ಶ್ರೀಧಾಮ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀಗಳಿಂದ ಮಧುಕರಿ – ಧಾರ್ಮಿಕ‌ ಸಭೆ

0

ವಿಟ್ಲ: ಜೀವನದಲ್ಲಿ ಭಕ್ತಿಮಾರ್ಗ ಅತೀ ಅಗತ್ಯ. ಆ ಮೂಲಕ ಎಲ್ಲವನ್ನೂ ಸಾಧಿಸಲು ಸಾಧ್ಯ.ನಾವು ಮಾಡಿದ ಪುಣ್ಯದ ಕಾರ್ಯಗಳು ನಮ್ಮನ್ನು ಕಾಪಾಡುತ್ತದೆ. ಸಮಾಜದ ಪ್ರತಿಯೋರ್ವರರ ಏಳಿಗೆಗೆ ಪ್ರತಿದಿನ ಪ್ರಾರ್ಥಿಸುವ ಕ್ಷೇತ್ರ ಇದಾಗಿದೆ. ಹಿರಿಯರಿಗೆ ಗೌರವ ನೀಡುವ ಕೆಲಸ ಎಲ್ಲರಿಂದಲೂ ಆಗಲಿ.ಸವಾಲುಗಳನ್ನು ಎದುರಿಸಿ ನಿಲ್ಲುವ ಮನಸ್ಸು ನಮ್ಮದಾಗಬೇಕು. ಜೀವನದಲ್ಲಿ ಸತ್ಕರ್ಮಗಳನ್ನು ಮಾಡುವ ಕೆಲಸ ನಮ್ಮದಾಗಲಿ ಎಂದು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿರವರು ಹೇಳಿದರು.

ಶ್ರೀಧಾಮ ಮಾಣಿಲ ಶ್ರೀ ದುರ್ಗಾಮಾಹಾಲಕ್ಷ್ಮೀ ಕ್ಷೇತ್ರದಲ್ಲಿ ಶರನ್ನವರಾತ್ರಿ ಪ್ರಯಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ‌ ಅವರು ಆಶೀರ್ವಚನ‌ ನೀಡಿದರು.

ಇದೇ ಸಂದರ್ಭದಲ್ಲಿ ಭಾರತೀಯ ಸೇನೆಯ ನಿವೃತ್ತ ಸುಭೇದಾರ್ ಚಂದ್ರಶೇಖರ ಪೂಜಾರಿ ಕಲ್ಲಡ್ಕ ಪೆರಯವಾಯಿರವರನ್ನು ಸನ್ಮಾನಿಸಲಾಯಿತು.

ಸಂಸದ ಕ್ಯಾ. ಬ್ರಿಜೇಶ್ ಚೌಟರವರು ಮಾತನಾಡಿ ನಮ್ಮ ಜಿಲ್ಲೆಯ‌ ಹಿಂದೂ ಸಮಾಜ ವಿಶೇಷ ರೀತಿಯಲ್ಲಿ ಬದುಕುತ್ತಿದೆ. ಜಾತಿಯನ್ನು ಮೀರಿ ಹಿಂದೂ ಸಮಾಜ ಬೆಳೆದಿದೆ. ಶ್ರೀಧಾಮಗಳಂತ ಕ್ಷೇತ್ರದಿಂದಾಗಿ ಇಂದು ಹಿಂದೂ ಸಮಾಜ ಗಟ್ಟಿಯಾಗಿ ಬೆಳೆದುನಿಂತಿದೆ. ಜನರನ್ನು ಜಾತಿ ಆಧಾರದಲ್ಲಿ ಒಡೆಯುವ ಪ್ರಯತ್ನವಾಗುತ್ತಿದೆ‌. ಶ್ರೀಧಾಮದ ಏಳಿಗೆಯಲ್ಲಿ ನಮ್ಮಿಂದಾಗುವ ಸಹಕಾರವನ್ನು ನಿರಂತರವಾಗಿ ನೀಡಲಾಗುವುದು ಎಂದರು.

ವೇದಿಕೆಯಲ್ಲಿ ಬೆಂಗಳೂರಿನ ದೂರದರ್ಶನದ ಅಪರ ಮಹಾನಿರ್ದೇಶಕರಾದ ನಾಡೋಜ ಡಾ.ಮಹೇಶ್ ಜೋಶಿ, ಬೆಂಗಳೂರು ತುಳುಕೂಟದ ಅಧ್ಯಕ್ಷರಾದ ದಿನೇಶ್ ಹೆಗ್ಡೆ, ಉದ್ಯಮಿ ಲಕ್ಷ್ಮಣ ಗೌಡ ಕೆ.ಜಿ.ಎಫ್., ಜಿಲ್ಲಾ ಮೂರ್ತೆದಾರರ ಸಹಕಾರ ಸಂಘದ ಅಧ್ಯಕ್ಷರಾದ ಸಂಜೀವ ಪೂಜಾರಿ ಬಿರ್ವ ಸೆಂಟರ್, ಪ್ರಮುಖರಾದ ಗೋವಿಂದರಾಜ್ ಹೊಸಕೋಟೆ, ಮಂಜುನಾಥ ಭಂಡಾರಿ, ಬಿಜೆಪಿ ವಕ್ತಾರೆ ಕಾಂತಿ ಶೆಟ್ಟಿ, ಈಶ್ವರ ಕುಲಾಲ್, ಪ್ರತಿಷ್ಠಾನದ ಅಧ್ಯಕ್ಷರಾದ ಮೋನಪ್ಪ ಭಂಡಾರಿ ಕಲೆಕ್ಕಾರುಗುತ್ತು, ಟ್ರಸ್ಟಿಗಳಾದ ಪುರುಷೋತ್ತಮ ಚೇಂಡ್ಲ
ರೇವತಿ ಪೆರ್ನೆ, ದೇವಪ್ಪ ಮೂಲ್ಯ ಪಂಜಿಕಲ್ಲು ಉಮೇಶ್ ಬಂಗೇರ,ಮಹೇಶ್ ಮೂಲ್ಯ, ಚಂದ್ರಶೇಖರ ಮೂಲ್ಯ ಮಹಿಳಾ ಸಮಿತಿ ಅಧ್ಯಕ್ಷೆ ವನಿತಾ ವಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ನಳಿನಿ ಸನ್ಮಾನ ಪತ್ರ ವಾಚಿಸಿದರು. ತಾರನಾಥ ಕೊಟ್ಟಾರಿ ಸ್ವಾಗತಿಸಿದರು. ಹೆಚ್ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here