







ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅ.20ರಂದು ಬೆಳಿಗ್ಗೆ ಆಯುಧ ಪೂಜೆ ನಡೆಯಿತು.
ಬ್ರಹ್ಮರಥ, ಹೂ ತೇರು, ಚಂದ್ರಮಂಡಲ ರಥಕ್ಕೆ ಆಯುಧ ಪೂಜೆಯ ಬಳಿಕ ಸಾಮೂಹಿಕ ಆಯುಧ ಪೂಜೆ ನಡೆಯಿತು. ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಆಯುಧಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಅರ್ಚಕರಾದ ಉದಯ ಭಟ್, ಹರೀಶ್ ಭಟ್, ಪ್ರಶಾಂತ್ ಭಟ್, ಕೊಯಿಲ ಪಶುಂಗೋಪನಾ ಕೇಂದ್ರದ ಡಾ. ಪ್ರಸನ್ನ ಹೆಬ್ಬಾರ್, ದೇವಳದ ಸಿಬ್ಬಂದಿಗಳಾದ ರವಿ, ಪದ್ಮನಾಭ, ಚಂದ್ರಶೇಖರ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.












