ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನ

0

30000 ಕ್ಕಿಂತಲೂ ಅಧಿಕ ಮಂದಿಗೆ ಅನ್ನಸಂತರ್ಪಣೆ

ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.10ರಿಂದ ಅ.20ರ ವಿಜಯದಶಮಿ ತನಕ ನವರಾತ್ರಿ ಉತ್ಸವ ನಡೆಯಿತು.ಅ.16 ರಂದು ಶುಕ್ರವಾರ
ಬೆಳಿಗ್ಗೆ 8:00 ರಿಂದ ಸಾಮೂಹಿಕ ಚಂಡಿಕಾಯಾಗ ಮದ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ.ಸಂಜೆ ನೃತ್ಯ ಕುಸುಮಾಂಜಲಿ‌ ನೃತ್ಯ ಪ್ರಸ್ತುತಿ ನೃತ್ಯ ನಿನಾದ ಕಡಬ ಆಲಂಕಾರು ಇವರಿಂದ ರಾತ್ರಿ ರಂಗಪೂಜೆ ಮಹಾಪೂಜೆ, ಗಣಪತಿ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.

ಅ.17 ರಂದು ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಯಕ್ಷಗಾನ ಪ್ರಸಂಗ ವಾಲಿಮೋಕ್ಷ ಸಂಯೋಜನೆ ಯಕ್ಷಮಿತ್ರರು ಶರವೂರು ಆಲಂಕಾರು
,ರಾತ್ರಿ ರಂಗಪೂಜೆ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಅ.18ರಂದು ದುರ್ಗಾಷ್ಟಮಿ ಬೆಳಿಗ್ಗೆ ಚಂಡಿಕಾಹೋಮ ಸೇವೆ ಶ್ರೀ ಎಲ್. ಮನೋಹರ ಬೆಂಗಳೂರು, ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ನೃತ್ಯಾರ್ಪಣೆ ನಾಟ್ಯರಾಧನ ನೃತ್ಯಾಲಯದ ವಿಧ್ಯಾರ್ಥಿಗಳಿಂದ ರಾತ್ರಿ ರಂಗಪೂಜೆ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಅ.19ರಂದು ಬೆಳಿಗ್ಗೆ ಮಹಾನವಮಿ ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಜೆ ಭಜನೆ ಮಾತೃಶ್ರೀ ಭಜನಾ ಮಂಡಳಿ ಕೊಂಡಾಡಿಕೊಪ್ಪ
ರಾತ್ರಿ ರಂಗಪೂಜೆ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಮಹಾಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಿತು.

ಅ.20ರಂದು ವಿಜಯದಶಮಿಯಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಅಕ್ಷರಾಭ್ಯಾಸ,ಶ್ರೀ ದುರ್ಗಾಂಬಾ ಕಲಾಸಂಗಮ ಶ್ರೀ ಕ್ಷೇತ್ರ ಶರವೂರು ಇವರಿಂದ ಯಕ್ಷಗಾನ ತಾಳಮದ್ದಳೆ ಭೀಷ್ಮ ವಿಜಯ
ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ನವಾನ್ನ ಸಂತರ್ಪಣೆ ನಡೆಯಿತು.



