬೇತಿ ಪಡೆಯಲು 20 ಮಕ್ಕಳು ಹಾಗೂ ಸಾರ್ವಜನಿಕರು ಒಟ್ಟು 45 ಜನ ಭಾಗವಹಿಸಿದರು.ಶಂಖನಾದ ತರಬೇತಿ ಒಂದು ಬ್ಯಾಚ್ 5 ದಿನವಾಗಿದ್ದು ಅ. 26 ರವರೆಗೆ ನಡೆಯಲಿದೆ. ಆಸಕ್ತರಿಗೆ ಮುಂದಿನ ಬ್ಯಾಚ್ ಗಳಲ್ಲಿ ಸೇರ್ಪಡೆಗೊಳ್ಳಬಹುದಾಗಿದೆ ಎಂದು ಸೇವಾ ಸಮಿತಿಯವರು ತಿಳಿಸಿದ್ದಾರೆ.










