ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ  ಅಗೇಲು ಸೇವೆ, ಸನ್ಮಾನ,  ಯುವಶಕ್ತಿ ಉತ್ಸವ -2026  ಆಮಂತ್ರಣ ಪತ್ರಿಕೆ ಬಿಡುಗಡೆ 

0

ಬಡಗನ್ನೂರು: ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ  ಸಂಕ್ರಮಣದ ಅಂಗವಾಗಿ ಅ. 17 ರಂದು ಸ್ವಾಮಿ ಕೊರಗಜ್ಜನಿಗೆ ಅಗೇಲು ಸೇವೆ  ಹಾಗೂ ಶ್ರೀ ಗುಳಿಗರಾಜನಿಗೆ ಕಲಶ ಸೇವೆ ನಡೆದು ಪ್ರಸಾದ ವಿತರಣೆ ನಡೆಯಿತು.

 ಈ ಸಂಧರ್ಭದಲ್ಲಿ ಊರ ಪರವೂರ ಭಕ್ತಾದಿಗಳಿಂದ ಹರಕೆ ರೂಪದ ಸಮಾರು 106 ಅಗೇಲು ಸೇವೆ ಹಾಗೂ ಕಲಶ ಸೇವೆ ಸಮಾರ್ಪಣೆ ನಡೆದು ಪ್ರಸಾದ ವಿತರಣೆ .ಬಳಿಕ ಅನ್ನ ಪ್ರಸಾದ ವಿತರಣೆ ನಡೆಯಿತು 

ಅನ್ನಪ್ರಸಾದ ವಿತರಣೆ  ಕಾರ್ಯಕ್ರಮದಲ್ಲಿ ಸುಮಾರು 600 ಕ್ಕೂ ಮಿಕ್ಕಿ ಭಕ್ತಾಧಿಗಳು ಭಾಗವಹಿಸಿ ಶ್ರೀ ದೖೆವದ ಅನ್ನ ಪ್ರಸಾದ ಸ್ವೀಕರಿಸಿದರು.

ಈ ಸಂಧರ್ಭದಲ್ಲಿ ಕೊರಗಜ್ಜ ಸೇವ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿನಗರ, ಉಪಾಧ್ಯಕ್ಷ ಸದಾನಂದ ರೖೆ ಬೊಳಕೂಡ್ಲು,. ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮರದಮೂಲೆ, ಜತೆ ಕಾರ್ಯದರ್ಶಿ ವಿನಯ ಕುಮಾರ್ ದೇವಸ್ಯ ಕೋಶಾಧಿಕಾರಿ ಚಂದ್ರಶೇಖರ ರೖೆ ಬಜ ನಿಕಟಪೂರ್ವ ಕೋಶಾಧಿಕಾರಿ ಭಾಸ್ಕರ ಹೆಗಡೆ, ಪೂಜಾಕರ್ಮಿ ಮಾಧವ ಸಾಲಿಯಾನ್  ಮರದ ಮೂಲೆ  ಸುಳ್ಯಪದವು ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗ (ರಿ)ನ ಗೌರವಾಧ್ಯಕ್ಷ ಜನಾರ್ದನ ಪೂಜಾರಿ ಪದಡ್ಕ, ಅಧ್ಯಕ್ಷ ರೂಪೇಶ್ ಮರದಮೂಲೆ, ನಿಕಟಪೂರ್ವ ಅಧ್ಯಕ್ಷ ಗುರುಕಿರಣ್ ರೖೆ ಎನ್. ಜಿ ಹಾಗೂ ಸಮಿತಿ ಪದಾಧಿಕಾರಿಗಳು ಸದಸ್ಯರು ಹಾಗೂ ಊರ ಪರವೂರ ಭಕ್ತ ಸಮೂಹ ಉಪಸ್ಥಿತರಿದ್ದರು.

ಸನ್ಮಾನ ಕಾರ್ಯಕ್ರಮ  ಪುತ್ತೂರು ಟಿಎಪಿಸಿಎಂಎಸ್‌ನ ಪ್ರಭಾರ ಮುಖ್ಯಕಾರ್ಯ ನಿರ್ವಹಣಾಧಿಕಾರಿಯಾಗಿ 36 ವರ್ಷಗಳ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿರುವ  ಬೆಳಿಯಪ್ಪ ಗೌಡ ದಂಪತಿಗಳನ್ನು ಸ್ವಾಮಿ ಕೊರಗಜ್ಜ ಸೇವಾ ಸಮಿತಿ ವತಿಯಿಂದ ಪೇಟ ಧರಿಸಿ, ಶಾಲು ಹೊದಿಸಿ ಫಲಪುಷ್ಷ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಯುವಶಕ್ತಿ ಉತ್ಸವ -2026 ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ  ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗ (ರಿ) ಸುಳ್ಯಪದವು ಇದರ ವತಿಯಿಂದ  ನ. 8 ರಂದು ನಡೆಯಲಿರುವ 6 ನೇ ವರ್ಷದ ಯುವಶಕ್ತಿ ಉತ್ಸವ  ಆಮಂತ್ರಣ ಪತ್ರಿಕೆ ಬಿಡುಗಢೆ ಹಾಗೂ ಉತ್ಸವದ ಲೋಗೋ ಬಿಡುಗಡೆ  ಕಾರ್ಯಕ್ರಮ ನಡೆಯಿತು.

ಆರಂಭದಲ್ಲಿ ಆಮಂತ್ರಣ ಪತ್ರಿಕೆಯನ್ನು ಸ್ವಾಮಿ ಕೊರಗಜ್ಜನ ಕಟ್ಟೆಯಲ್ಲಿಟ್ಟು ಪೂಜಾಕರ್ಮಿ ಮಾಧವ ಸಾಲಿಯಾನ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.ಸ್ವಾಮಿ ಕೊರಗಜ್ಜ ಕ್ಷೇತ್ರದ ಪ್ರದಾನ ಪೂಜಾಕರ್ಮಿ ಮಾಧವ ಸಾಲಿಯಾನ್ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಶುಭ ಹಾರೖೆಸಿದರು. 

 ಹಿರಿಯರಾದ  ಕುಂಞಣ್ಣ ಮೇಸ್ತ್ರಿ ಕನ್ನಡ್ಕ ರವರು ಯುವಶಕ್ತಿ ಉತ್ಸವದ ಲೋಗೋವನ್ನು ಅನಾವರಣಗೊಳಿಸಿದರು.

LEAVE A REPLY

Please enter your comment!
Please enter your name here