ನವರಾತ್ರಿ ಉತ್ಸವ ಸಂಧರ್ಭದಲ್ಲಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ,ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ,ದ.ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾಅಂಚನ್,ಕಡಬ ತಹಶಿಲ್ದಾರರಾದ ಗಣೇಶ್ ಸವಣೂರು, ಉಪತಹಶೀಲ್ದರಾದ ಗೋಪಾಲ.ಕೆ,ಖ್ಯಾತ ಕಬಡ್ಡಿ ಆಟಗಾರ ಪ್ರಶಾಂತ ರೈ ಕೈಕಾರ,ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರವೀಣಾ ಮರವಂಜೆ,ವಿಷ್ಣು ದಯಾಕಂಪೆನಿಯ ಸಿ.ಎ ವಿಷ್ಣುಮೂರ್ತಿ ಬೆಂಗಳೂರು,ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಗುರುಪ್ರಸಾದ ರಾಮಕುಂಜ, ಅತೂರು ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನೀರಾಜ್ ಕುಮಾರ್ ರೈ ,ಕೇರ್ಪಳ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ವಸಂತ ನಡುಬೈಲ್ ಸೇರಿದಂತೆ ಹಲವು ಗಣ್ಯರು,ವಿವಿಧ ಸಂಘಸಂಸ್ಥೆಗಳ ಅಧ್ಯಕ್ಷರು,ಪದಾಧಿಕಾರಿಗಳು ಊರಪರವೂರ ಸಾವಿರಾರು ಮಂದಿ ಭಕ್ತಾಧಿಗಳು ಶ್ರೀ ಕ್ಷೇತ್ರ ಶರವೂರಿಗೆ ಅಗಮಿಸಿ ಶ್ರೀ ದೇವಿಯ ಗಂಧಪ್ರಸಾದ ಸ್ವೀಕರಿಸಿ ವಿವಿಧ ಸೇವೆಗಳನ್ನು ಸಮರ್ಪಿಸಿ ಅಂದಾಜು ಮೂವತ್ತು ಸಾವಿರಕ್ಕಿಂತಲೂ ಅಧಿಕ ಮಂದಿ ಭಕ್ತಾಧಿಗಳು ಹಗಲು ,ರಾತ್ರಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.



ಈ ಸಂಧರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ, ಪ್ರವಿತ್ರಪಾಣಿ ಹರೀಶ ಆಚಾರ್ಯ ನಗ್ರಿಗುತ್ತು,ಮತ್ತು ಅರ್ಚಕ ವರ್ಗ, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಹೇಮಂತ್ ರೈ ಮನವಳಿಕೆಗುತ್ತು, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಹರಿಪ್ರಸಾದ ಉಪಾಧ್ಯಾಯ, ರಾಧಾಕೃಷ್ಣ ರೈ ಪರಾರಿಗುತ್ತು, ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ವಿಠಲ ರೈ, ವಾಸಪ್ಪ ಗೌಡ, ಮೋಹನ ಶರವೂರು, ಪುಷ್ಪಲತಾ ಕೆ, ರೋಹಿಣಿ ಬಿ.ಎನ್ ಗೌರವ ಸದಸ್ಯರಾದ ದಾಮೋದರ ಗೌಡ ಶರವೂರು, ಶ್ರೀ ದುರ್ಗಾಂಬಾ ಕಲಾ ಸಂಗಮದ ಅಧ್ಯಕ್ಷರಾದ ಚಂದ್ರದೇವಾಡಿಗ, ಶ್ರೀ ಆದಿಶಕ್ತಿ ಭಜನಾ ಮಂಡಳಿ ಅಧ್ಯಕ್ಷರಾದ ನೋಣಯ್ಯ ಕೆದಿಲ, ಆಲಂಕಾರ ಸಮಿತಿಯ ಅಧ್ಯಕ್ಷರಾದ ಗಣರಾಜ್ ಆಲಂಕಾರು, ಸ್ವಯಂ ಸೇವಾ ಸಮಿತಿಯ ಅಧ್ಯಕ್ಷರಾದ ಚೆನ್ನಪ್ಪ ಗೌಡ ಶರವೂರು, ಉತ್ಸವ ಸಮಿತಿ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಪ್ರಭು, ಮಾತೃಶಕ್ತಿ ಸಂಘದ ಅಧ್ಯಕ್ಷರಾದ ಸರೋಜ ಮಾಯಿಲ್ಗ ಸೇರಿದಂತೆ ಸದಸ್ಯರು ದೇವಸ್ಥಾನದ ಸಿಬ್ಬಂದಿ ವರ್ಗ, ಸೀಮೆಯ ಹತ್ತು ಸಮಸ್ತರು,ಕಾರ್ಯಕರ್ತರು ಸಹಕರಿಸಿದರು.

LEAVE A REPLY

Please enter your comment!
Please enter your name here