ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನ ದಲ್ಲಿ ಸಂಭ್ರಮದ ನವರಾತ್ರಿ‌ ಉತ್ಸವ

0

ವಿಟ್ಲ: ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನ ದಲ್ಲಿ ಅ. 11 ರಿಂದ ಅ. 19 ರವರೆಗೆ ನವರಾತ್ರಿ ಮಹೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು‌.

ನವರಾತ್ರಿ‌ಮಹೋತ್ಸವದ ಅಂಗವಾಗಿ ಸೆ.19ರಂದು ಬೆಳಿಗ್ಗೆ ದೀಪ ಪ್ರತಿಷ್ಠೆ, ಗಣಪತಿ ಹೋಮ, ನರಸಿಂಹ ಮಂಡಲ ಪೂಜೆ, ಕಲಶ ಸ್ನಾನ ಹಾಗೂ ನಿತ್ಯ ಪೂಜೆ.ಮಧ್ಯಾಹ್ನ ಮಹಾಪೂಜೆ, ಶ್ರೀದೇವಿ ಉತ್ಸವ ಬಲಿ, ದರ್ಶನ ಬಲಿ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ ಆಯುಧ ಪೂಜೆ ನಡೆಯಿತು. ರಾತ್ರಿ ಮಹಾಪೂಜೆ, ಶ್ರೀದೇವಿಯ ಉತ್ಸವ ಬಲಿ, ದರ್ಶನ ಬಲಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೇವಿಯ ವಿಶೇಷ ದೊಂದಿ ಸೇವೆ ಮತ್ತು ಶಕ್ತಿ ಪೂಜೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಚಿರಂಜೀವಿ ಯಕ್ಷಗಾನ ಕಲಾಸಂಘ ಕುಂಬಾಲುಮೂಲೆಇವರಿಂದ “ಪರಕೆದ ಗಗ್ಗರ” ಎಂಬ ತುಳು ಯಕ್ಷಗಾನ ಬಯಲಾಟ ನಡೆಯಿತು.

LEAVE A REPLY

Please enter your comment!
Please enter your name here